ಹಿಂದೂಗಳ ದೇವತೆಗಳ ವಿಡಂಬನೆಯನ್ನು ಮಾಡುವ ವಿದೇಶಿ ಕಂಪನಿಗಳನ್ನು ಭಾರತ ಸರಕಾರ ವಿರೋಧಿಸಬೇಕು !

೧. ಬಂಗಾಲದಲ್ಲಿನ ಕಾನೂನು ಸುವ್ಯವಸ್ಥೆ ಹದಗೆಟ್ಟಿರುವುದು !

ಬಂಗಾಲದ ಉತ್ತರ ದಿನಾಜಪೂರದಲ್ಲಿ ಭಾಜಪ ಶಾಸಕ ದೇವೇಂದ್ರನಾಥ ರೇ ಇವರ ಮೃತದೇಹವು ಇಲ್ಲಿಯ ಪೇಟೆಯಲ್ಲಿ ಒಂದು ಅಂಗಡಿಯ ಹೊರಗಡೆ ನೇಣಿಗೆ ಹಾಕಿದ ಸ್ಥಿತಿಯಲ್ಲಿ ಕಂಡುಬಂದಿತು. ಇವರನ್ನು ಕೊಲೆಯಾಗಿದೆ ಎಂದು ಭಾಜಪ ಆರೋಪಿಸಿದೆ.

೨. ಹಿಂದೂಗಳ ದೇವತೆಗಳ ವಿಡಂಬನೆಯನ್ನು ಮಾಡುವ ವಿದೇಶಿ ಕಂಪನಿಗಳನ್ನು ಭಾರತ ಸರಕಾರ ವಿರೋಧಿಸಬೇಕು !

ಅಮೇರಿಕದ ‘ಕಾಫಿ ಶಾಪ್ ಆಫ್ ಹಾರರ್ಸ್ ಎಂಬ ಕಂಪನಿಯು ತಯಾರಿಸಿದ ಕಪ್ಪು ಚಹಾದ ಉತ್ಪಾದನೆಗೆ ‘ಬ್ಲಡ್ ಆಫ್ ಕಾಲಿ’ (ಕಾಳಿಯ ರಕ್ತ) ಎಂದು ಹೆಸರಿಟ್ಟು ಮಹಾಕಾಳಿ ದೇವಿಯ ಅವಮಾನ ಮಾಡಿದೆ. ‘ಈ ಉತ್ಪಾದನೆಯನ್ನು ಹಿಂಪಡೆದು ಕ್ಷಮೆ ಯಾಚಿಸಬೇಕು’, ಎಂದು ಹಿಂದೂಗಳು ಆಗ್ರಹಿಸಿದ್ದಾರೆ.

೩. ಅಂತಹ ಮತಾಂಧರಿಗೆ ಗಲ್ಲು ಶಿಕ್ಷೆಯನ್ನು ಯಾವಾಗ ವಿಧಿಸಲಾಗುವುದು ?

ಉತ್ತರಪ್ರದೇಶದ ಮೇರಠ ಇಲ್ಲಿಯ ಅಬ್ದುಲಾಪೂರ ಪೇಟೆಯಲ್ಲಿರುವ ಶಿವಮಂದಿರದಲ್ಲಿನ ಕಾಂತಿ ಪ್ರಸಾದ ಎಂಬ ಅರ್ಚಕರು ಕೇಸರಿ ಬಣ್ಣದ ಶಲ್ಯವನ್ನು ತೊಟ್ಟಿದ್ದರು. ಆ ಬಗ್ಗೆ ಮತಾಂಧರು ಆಕ್ಷೇಪಾರ್ಹ ಕೋಮುಭಾವನೆಯ ಹೇಳಿಕೆಗಳನ್ನು ನೀಡುತ್ತ ಅಮಾನವೀಯವಾಗಿ ಥಳಿಸಿ ಅವರ ಹತ್ಯೆ ಮಾಡಿದರು.

೪. ಪ್ರಗತಿಪರರು (ಅಧೋಗತಿಪರರು) ಈ ಬಗ್ಗೆ ಮಾತನಾಡುವರೇ ?

ಉತ್ತರಪ್ರದೇಶದ ಅಲೀಗಡ ಮುಸ್ಲಿಂ ವಿಶ್ವವಿದ್ಯಾಲಯದ ವಸತಿಗೃಹದಲ್ಲಿ ಹಿಂದೂ ವಿದ್ಯಾರ್ಥಿನಿಗಳಿಗೆ ಹಿಜಾಬನ್ನು ತೊಡುವಂತೆ ಒತ್ತಾಯಿಸಲಾಗುತ್ತದೆ, ಎಂಬ ಮಾಹಿತಿಯನ್ನು ನೀಡುವ ಒಬ್ಬ ಹಿಂದೂ ವಿದ್ಯಾರ್ಥಿನಿಗೆ ಓರ್ವ ಮತಾಂಧ ವಿದ್ಯಾರ್ಥಿಯು ‘ನಿಮಗೆ ಹಿತ್ತಾಳೆಯ ಹಿಜಾಬನ್ನು ತೊಡುವಂತೆ ಮಾಡುತ್ತೇನೆ’, ಎಂದು ಬೆದರಿಕೆಯೊಡ್ಡಿದನು.

೫. ಮಹಾರಾಷ್ಟ್ರದ ಬಾಲಭಾರತಿಯ ಅಕ್ಷಮ್ಯ ತಪ್ಪನ್ನು ತಿಳಿಯಿರಿ !

ಮಹಾರಾಷ್ಟ್ರದ ಬಾಲಭಾರತಿಯ ೮ ನೇ ತರಗತಿಯ ಮರಾಠಿ ಪುಸ್ತಕದಲ್ಲಿ ‘ನನಗೆ ನನ್ನ ದೇಶದ ಮೇಲೆ ಪ್ರೇಮವಿದೆ’ ಎಂಬ ಪಾಠದಲ್ಲಿ ಕ್ರಾಂತಿಕಾರಿ ಭಗತಸಿಂಗ, ಸುಖದೇವ ಮತ್ತು ರಾಜಗುರು ಇವರ ಹೆಸರುಗಳನ್ನು ಉಲ್ಲೇಖಿಸುವಾಗ ಅದರಲ್ಲಿ ಸುಖದೇವ ಇವರ ಹೆಸರನ್ನು ತೆಗೆದುಹಾಕಿ ಸ್ವಾತಂತ್ರ್ಯ ಸೈನಿಕ ಕುರ್ಬಾನ ಹುಸೇನ ಇವರ ಹೆಸರನ್ನು ಕೊಡಲಾಗಿದೆ.

೬. ಮತಾಂಧರ ವಿಚಾರದಲ್ಲಿ ‘ಸರ್ವಧರ್ಮಸಮಭಾವ ಇಲ್ಲ, ಎಂಬುದನ್ನು ತಿಳಿಯಿರಿ !

‘ಇಸ್ಲಾಮ್‌ಸಹಿತ ಎಲ್ಲ ಧರ್ಮಗಳು ಸಮಾನವಾಗಿದ್ದು ಯಾವುದೇ ಧರ್ಮ ಸಣ್ಣದು ಅಥವಾ ದೊಡ್ಡದು ಇರುವುದಿಲ್ಲ, ಎಂದು ‘ಪಾಕಿಸ್ತಾನ ಮುಸ್ಲಿಂ ಲೀಗ್ನ ಮುಖಂಡ ಹಾಗೂ ಮಾಜಿ ಕೇಂದ್ರ ಸಚಿವ ಖ್ವಾಜಾ ಆಸಿಫ್ ಇವರು ಪಾಕಿಸ್ತಾನದ ಸಂಸತ್ತಿನಲ್ಲಿ ಹೇಳಿಕೆ ನೀಡಿದ್ದರಿಂದ ಅವರ ವಿರುದ್ಧ ದೂರು ನೀಡಲಾಗಿದೆ.

೭. ‘ಬೌದ್ಧರು-ಮುಸಲ್ಮಾನರು ಭಾಯಿ ಭಾಯಿ ಎನ್ನುವವರು ಈಗ ಮೌನವೇಕೆ ?

ಪಾಕಿಸ್ತಾನದ ಖೈಬರ ಪಖ್ತೂನಖ್ವಾ ಪ್ರದೇಶದಲ್ಲಿ ದೊರಕಿದ ಗೌತಮ ಬುದ್ಧನ ಪ್ರಾಚೀನ ಕಲ್ಲಿನ ಮೂರ್ತಿಯನ್ನು ಮತಾಂಧರು ಧ್ವಂಸಗೊಳಿಸಿದ ಘಟನೆ ಬೆಳಕಿಗೆ ಬಂದಿದೆ. ಇಲ್ಲಿಯ ಓರ್ವ ಮೌಲಾನಾನ ಹೇಳಿಕೆಯ ಮೇರೆಗೆ ಸ್ಥಳೀಯ ಕಾರ್ಮಿಕರು ಅದನ್ನು ಧ್ವಂಸ ಮಾಡಿದರು.