ಸಾಧಕರಿಗೆ ಸೂಚನೆ

ಆಶ್ರಮದಲ್ಲಿ ಅಥವಾ ಮನೆಯಲ್ಲಿರುವ ಸಾಧಕರು ಚೈತನ್ಯಮಯ ಹಾಗೂ ಸಾಮಾನ್ಯ ವಾಸ್ತುವಿನ ಪರಿಸರದಲ್ಲಿನ ಸೂರ್ಯಪ್ರಕಾಶ ಹಾಗೂ ರಸ್ತೆಬದಿಯ ದೀಪಗಳಿಂದ ಬರುವ ಪ್ರಕಾಶ ಕಿರಣಗಳ ಅಧ್ಯಯನ ಮಾಡಬೇಕು !

‘ಸನಾತನದ ರಾಮನಾಥಿ ಆಶ್ರಮದಿಂದ ವಾತಾವರಣದಲ್ಲಿ ಪ್ರಕ್ಷೇಪಿತವಾಗುತ್ತಿರುವ ದೈವೀ ಕಣಗಳಿಂದಾಗಿ ಬೆಳಗಿನ ಸಮಯದಲ್ಲಿ ರಾಮನಾಥಿ ಆಶ್ರಮದ ಟ್ಯಾರೆಸ್‌ನಲ್ಲಿ ನಿಂತುಕೊಂಡು ಆಶ್ರಮದ ಎದುರಿಗಿರುವ ಮರಗಳ ಟೊಂಗೆಗಳ ನಡುವಿನಿಂದ ಉದಯಿಸುವ ಸೂರ್ಯನತ್ತ ನೋಡಿದರೆ ಸೂರ್ಯನ ಕಿರಣಗಳು ವರ್ತುಲಾಕಾರ ಸ್ವರೂಪದಲ್ಲಿ ಎಲ್ಲ ದಿಕ್ಕುಗಳಿಗೆ ಹರಡಿರುವುದು ಕಾಣಿಸುತ್ತದೆ ಹಾಗೂ ರಾತ್ರಿಯ ಸಮಯದಲ್ಲಿ ರಾಮನಾಥಿ ಆಶ್ರಮದ ಪರಿಸರದಲ್ಲಿರುವ ರಸ್ತೆ ಬದಿಯ ದೀಪಗಳ ಪ್ರಕಾಶದ ಕಿರಣಗಳು ಆಶ್ರಮದ ದಿಕ್ಕಿಗೆ ವರ್ತುಲಾಕಾರ ಸ್ವರೂಪದಲ್ಲಿ ಬರುತ್ತಿರುವುದು ಕಾಣಿಸುತ್ತದೆ. ಸಾಧಕರಿಗೆ ಪ್ರಕಾಶ ಕಿರಣಗಳ ಈ ಪರಿಣಾಮವು ರಾಮನಾಥಿ ಆಶ್ರಮದ ಹೊರತಾಗಿ ಇತರ ಸನಾತನದ ಆಶ್ರಮಗಳಲ್ಲಿ, ಸಾಧಕರ ಮನೆಗಳಲ್ಲಿ ಹಾಗೂ ಇತರ ಸ್ಥಳಗಳಲ್ಲಿಯೂ ಕಂಡು ಬಂದಲ್ಲಿ ಸಾಧಕರು ಅದನ್ನು ಮುಂದಿನಂತೆ ಅಧ್ಯಯನ ಮಾಡಬೇಕು.

೧. ಆಶ್ರಮದಿಂದ / ಮನೆಯಿಂದ ಎಷ್ಟು ಕಿ.ಮೀ. ವರೆಗೆ ಈ ಪರಿಣಾಮದ ಅರಿವಾಗುತ್ತದೆ ?

೨. ಸೂರ್ಯಕಿರಣಗಳ / ದೀಪಗಳ ಕಿರಣಗಳು ಬರುವಾಗ ಹೇಗೆ ಕಾಣಿಸುತ್ತವೆ ?, ಉದಾ. ವರ್ತುಲಾಕಾರ, ಸೀಳಿದ ರೇಖೆಗಳಂತೆ ಇತ್ಯಾದಿ. ಅವು ಎಷ್ಟು ದಿಕ್ಕುಗಳಿಗೆ ಹರಡಿರುವುದು ಕಾಣಿಸುತ್ತದೆ ?

೩. ರಸ್ತೆಬದಿಯ ಸರ್ವಸಾಮಾನ್ಯ ದೀಪಗಳಿಂದ ಬರುವ ಪ್ರಕಾಶ ಕಿರಣದ ವರ್ತುಲದ ವ್ಯಾಸವು ಸಾಮಾನ್ಯ ಎಷ್ಟಿದೆ ?

ದೀಪಾವಳಿ ನಿಮಿತ್ತ ಮನೆಗೆ ಹೋಗುವ ಸಾಧಕರು ಅಲ್ಲಿಯೂ ಇಂತಹ ಪರಿಣಾಮದ ಅರಿವಾಗುತ್ತದೆಯೇ ?’, ಎಂದು ಅಧ್ಯಯನ ಮಾಡಬೇಕು.

ಏನಾದರೂ ವೈಶಿಷ್ಟ್ಯಪೂರ್ಣವಾದುದು ಕಂಡು ಬಂದಲ್ಲಿ ಅದನ್ನು ಬರೆದು ಅಥವಾ ಬೆರಳಚ್ಚು ಮಾಡಿ ರಾಮನಾಥಿ ಆಶ್ರಮಕ್ಕೆ ಸಂಕಲನ ವಿಭಾಗಕ್ಕೆ [email protected] ಈ ವಿಳಾಸಕ್ಕೆ ಕಳುಹಿಸಬೇಕು.’

– ಕು. ಪ್ರಿಯಾಂಕಾ ಲೋಟಲೀಕರ, ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯ, ರಾಮನಾಥಿ, ಗೋವಾ. (೧೧.೭.೨೦೨೦)