ಸಾಧಕರಿಗಾಗಿ ಮಹತ್ವದ ಸೂಚನೆ

ಕರೋನಾದ ಹಾವಳಿಯಿಂದ ಸುರಕ್ಷಿತವಾಗಿರಲು ನೀಡಿದ ಸೂಚನೆಗಳನ್ನು ಗಾಂಭೀರ್ಯದಿಂದ ಹಾಗೂ ಕಟ್ಟುನಿಟ್ಟಾಗಿ ಪಾಲಿಸಿ ಹಿಂದೂ ರಾಷ್ಟ್ರಕ್ಕಾಗಿ ಪಾತ್ರರಾಗಿ !

ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ

ಕೊರೋನಾದಿಂದಾಗಿ ಎಲ್ಲೆಡೆ ಭಯಾನಕ ಸ್ಥಿತಿ ನಿರ್ಮಾಣವಾಗಿದ್ದರಿಂದ ಸುರಕ್ಷತೆಯ ಸೂಚನೆಗಳನ್ನು ಪಾಲಿಸುವುದು ಅನಿವಾರ್ಯವಾಗಿದೆ !

‘ಸದ್ಯ ಭಾರತದಲ್ಲಿ ‘ಕೊರೋನಾ’ ವಿಷಾಣುವಿನ ಸೋಂಕು ದೊಡ್ಡ ಪ್ರಮಾಣದಲ್ಲಿ ಹೆಚ್ಚುತ್ತಿದೆ. ಸಂಚಾರ ಸಾರಿಗೆ ನಿರ್ಬಂಧದ ನಿಯಮಗಳು ಸಡಿಲಗೊಂಡ ನಂತರ ಈ ವಿಷಾಣುವಿನ ಸೋಂಕು ವೇಗದಿಂದ ಹರಡುತ್ತಿದೆ. ಇದಕ್ಕೂ ಮೊದಲು ಯಾವ ರಾಜ್ಯಗಳನ್ನು ಅಥವಾ ಜಿಲ್ಲೆಗಳನ್ನು ‘ಕೊರೋನಾಮುಕ್ತ’ವೆಂದು ಘೋಷಿಸಲಾಗಿತ್ತೋ, ಅಲ್ಲಿ ಕೊರೋನಾ ರೋಗಿಗಳ ಸಂಚಾರ ಹೆಚ್ಚಾದುದರಿಂದ ರೋಗಿಗಳ ಸಂಖ್ಯೆಯೂ ವೇಗವಾಗಿ ಹೆಚ್ಚಾಗುತ್ತಿದೆ. ಕೊರೋನಾದಿಂದ ಎಲ್ಲ ಕಡೆ ಭಯಾನಕ ಸ್ಥಿತಿ ನಿರ್ಮಾಣವಾಗಿರುವುದರಿಂದ ಎಲ್ಲರೂ ಸರಕಾರ ಅಥವಾ ಆಡಳಿತವು ನೀಡಿದ ಎಲ್ಲ ಸೂಚನೆಗಳನ್ನು ಗಾಂಭೀರ್ಯದಿಂದ ಮತ್ತು ಕಟ್ಟುನಿಟ್ಟಾಗಿ ಪಾಲಿಸುವುದು ಆವಶ್ಯಕವಾಗಿದೆ.

ಸಾಧಕರೇ, ಸದ್ಯದ ಸ್ಥಿತಿಯಲ್ಲಿ ಮುಂದಿನ ಸೂಚನೆಗಳನ್ನು ಪಾಲಿಸಲೇ ಬೇಕು

ಅ. ಅತ್ಯಾವಶ್ಯಕವಾಗಿದ್ದರೆ ಮಾತ್ರ ಮನೆಯಿಂದ ಹೊರಗೆ ಹೋಗಬೇಕು, ಸೇವೆಗಾಗಿ ಹೊರಗೆ ಹೋಗಲು ಹೇಳಿದ್ದರೆ, ಆ ಸಾಧಕರನ್ನು ಬಿಟ್ಟು ಬೇರೆ ಯಾರೂ ಸೇವೆಗಾಗಿ ಹೊರಗೆ ಹೋಗಬಾರದು, ೧೦ ವರ್ಷಗಳಿಗಿಂತ ಕಡಿಮೆ ವಯಸ್ಸಿನ ಮತ್ತು ೬೫ ವರ್ಷಗಳಿಗಿಂತ ಹೆಚ್ಚು ವಯಸ್ಸಿನ ವ್ಯಕ್ತಿಗಳು ಮನೆಯ ಹೊರಗೆ ಹೋಗಬಾರದು.

ಆ. ಪರಸ್ಪರರ ಬಳಿ ಅನಾವಶ್ಯಕವಾಗಿ ಬರುವುದು-ಹೋಗುವುದನ್ನು ಮಾಡಬಾರದು, ಅನಾವಶ್ಯಕ ಪ್ರಯಾಣವನ್ನು ಮಾಡಬಾರದು, ಪ್ರಯಾಣ ಮಾಡಲೇ ಬೇಕಿದ್ದರೆ ಅದರ ನಿಯಮ ಪಾಲಿಸಬೇಕು.

ಇ. ಜನದಟ್ಟಣೆಯಿಂದ ದೂರವಿರಬೇಕು, ಸಾಮಾಜಿಕ ಅಂತರವನ್ನು (ಸೊಶಿಯಲ್ ಡಿಸ್ಟೆನ್ಸಿಂಗ್) ಪಾಲಿಸಬೇಕು, ಹೊರಗೆ ಹೋಗುವಾಗ ಮಾಸ್ಕ್ ಉಪಯೋಗಿಸಬೇಕು ಮತ್ತು ಮಾಸ್ಕ್‌ಅನ್ನು ಮೂಗು ಹಾಗೂ ಬಾಯಿ ಪೂರ್ತಿ ಮುಚ್ಚುವಂತೆ ಹಾಕಿಕೊಳ್ಳಬೇಕು.

ಈ. ನಗದು (ಕ್ಯಾಶ್) ವ್ಯವಹಾರ ಮಾಡುವ ಬದಲು ‘ಆನ್‌ಲೈನ್’ ವ್ಯವಹಾರಕ್ಕೆ ಆದ್ಯತೆಯನ್ನು ನೀಡಬೇಕು.

ಉ. ಮೇಲಿಂದಮೇಲೆ ಸಾಬೂನಿನಿಂದ ಕೈಗಳನ್ನು ತೊಳೆದುಕೊಳ್ಳಬೇಕು ಅಥವಾ ನಿರ್ಜಂತುಕರಣ (ಸ್ಯಾನಿಟೈಸೇಶನ್’) ಮಾಡಬೇಕು.

ಮೇಲಿನ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಇತರ ವ್ಯಕ್ತಿಗಳು ಸಂಪರ್ಕಕ್ಕೆ ಬರುವಂತಹ ಮಾಧ್ಯಮಗಳನ್ನು ಕಟ್ಟುನಿಟ್ಟಾಗಿ ತಡೆಯಬೇಕು. ಇದರೊಂದಿಗೆ ‘ನಮ್ಮ ಎಲ್ಲ ಆಧ್ಯಾತ್ಮಿಕ ಉಪಾಯಗಳನ್ನು ಮತ್ತು ವ್ಯಷ್ಟಿಸಾಧನೆಯ ಪ್ರಯತ್ನಗಳನ್ನು ನಿಯಮಿತ ಪೂರ್ಣಗೊಳಿಸಬೇಕು.

‘ಸಾಧಕರ ರಕ್ಷಣೆಯಾಗಬೇಕೆಂದು’, ಸಂತರು ಮತ್ತು ಮಹರ್ಷಿಗಳು ಹಗಲೂರಾತ್ರಿ ವಿಧಿಗಳನ್ನು, ಅನುಷ್ಠಾನ ಮುಂತಾದವುಗಳನ್ನು ಮಾಡುತ್ತಿದ್ದಾರೆ. ಆದುದರಿಂದ ಎಲ್ಲರೂ ಯೋಗ್ಯ ಕ್ರಿಯಮಾಣವನ್ನು ಉಪಯೋಗಿಸಿ ತಮ್ಮ ಹಾಗೂ ತಮ್ಮ ಕುಟುಂಬದವರ ಆರೋಗ್ಯವನ್ನು ಕಾಪಾಡಿಕೊಳ್ಳಲು ಪ್ರಯತ್ನಿಸಬೇಕು.

ಸಾಧಕರೇ, ‘ಒಂದು ಚಿಕ್ಕ ತಪ್ಪು ಸಹ ನಮ್ಮ ಹಾಗೂ ನಮ್ಮ ಕುಟುಂಬದವರಿಗೆ ಮರಣಾಂತಿಕ ಆಗಬಹುದು’, ಇದನ್ನು ಗಮನದಲ್ಲಿಟ್ಟು ಸುರಕ್ಷತೆಯ ದೃಷ್ಟಿಯಿಂದ ನೀಡಿದ ಸೂಚನೆಗಳನ್ನು ಗಾಂಭೀರ್ಯದಿಂದ ಹಾಗೂ ಕಟ್ಟುನಿಟ್ಟಾಗಿ ಪಾಲಿಸಬೇಕು !’ – ಶ್ರೀಸತ್‌ಶಕ್ತಿ (ಸೌ.) ಬಿಂದಾ ಸಿಂಗಬಾಳ (೨೯.೬.೨೦೨೦)