ತ್ರಾವಣಕೋರ ದೇವಸ್ವಮ್ ಮಂಡಳಿಗೆ ಸಂಬಂಧಿಸಿದ ಶಾಲೆಗಳಲ್ಲಿ ಅರಬಿ ಭಾಷೆ ಕಲಿಸಲು ಶಿಕ್ಷಕರ ನೇಮಕ

  • ಸಂಸ್ಕೃತ ಕಲಿಸಲು ಮಾತ್ರ ಒಬ್ಬ ಶಿಕ್ಷಕರ ನೇಮಕವೂ ಇಲ್ಲ !

  • ಕೇರಳದಲ್ಲಿ ಕಮ್ಯುನಿಸ್ಟ್ ಸರಕಾರದ ವಶದಲ್ಲಿರುವ ದೇವಸ್ಥಾನಗಳಲ್ಲಿ ಇದನ್ನು ಹೊರತುಪಡಿಸಿ ಬೇರೇನು ನಡೆಯಬಹುದು ? ಇಂತಹ ಘಟನೆಗಳನ್ನು ತಡೆಗಟ್ಟಲು ಹಿಂದೂ ರಾಷ್ಟ್ರ ಬಿಟ್ಟರೇ ಬೇರೆ ಪರ್ಯಾಯ ಇಲ್ಲ !

ತಿರುವನಂತಪುರಮ್ (ಕೇರಳ) – ತ್ರಾವಣಕೊರ ದೇವಸ್ವಮ್ ಮಂಡಳಿಯ ವ್ಯಾಪ್ತಿಗೆ ಬರುವ ಶಾಲೆಗಳಲ್ಲಿ ಅರಬಿ ಭಾಷೆ ಕಲಿಸಲು ಮುಸಲ್ಮಾನ ಶಿಕ್ಷಕರ ನೇಮಕ ಮಾಡಲಾಗುತ್ತಿದೆ. ಇಂತಹ ೪ ಶಿಕ್ಷಕರ ಪಟ್ಟಿ ಪ್ರಕಟಿಸಲಾಗಿದೆ. ಇದರಲ್ಲಿ ಶಮಿರಾ, ಬುಶರಾ ಬೇಗಮ್, ಮುಬಾಶ ಹಾಗೂ ಸುಮಯ್ಯಾ ಮಹಮ್ಮದ ಇವರ ಸಮಾವೇಶ ಇದೆ. ಮಲ್ಯಾಳಮ್, ಹಿಂದಿ, ಸಂಗೀತ, ಗಣಿತ ಹಾಗೂ ಸಮಾಜ ಶಾಸ್ತ್ರ ಇವುಗಳನ್ನು ಕಲಿಸಲು ಶಿಕ್ಷಕರನ್ನು ನೇಮಿಸಲಾಗಿದೆ; ಆದರೆ ಸಂಸ್ಕೃತ ಭಾಷೆ ಕಲಿಸಲು ಯಾರನ್ನೂ ನೇಮಿಸಿಲ್ಲ. ಈ ಎಲ್ಲ ವಿಷಯಗಳಿಗೆ ೫೭ ಶಿಕ್ಷಕರ ಪಟ್ಟಿ ಪ್ರಕಟಿಸಲಾಗಿದೆ.