ಹೊಸ್ಟನ್‌ನಲ್ಲಿರುವ ಚೀನಾದ ವಾಣಿಜ್ಯ ರಾಯಭಾರಿ ಕಛೇರಿ ಬೇಹುಗರಿಕೆಯ ಮುಖ್ಯಕೇಂದ್ರವಾಗಿತ್ತು ! – ಅಮೇರಿಕಾ

ಇಂತಹ ಬೇಹುಗಾರಿಕೆಯನ್ನು ಮಾಡುವ ಚೀನಾದ ರಾಯಭಾರಿ ಕಛೇರಿಯನ್ನು ಭಾರತದಿಂದ ಹೊರದಬ್ಬುವುದು ಅಪೇಕ್ಷಿತವಿದೆ !

ವಾಶಿಂಗಟನ್ – ಹೊಸ್ಟನ್‌ನಲ್ಲಿಯ ಚೀನಾದ ವಾಣಿಜ್ಯ ರಾಯಭಾರಿ ಕಛೇರಿಯು ಬೇಹುಗರಿಕೆಯ ಮುಖ್ಯಕೇಂದ್ರವಾಗಿತ್ತು. ಈ ರಾಯಭಾರಿ ಕಛೇರಿಯಿಂದ ಬೆಹುಗರಿಕೆಯೊಂದಿಗೆ ಬೌದ್ಧಿಕ ಸಂಪತ್ತಿನ ಕಳ್ಳತನವನ್ನೂ ಮಾಡಲಾಗುತ್ತಿತ್ತು. ಆದ್ದರಿಂದ ನಾವು ಅದನ್ನು ಮುಚ್ಚುವ ನಿರ್ಧಾರಕ್ಕೆ ಬಂದೆವು, ಎಂದು ಅಮೇರಿಕಾದ ವಿದೇಶಾಂಗ ಸಚಿವ ಮೈಕ್ ಪಾಂಪಿಒ ಮಾಹಿತಿ ನೀಡಿದರು. ಅಂತರರಾಷ್ಟ್ರೀಯ ಕಾನೂನ್ನು ಗಮನದಲ್ಲಿಟ್ಟುಕೊಂಡು ನಾವು ಮುಂದಿನ ೮ ವರ್ಷಗಳಿಗಾಗಿ ಚೀನಾ ಸಾಗರದ ಮೇಲೆ ಗಮನ ಕೇಂದ್ರೀಕರಿಸಿದ್ದೇವೆ, ಎಂದು ಸಹ ಅವರು ಹೇಳಿದರು.

ಹೀಗೆ ಮಾಡದಿದ್ದಲ್ಲಿ ನಮ್ಮ ಮುಂದಿನ ಪೀಳಿಗೆ ಚೀನಾದ ಅಧೀನದಲ್ಲಿಯೇ ಬದುಕಬೇಕಾಗಬಹುದು !
ಪಾಂಪಿಒ ತಮ್ಮ ಮಾತನ್ನು ಮುಂದುವರೆಸುತ್ತ, ‘ಒಂದು ವೇಳೆ ನಾವು ಚೀನಾದ ಎದುರು ಮಂಡಿಯೂರಿದರೆ ನಾಳೆ ನಮ್ಮ ಪಿಳಿಗೆಯು ಅವರ ಅಧೀನದಲ್ಲಿದ್ದು ಬದುಕ ಬೇಕಾಗುವುದು. ಚೀನಾದೊಂದಿಗೆ ನಾವೊಬ್ಬರೇ ಹೋರಾಡಲು ಸಾಧ್ಯವಿಲ್ಲ. ಅದನ್ನು ಎದುರಿಸಲು ಜಗತ್ತಿನಾದ್ಯಂತ ಸಮಾನ ವಿಚಾರವುಳ್ಳ ದೇಶಗಳು, ‘ಜೀ-೨೦ ರಾಷ್ಟ್ರಗಳು’, ಸಂಯುಕ್ತ ರಾಷ್ಟ್ರಗಳು ಹಾಗೂ ನಾಟೊಗಳು ಒಂದು ವೇದಿಕೆಗೆ ಮೇಲೆ ಬರಬೇಕು. ಅಂತರರಾಷ್ಟ್ರೀಯ ವ್ಯಾಪಾರವನ್ನು ವಿಸ್ತರಿಸುವ ಆಸೆಯಿಂದ ಚೀನಾವು ಜಗತ್ತಿನ ಎಲ್ಲ ಪ್ರಮುಖ ಜಲಮಾರ್ಗಗಳನ್ನು ಅಸುರಕ್ಷಿತಗೊಳಿಸಿದೆ” ಎಂದು ಹೇಳಿದರು.