ಸನಾತನ ಸಂಸ್ಥೆಯ ವಿವಿಧ ಆಶ್ರಮಗಳು ಹಾಗೂ ಸೇವಾಕೇಂದ್ರಗಳಲ್ಲಿ ‘ಸೌರಶಕ್ತಿ ಘಟಕವನ್ನು ಅಳವಡಿಸಲು ಧನರೂಪದಲ್ಲಿ ಅಥವಾ ವಸ್ತುರೂಪದಲ್ಲಿ ಸಹಾಯ ಮಾಡಿರಿ !
೧. ಆಪತ್ಕಾಲದ ಪೂರ್ವತಯಾರಿಯೆಂದು ಭಾರತದಾದ್ಯಂತದ ಸನಾತನದ ಆಶ್ರಮಗಳು ಮತ್ತು ಸೇವಾಕೇಂದ್ರಗಳಲ್ಲಿ ‘ಸೌರಶಕ್ತಿ ಘಟಕವನ್ನು ಅಳವಡಿಸಬೇಕೆಂಬ ಸಂಸ್ಥೆಯ ಆಶಯ !
‘ವಿದ್ಯುತ್ ಇದು ಮಾನವೀ ಜೀವನದ ಜೀವನಾವಶ್ಯಕ ಘಟಕವಾಗಿದೆ. ಆಪತ್ಕಾಲೀನ ಸ್ಥಿತಿಯಲ್ಲಿ ವಿದ್ಯುತ್ ಅಭಾವದಿಂದ ಎಲ್ಲರಿಗೂ ಅನಾನುಕೂಲವಾಗುತ್ತದೆ. ಇಂತಹ ಸಮಯದಲ್ಲಿ ಸೌರಶಕ್ತಿಯಿಂದ ನಡೆಯುವ ಉಪಕರಣಗಳನ್ನು ಉಪಯೋಗಿಸುವುದು ಆವಶ್ಯಕ ವಿರುತ್ತದೆ. ‘ಆಪತ್ಕಾಲದ ಸ್ಥಿತಿಯು ಯಾವಾಗ ಉದ್ಭವಿಸಲಿದೆ ? ಎಂದು ಹೇಳಲು ಬರುವುದಿಲ್ಲ. ಆದುದರಿಂದ ಆಪತ್ಕಾಲದ ಪೂರ್ವತಯಾರಿಯೆಂದು ಭಾರತದಾದ್ಯಂತದ ಸನಾತನದ ಆಶ್ರಮಗಳು ಹಾಗೂ ಸೇವಾಕೇಂದ್ರಗಳಲ್ಲಿ ‘ಸೌರಶಕ್ತಿಯ ಯೋಜನೆಯನ್ನು ಅಳವಡಿಸುವ ಆಶಯವು ಸಂಸ್ಥೆಗಿದೆ. ಲಭ್ಯವಿರುವ ಮೇಲ್ಛಾವಣಿಯನ್ನು ಉಪಯೋಗಿಸಿ ಈ ಯಂತ್ರೋಪಕರಣವನ್ನು ತಕ್ಷಣ ಅಳವಡಿಸಲಿಕ್ಕಿದೆ.
೨. ಸೌರಶಕ್ತಿಯನ್ನು ಉಪಯೋಗಿಸುವುದರಿಂದಾಗುವ ಲಾಭಗಳು
ಸೌರಶಕ್ತಿ ಯೋಜನೆಯನ್ನು ಅಳವಡಿಸುವುದೆಂದರೆ ಒಂದು ರೀತಿಯ ಜೀವನಮಾನದ ಬಂಡವಾಳದಂತೆ (‘ಲೈಫ್ ಟೈಮ್ ಇನ್ವೆಸ್ಟಮೆಂಟ್) ಆಗಿದೆ. ಈ ಶಕ್ತಿಯಿಂದ ದೊಡ್ಡ ಪ್ರಮಾಣದಲ್ಲಿ ವಿದ್ಯುತ್ ಉಳಿತಾಯವಾಗುತ್ತದೆ. ಈ ಯಂತ್ರೋಪಕರಣವನ್ನು ಅಳವಡಿಸಿ ಸಂಸ್ಥೆಯು ಆಪತ್ಕಾಲದ ದೃಷ್ಟಿಯಿಂದ ಸ್ವಾವಲಂಬಿಯಾಗಬೇಕೆಂದು ಪ್ರಯತ್ನಿಸುತ್ತಿದೆ. ಇದರಿಂದ ಸಂಸ್ಥೆಯ ರಾಷ್ಟ್ರರಕ್ಷಣೆ ಮತ್ತು ಧರ್ಮಜಾಗೃತಿಯ ಕಾರ್ಯವು ಮುಂಬರುವ ಕಾಲದಲ್ಲಿಯೂ ನಿರಾತಂಕವಾಗಿ ಮುಂದುವರಿಯಬಲ್ಲದು.
೩. ಸನಾತನದ ಆಶ್ರಮಗಳಲ್ಲಿ ಸೌರಶಕ್ತಿ ಯೋಜನೆಯನ್ನು ಎರಡು ಹಂತಗಳಲ್ಲಿ ಅಳವಡಿಸಲಾಗುತ್ತಿದ್ದು ಅದಕ್ಕಾಗಿ ಸುಮಾರು ಎರಡುವರೆ ಕೋಟಿ ರೂಪಾಯಿಗಳು ಖರ್ಚು ಬರಲಿದೆ !
ಕೆಲವು ಹಿತಚಿಂತಕರು ಈ ಯೋಜನೆಗೆ ಸಹಾಯ ಮಾಡುವ ಇಚ್ಛೆಯನ್ನು ಈ ಮೊದಲು ಸಹ ವ್ಯಕ್ತಪಡಿಸಿದ್ದಾರೆ. ಒಟ್ಟಾರೆ ಎಲ್ಲೆಡೆಗಳಲ್ಲಿರುವ ಆಶ್ರಮಗಳು ಹಾಗೂ ಸೇವಾಕೇಂದ್ರಗಳ ಚಿಕ್ಕ-ದೊಡ್ಡ ಪ್ರಸ್ತಾಪಿತ ಯೋಜನೆಗಳ ವ್ಯಾಪ್ತಿಯ ವಿಚಾರ ಮಾಡಿದಾಗ ದೊಡ್ಡ ಪ್ರಮಾಣದಲ್ಲಿ ನಿಧಿಯ ಆವಶ್ಯಕತೆಯಿದೆ. ಮೊದಲ ಹಂತದಲ್ಲಿ ಒಟ್ಟು ೧೫೦ ‘ಕಿಲೋವ್ಯಾಟ್ ಕ್ಷಮತೆಯುಳ್ಳ ಸೌರಶಕ್ತಿ ಘಟಕವನ್ನು ಸ್ಥಾಪಿಸಲಾಗುವುದು. ಈ ಘಟಕವನ್ನು ‘ಹೈಬ್ರಿಡ್ (ಬ್ಯಾಟರಿಯಿಂದ ಕಾರ್ಯಾಚರಿಸುವ, ಹಾಗೂ ಸೂರ್ಯಪ್ರಕಾಶವು ಇಲ್ಲದಿರುವಾಗ ವಿದ್ಯುತ್ತಿನಿಂದ ಕಾರ್ಯಾಚರಿಸುವ ಘಟಕ) ಪದ್ಧತಿಯಲ್ಲಿ ಸ್ಥಾಪಿಸಲಾಗುತ್ತಿದ್ದು ಅದರ ಅಂದಾಜು ಖರ್ಚು ಒಂದುವರೆ ಕೋಟಿ ರೂಪಾಯಿ ಇದೆ.
ಎರಡನೇ ಹಂತದಲ್ಲಿ ಸ್ಥಳಾವಕಾಶಕ್ಕನುಸಾರ ೧೦೦ ‘ಕಿಲೋವ್ಯಾಟ್ ಕ್ಷಮತೆಯ ಯೋಜನೆಯನ್ನು ಅಳವಡಿಸಲಾಗವುದು ಮತ್ತು ಅದಕ್ಕಾಗಿ ೧ ಕೋಟಿ ರೂಪಾಯಿಗಳು ಖರ್ಚು ಬರಲಿದೆ. ಎಷ್ಟು ‘ಕಿಲೋವ್ಯಾಟ್ ಕ್ಷಮತೆಯ ವ್ಯವಸ್ಥೆ ಮಾಡಲಿಕ್ಕಿದೆಯೋ, ಅಷ್ಟು ಲಕ್ಷ ರೂಪಾಯಿಗಳ ಖರ್ಚು ಬರುತ್ತದೆ. ಅಂದರೆ ೧ ‘ಕಿಲೋವ್ಯಾಟ್ ಕ್ಷಮತೆಯ ಯಂತ್ರೋಪಕರಣವನ್ನು ಅಳವಡಿಸಲು, ೧ ಲಕ್ಷ ರೂಪಾಯಿಗಳ ಖರ್ಚು ಬರುತ್ತದೆ. ವಾಚಕರು, ಹಿತಚಿಂತಕರು ಹಾಗೂ ಧರ್ಮಪ್ರೇಮಿಗಳು ಮೇಲಿನ ಎರಡೂ ಹಂತಗಳಲ್ಲಿ ಅಳವಡಿಸಲಾಗುವ ‘ಸೌರಶಕ್ತಿಯ ಘಟಕಗಳಿಗಾಗಿ ತಮ್ಮ ಕ್ಷಮತೆಗನುಸಾರ ಧನರೂಪದಲ್ಲಿ ಸಹಾಯ ಮಾಡಬಹುದು.
೪. ‘ಸೌರಶಕ್ತಿಯ ಘಟಕಕ್ಕಾಗಿ ಸೌರ ಉಪಕರಣಗಳ ಸಹ ಆವಶ್ಯಕತೆ !
ಈ ಘಟಕವನ್ನು ಅಳವಡಿಸಲು ‘ವಿಕ್ರಮ (Vikram), ‘ವಾರಿ (WAAREE), ‘ಅದಾನಿ (Adani), ‘ಸೋಲರೆಡ್ಜ್ (Solaredge), ‘ಟಾಟಾ ಪವರ್ ಸೋಲಾರ್ (Tata Powder Solar) ಮುಂತಾದ ಮಾನ್ಯತೆ ಪಡೆದ ಕಂಪನಿಗಳ ಸೌರ ಉಪಕರಣಗಳ ಸಹ (‘ಪ್ಯಾನಲ್ಸ್, ‘ಇನ್ವರ್ಟರ್, ‘ಬ್ಯಾಟರಿ, ಕೇಬಲ್ಸ್ ಮುಂತಾದವುಗಳ) ಆವಶ್ಯಕತೆಯಿದೆ.
‘ಸೌರಶಕ್ತಿಯ ಘಟಕವನ್ನು ಅಳವಡಿಸಲು ಸೌರ ಉಪಕರಣಗಳನ್ನು ಒದಗಿಸಲು ಅಥವಾ ಧನರೂಪದಲ್ಲಿ ಸಹಾಯ ಮಾಡಲು ಇಚ್ಛಿಸುವ ವಾಚಕರು, ಹಿತಚಿಂತಕರು ಹಾಗೂ ಧರ್ಮಪ್ರೇಮಿಗಳು ಕೆಳಗಿನ ಕ್ರಮಾಂಕಕ್ಕೆ ಸಂಪರ್ಕಿಸಬೇಕು.
ಹೆಸರು ಮತ್ತು ಸಂಪರ್ಕ ಕ್ರಮಾಂಕ
ಸೌ. ಭಾಗ್ಯಶ್ರೀ ಸಾವಂತ – 7058885610
ಗಣಕೀಯ ವಿಳಾಸ : sanatan.sanstha2025@gmail.com
ಅಂಚೆ ವಿಳಾಸ : ಸೌ. ಭಾಗ್ಯಶ್ರೀ ಸಾವಂತ, C/o ‘ಸನಾತನ ಆಶ್ರಮ, 24/B, ರಾಮನಾಥಿ, ಬಾಂದಿವಡೆ, ಫೋಂಡಾ. ಗೋವಾ. ಪಿನ್ – 403401
ಇದಕ್ಕಾಗಿ ಧನಾದೇಶ(ಚೆಕ್)ವನ್ನು ನೀಡುವುದಿದ್ದರೆ ಅದನ್ನು ‘ಸನಾತನ ಸಂಸ್ಥೆಯ ಹೆಸರಿಗೆ ಕೊಡಬೇಕು.
ರಾಷ್ಟ್ರರಕ್ಷಣೆ ಮತ್ತು ಧರ್ಮಜಾಗೃತಿ ಇವುಗಳ ನಿಸ್ವಾರ್ಥ ಕಾರ್ಯ ಮಾಡುವ ಸನಾತನ ಸಂಸ್ಥೆಯ ಆಶ್ರಮದಲ್ಲಿ ‘ಸೌರಶಕ್ತಿ ಯೋಜನೆಯನ್ನು ಅಳವಡಿಸಲು ದಯ ಮಾಡಿ ಸಹಾಯ ಮಾಡಿ ಈ ಕಾರ್ಯದಲ್ಲಿ ಯಥಾಶಕ್ತಿ ಪಾಲ್ಗೊಳ್ಳಿ !
– ಶ್ರೀ. ವೀರೇಂದ್ರ ಮರಾಠೆ, ವ್ಯವಸ್ಥಾಪಕೀಯ ವಿಶ್ವಸ್ತರು, ಸನಾತನ ಸಂಸ್ಥೆ. (೧೩.೭.೨೦೨೦)
ಭಾರತದಾದ್ಯಂತವಿರುವ ಸೌರಶಕ್ತಿ ಔದ್ಯೋಗಿಕ ೧ ‘ಕಿಲೋವ್ಯಾಟ್ ನಿಂದ ೨೫ ‘ಕಿಲೋವ್ಯಾಟ್ವರೆಗಿನ ಕ್ಷಮತೆಯಿರುವ ಸ್ವತಂತ್ರ ಸೌರಯಂತ್ರೋಪಕರಣವನ್ನು ಆಶ್ರಮದಲ್ಲಿ ಉಚಿತ ಅಥವಾ ಕಡಿಮೆ ಬೆಲೆಯಲ್ಲಿ ಅಳವಡಿಸಿ (‘ಇನ್‌ಸ್ಟಾಲ್) ಕೊಟ್ಟು ಸನಾತನದ ರಾಷ್ಟ್ರ ಮತ್ತು ಧರ್ಮದ ಕಾರ್ಯದಲ್ಲಿ ಕೈಜೋಡಿಸಬಹುದು.