ಕೊರೋನಾವನ್ನು ಮುಗಿಸಲು ಆಗಸ್ಟ್ ೫ ರ ತನಕ ಪ್ರತಿದಿನ ಹನುಮಾನ ಚಾಲೀಸಾ ಪಠಿಸಿ ! – ಸಾಧ್ವಿ ಪ್ರಜ್ಞಾಸಿಂಹ ಠಾಕುರ್ ಇವರಿಂದ ಕರೆ

‘ನಡೆಯಿರಿ ಕೊರೋನಾ ಮಹಾಮಾರಿಯನ್ನು ಮುಗಿಸಲು ಹಾಗೂ ಜನರಿಗೆ ಉತ್ತಮ ಆರೋಗ್ಯಕ್ಕಾಗಿ ನಾವು ಒಂದು ಆಧ್ಯಾತ್ಮಿಕ ಪ್ರಯತ್ನವನ್ನು ಮಾಡೋಣ. ಇಂದಿನಿಂದ ಆಗಸ್ಟ್ ೫ ರ ತನಕ ಪ್ರತಿದಿನ ಸಂಜೆ ೭ ಗಂಟೆಗೆ ತಮ್ಮ ತಮ್ಮ ಮನೆಗಳಲ್ಲಿ ಹನುಮಾನ ಚಾಲೀಸಾದ ಪಠಣವನ್ನು ಮಾಡಬೇಕು.

ನೇಪಾಳಿ ಪೊಲೀಸರಿಂದ ಭಾರತೀಯ ಮಹಿಳೆ ಹಾಗೂ ಆಕೆಯ ಮಗನನ್ನು ಬಂಧಿಸಿ ಹಲ್ಲೆ

ನೇಪಾಳಿ ಪೊಲೀಸರು ಓರ್ವ ಭಾರತೀಯ ಮಹಿಳೆಯನ್ನು ಹಾಗೂ ಆಕೆಯ ಮಗನನ್ನು ಬಂಧಿಸಿ ಹಲ್ಲೆ ಮಾಡಿರುವ ಖೇದಕರ ಘಟನೆ ನಡೆದಿದೆ. ನೇಪಾಳ ಗಡಿಗೆ ತಾಗಿರುವ ಬಿಹಾರ ರಾಜ್ಯದ ಚಂಪಾರಣದಲ್ಲಿಯ ಖರಸಲಾವಾ ಪ್ರದೇಶದಲ್ಲಿ ಓರ್ವ ಮಹಿಳೆಯು ಆಕೆಯ ಮಗದೊಂದಿಗೆ ಹುಲ್ಲು ತೆಗೆಯಲು ಹೋಗಿದ್ದಳು. ಆಗ ಪೊಲೀಸರು ಆಕೆಯನ್ನು ತಡೆದರು. ಆಗ ಆಕೆಯು ‘ನಾನು ಭಾರತದ ಗಡಿಯಲ್ಲಿದ್ದೇನೆ’, ಎಂದು ನೇಪಾಳಿ ಪೊಲೀಸರಿಗೆ ಹೇಳಿದಳು.

ನಾಗರಪಂಚಮಿಯ ದಿನ ನಾಗದೇವತೆಗೆ ಹಾಲು ನೀಡುವುದು ಅವೈಜ್ಞಾನಿಕವಿರುವುದರಿಂದ ಬಡಮಕ್ಕಳಿಗೆ ನೀಡಿ !(ಯಂತೆ)- ಕಾಂಗ್ರೆಸ್ ಶಾಸಕ ಸತೀಶ ಜಾರಕಿಹೊಳಿಯವರ ಪುಕ್ಕಟೆ ಸಲಹೆ

ನಾಗರಪಂಚಮಿಯಂದು ಹಿಂದೂಗಳು ನಾಗದೇವರಿಗೆ ಹಾಲನ್ನು ಎರೆಯುವುದು ಅವೈಜ್ಞಾನಿಕವಾಗಿದೆ. ಅದರ ಬದಲು ಅದನ್ನು ಬಡಮಕ್ಕಳಿಗೆ, ರೋಗಿಗಳಿಗೆ ನೀಡಬೇಕು, ಅದಲ್ಲದೇ ಕರ್ನಾಟಕದಲ್ಲಿ ಪ್ರತಿ ವರ್ಷ ೪೦ ಸಾವಿರಕ್ಕೂ ಹೆಚ್ಚು ಮಕ್ಕಳು ಅಪೌಷ್ಠಿಕತೆಯಿಂದ ಮರಣ ಹೊಂದುತ್ತಿದ್ದಾರೆ; ಹಾಗಾಗಿ ಅಂತಹವರಿಗೆ ಹಾಲು ನೀಡಿ, ಎಂದು ಕಾಂಗ್ರೆಸ್ ಶಾಸಕ ಸತೀಶ ಜಾರಕಿಹೊಳಿಯವರು ಪುಕ್ಕಟೆ ಸಲಹೆ ನೀಡಿದ್ದಾರೆ.

ನಾಗರ ಪಂಚಮಿ ದಿನ ಹಿಂದೂಗಳ ಹಬ್ಬಗಳ ಟೀಕಿಸುವ ಸತೀಶ ಜಾರಕಿಹೊಳಿಯವರು ಕ್ಷಮೆಯಾಚನೆ ಮಾಡಬೇಕು

ನಾಗರಪಂಚಮಿಯಂದು ಹಿಂದೂಗಳು ನಾಗದೇವರಿಗೆ ಹಾಲನ್ನು ಎರೆಯುವ ಸಂಪ್ರದಾಯವನ್ನು ಕಾಂಗ್ರೆಸ್ ಶಾಸಕ ಸತೀಶ ಜಾರಕಿಹೊಳಿಯವರು ಟೀಕಿಸುತ್ತಾ, ಇದು ಅವೈಜ್ಞಾನಿಕ ಕೋಟ್ಯಂತರ ಲೀಟರ್ ಹಾಲು ವ್ಯರ್ಥವಾಗುತ್ತದೆ. ಹಾಗಾಗಿ ಅದನ್ನು ಬಡಮಕ್ಕಳಿಗೆ, ರೋಗಿಗಳಿಗೆ ನೀಡಿ ಎಂದು ಹಿಂದೂ ವಿರೋಧಿ ಕರೆ ನೀಡುವ ಒಂದು ಪೋಸ್ಟ್ ಸಾಮಾಜಿಕ ಮಾಧ್ಯಗಳಲ್ಲಿ ಹರಿದಾಡುತ್ತಿದೆ.

ಕರ್ನಾಟಕ ಮತ್ತು ಕೇರಳದಲ್ಲಿ ಅನೇಕ ಇಸ್ಲಾಮಿಕ್ ಸ್ಟೇಟ್ ಭಯೋತ್ಪಾದಕರು ! – ವಿಶ್ವಸಂಸ್ಥೆ

ಕರ್ನಾಟಕ ಮತ್ತು ಕೇರಳ ರಾಜ್ಯಗಳಲ್ಲಿ ಅನೇಕ ಇಸ್ಲಾಮಿಕ್ ಸ್ಟೇಟ್ ಭಯೋತ್ಪಾದಕರು ಇರಬಹುದು. ಅಲ್-ಖೈದಾ ಕೂಡ ಭಾರತದ ಉಪಖಂಡದಲ್ಲಿ ಭಯೋತ್ಪಾದಕ ದಾಳಿ ನಡೆಸಲು ಸಂಚು ರೂಪಿಸುತ್ತಿದೆ. ಈ ಸಂಘಟನೆಯು ಭಾರತ, ಪಾಕಿಸ್ತಾನ, ಬಾಂಗ್ಲಾದೇಶ ಮತ್ತು ಮ್ಯಾನ್ಮಾರ್‌ನಲ್ಲಿ ೧೦೦ ರಿಂದ ೧೫೦ ಭಯೋತ್ಪಾದಕರನ್ನು ಹೊಂದಿದೆ ಎಂದು ವಿಶ್ವಸಂಸ್ಥೆಯ ವರದಿಯೊಂದು ತಿಳಿಸಿದೆ.

ಸಂಕಷ್ಟದ ಸಮಯದಲ್ಲಿ ಕಾರ್ಮಿಕರನ್ನು ಬೀದಿಪಾಲು ಮಾಡುವುದು ನಿಮ್ಮ ನೈತಿಕತೆಯೇ ? – ಉದ್ಯಮಿ ರತನ ಟಾಟಾರಿಂದ ಕಂಪನಿಗಳಿಗೆ ಪ್ರಶ್ನೆ

ನಿಮ್ಮ ಕಂಪನಿಯಲ್ಲಿ ಕೆಲಸ ಮಾಡುವವರು ನಿಮಗಾಗಿ ಕೆಲಸ ಮಾಡಿದ್ದಾರೆ. ಅವರು ತಮ್ಮ ಸಂಪೂರ್ಣ ವೃತ್ತಿಜೀವನವನ್ನು ನಿಮ್ಮ ಸೇವೆಯಲ್ಲಿ ಕಳೆದಿದ್ದಾರೆ. ಅವರನ್ನು ಬೀದಿಪಾಲು ಮಾಡಲು ನಿಮಗೆ ಮನಸ್ಸಾದರೂ ಹೇಗೆ ಬಂತು? ಇದುವೇ ನಿಮ್ಮ ನೈತಿಕತೆಯೇ?’, ಎಂದು ಟಾಟಾ ಸಮೂಹದ ಮುಖ್ಯಸ್ಥ ರತನ ಟಾಟಾ ಅವರು ‘ಯುವರ್ ಸ್ಟೋರಿ’ಗೆ ನೀಡಿದ ಒಂದು ಸಂದರ್ಶನದಲ್ಲಿ ಪ್ರಶ್ನಿಸಿದ್ದಾರೆ.

ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜಸಿಂಹ ಚೌಹಾಣ ಇವರಿಗೆ ಕೊರೋನಾ ಸೋಂಕು

ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜಸಿಂಹ ಚೌಹಾಣ ಇವರಿಗೆ ಕೊರೋನಾ ಸೋಂಕು ತಗಲಿದೆ. ಅವರ ಕೊರೋನಾ ಪರೀಕ್ಷೆಯ ವರದಿಯಲ್ಲಿ ಸಕಾರಾತ್ಮಕ(ಪಾಝಿಟಿವ್) ಬಂದಿದೆ. ಅವರು ಸ್ವತಃ ಟ್ವೀಟ್ ಮಾಡಿ ಈ ಮಾಹಿತಿಯನ್ನು ನೀಡಿದ್ದಾರೆ.

ಒಂದು ಹಕ್ಕಿಯ ಗೂಡನ್ನು ಉಳಿಸಲು ಇಡೀ ಊರಿನ ಎಲ್ಲ ಬೀದಿ ದೀಪಗಳು ೩೫ ದಿನಗಳ ಕಾಲ ಸ್ಥಗಿತ !

ತಮಿಳುನಾಡಿನ ಶಿವಗಂಗಾ ಜಿಲ್ಲೆಯ ಪೋಥ್ಥಾಕುಡಿ ಗ್ರಾಮದಲ್ಲಿ ಕೇವಲ ಒಂದು ಪಕ್ಷಿಯ ಗೂಡಿಗಾಗಿ ಬೀದಿ ದೀಪಗಳನ್ನು ೩೫ ದಿನಗಳ ವರೆಗೆ ಸ್ಥಗಿತ ಗೊಳಿಸಲಾಗಿತ್ತು. ಒಂದು ಆಂಗ್ಲ ದಿನಪತ್ರಿಕೆಯು ಇದರ ಬಗ್ಗೆ ವರದಿ ಮಾಡಿದೆ. ಈ ವರದಿಗನುಸಾರ ಈ ಗ್ರಾಮದಲ್ಲಿ ವಾಸಿಸುತ್ತಿರುವ ಕರುಪಿ ರಾಜ ಎಂಬ ವಿದ್ಯಾರ್ಥಿಯು ತನ್ನ ಮನೆಯ ಸಮೀಪ ಬೀದಿ ದೀಪಗಳ ‘ಸ್ವಿಚ್‌ಬೋರ್ಡ್’ನಲ್ಲಿ ಹಕ್ಕಿ ಗೂಡು ಕಟ್ಟಿರುವುದನ್ನು ನೋಡಿದನು.

ಸುಲ್ತಾನಪುರ (ಉತ್ತರಪ್ರದೇಶ) ಇಲ್ಲಿ ದೇವಸ್ಥಾನದ ಪರಿಸರದಲ್ಲಿ ೨೨ ವರ್ಷದ ಸಾಧುವಿನ ಮೃತದೇಹ ಮರದ ಮೇಲೆ ನೇತಾಡುತ್ತಿರುವ ಸ್ಥಿತಿಯಲ್ಲಿ ಪತ್ತೆ

ಇಲ್ಲಿಯ ಛತೌನಾ ಮಾರುಕಟ್ಟೆಯ ಬಳಿಯ ವೀರ ಬಾಬಾ ದೇವಸ್ಥಾನದ ಪರಿಸರದಲ್ಲಿ ಓರ್ವ ಬಾಲಯೋಗಿ ಸಾಧುವಿನ ಮೃತದೇಹವು ಒಂದು ಮರದಲ್ಲಿ ನೇತಾಡುತ್ತಿರುವ ಸ್ಥಿತಿಯಲ್ಲಿ ಪತ್ತೆಯಾಗಿದೆ. ಬಾಲಯೋಗಿ ಸತ್ಯೇಂದ್ರ ಆನಂದ ಸರಸ್ವತಿಜೀ ಮಹಾರಾಜ (ವಯಸ್ಸು ೨೨) ಎಂದು ಅವರ ಹೆಸರಾಗಿದೆ.