ಕೊರೋನಾದ ರೋಗಿ ಪತ್ತೆಯಾಗಿದ್ದರಿಂದ ವಸತಿಗೃಹವನ್ನು ಸೀಲ್ ಮಾಡುವಾಗ ಕೆಲವು ನಾಗರಿಕರು ಒಳಗೆ ಸಿಲುಕಿದ್ದರು !

  • ಬೆಂಗಳೂರು ಮಹಾನಗರ ಪಾಲಿಕೆಯ ನಿರ್ಲಕ್ಷತನ

  • ಆಯುಕ್ತರಿಂದ ಕ್ಷಮೆ ಯಾಚನೆ

ಇಂತಹ ನಿರ್ಲಕ್ಷತನ ಮಾಡುವ ಸಿಬ್ಬಂದಿಗಳ ಮೇಲೆ ಮಹಾನಗರಪಾಲಿಕೆಯು ಕಠಿಣ ಶಿಕ್ಷೆಯನ್ನು ವಿಧಿಸಬೇಕು !

ಬೆಂಗಳೂರು – ಇಲ್ಲಿ ಒಂದು ಕಟ್ಟಡದಲ್ಲಿ ಕೊರೋನಾದ ರೋಗಿ ಪತ್ತೆಯಾಗಿದ್ದರಿಂದ ಮಹಾನಗರಪಾಲಿಕೆಯ ಸಿಬ್ಬಂದಿಗಳು ೨ ವಸತಿಗೃಹಗಳ ಬಾಗಿಲನ್ನು ಸೀಲ್ ಮಾಡಿದರು; ಆದರೆ ಈ ಮನೆಗಳಲ್ಲಿ ೧ ಮಹಿಳೆ, ೨ ಮಕ್ಕಳು ಹಾಗೂ ೧ ಹಿರಿಯ ನಾಗರಿಕರು ಇದ್ದರು. ಈ ಘಟನೆಯಿಂದಾಗಿ ಜನರಲ್ಲಿ ಆಕ್ರೋಶ ವ್ಯಕ್ತವಾದಾಗ ಮಹಾನಗರಪಾಲಿಕೆಯ ಆಯುಕ್ತರು ಸೀಲನ್ನು ತೆಗೆಯುವಂತೆ ಆದೇಶ ನೀಡುತ್ತ ಕ್ಷಮೆ ಯಾಚಿಸಬೇಕಾಯಿತು.