ಹಿಂದೂಗಳ ವಿರೋಧದ ನಂತರ ‘ಪೇಟಾ’ದಿಂದ ಕ್ಷಮಾಯಾಚನೆ

ರಾಖಿಗಳನ್ನು ಹಸುವಿನ ಚರ್ಮದೊಂದಿಗೆ ಸಂಬಂಧ ಜೋಡಿಸಲು ಪ್ರಯತ್ನಿಸಿದ ಪ್ರಕರಣ

ಹಿಂದೂಗಳು ಸಂಘಟಿತವಾಗಿ ವಿರೋಧಿಸಿದ ಪರಿಣಾಮವೇ ಆಗಿದೆ !

ನವ ದೆಹಲಿ – ರಾಖಿಯನ್ನು ಹಸುವಿನ ಚರ್ಮದೊಂದಿಗೆ ಸಂಬಂಧ ಜೋಡಿಸಲು ಪ್ರಯತ್ನಿಸುತ್ತ ‘ಚರ್ಮಮುಕ್ತ ರಕ್ಷಾಬಂಧನವನ್ನು ಆಚರಿಸಿರಿ’ ಎಂಬ ಅಭಿಯಾನವನ್ನು ಹಮ್ಮಿಕೊಂಡಿದ್ದ ‘ಪೇಟಾ’(ಪಿಪಲ್ ಆಫ್ ದ ಎಥಿಕಲ್ ಟ್ರೀಟ್‌ಮೆಂಟ್ ಆಫ್ ಆನಿಮಲ್) ಈ ತಥಾಕಥಿತ ಪ್ರಾಣಿಸ್ನೇಹಿ ಸಂಘಟನೆಯು ಹಿಂದೂಗಳ ವಿರೋಧದ ನಂತರ ಈ ಸಂದರ್ಭದಲ್ಲಿನ ಲೇಖನವನ್ನು ತನ್ನ ಜಾಲತಾಣದಿಂದ ತೆಗೆದುಹಾಕಿದೆ. ‘ಈ ತಪ್ಪು ತಿಳುವಳಿಕೆಯ ಬಗ್ಗೆ ಕ್ಷಮೆಯಾಚಿಸುತ್ತೇವೆ’, ಎಂದು ಅದು ಹೇಳಿದೆ. ‘ರಾಖಿಯಲ್ಲಿ ಹಸುವಿನ ಚರ್ಮವನ್ನು ಉಪಯೋಗಿಸಲಾಗುತ್ತದೆ’, ಎಂದು ಹೇಳುತ್ತಾ ‘ಪೇಟಾ’ವು ಅಭಿಯಾನವನ್ನು ಹಮ್ಮಿಕೊಂಡಿತ್ತು.