ಬೆಂಗಳೂರಿನ ಮತಾಂಧ ಗಲಭೆಕೋರರಿಂದ ನಷ್ಟವನ್ನು ತುಂಬಿಸಿಕೊಳ್ಳಿ ! ಹಿಂದೂ ವಿಧಿಜ್ಞ ಪರಿಷತ್ತಿನಿಂದ ಕರ್ನಾಟಕ ಸರಕಾರಕ್ಕೆ ಮನವಿ

ಕರ್ನಾಟಕದ ಗೃಹಸಚಿವರು ನಷ್ಟವನ್ನು ವಸೂಲು ಮಾಡುವುದಾಗಿ ಹೇಳಿದ್ದಾರೆ. ಅವರು ಈ ವಿಷಯದಲ್ಲಿ ತ್ವರಿತಗತಿಯಲ್ಲಿ ಹೆಜ್ಜೆಯಿಟ್ಟು ಅದನ್ನು ವಸೂಲು ಮಾಡಬೇಕು ಹಾಗೂ ಸಂಬಂಧಪಟ್ಟವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕೆಂದು ವಿನಂತಿ !

ಬೆಂಗಳೂರು – ಇಲ್ಲಿ ಅಗಸ್ಟ್ ೧೧ ರಂದು ಮಹಮ್ಮದ ಪೈಗಂಬರರ ಅವಮಾನ ಮಾಡಿರುವ ಪ್ರಕರಣದ ಆರೋಪದಲ್ಲಿ ಮತಾಂಧರು ನಡೆಸಿದ ಗಲಭೆಯಲ್ಲಿ ೬೦ ಪೊಲೀಸರ ಸಹಿತ ಅನೇಕ ಜನರು ಗಾಯಗೊಂಡಿದ್ದಾರೆ, ಹಾಗೂ ಕೋಟಿಗಟ್ಟಲೆ ರೂಪಾಯಿಗಳ ಸರಕಾರಿ ಹಾಗೂ ಖಾಸಗಿ ಆಸ್ತಿಗೆ ಹಾನಿಯಾಗಿದೆ. ಈ ಗಲಭೆಗೆ ಕಾರಣರಾಗಿರುವ ಗಲಭೆಕೋರರಿಂದ ನಷ್ಟವನ್ನು ತುಂಬಿಸಿಕೊಳ್ಳಿ ಹಾಗೂ ಅವರ ವಿರುದ್ಧ ‘ಕಾನೂನುಬಾಹಿರ ಕೃತಿ ತಡೆ ಕಾನೂನಿನ’ ಅಂತರ್ಗತ (ಯು.ಎ.ಪಿ.ಎ.ಅಂತರ್ಗತ) ಖಟ್ಲೆಯನ್ನು ದಾಖಲಿಸಿರಿ, ಎಂದು ಹಿಂದೂ ವಿಧಿಜ್ಞ ಪರಿಷತ್ತು ಕರ್ನಾಟಕ ಸರಕಾರಕ್ಕೆ ವಿನಂತಿಸಿದೆ.

ಹಿಂದೂ ವಿಧಿಜ್ಞ ಪರಿಷತ್ತು ಕರ್ನಾಟಕದ ಮುಖ್ಯಮಂತ್ರಿಗಳಿಗೆ ಬರೆದ ಪತ್ರದಲ್ಲಿ ಈ ಮುಂದಿನ ಅಂಶಗಳನ್ನು ನೀಡಿದೆ –

೧. ಬೆಂಗಳೂರಿನಲ್ಲಿ ದುರ್ದೈವದಿಂದ ನಡೆದ ಆಯೋಜನಾಬದ್ಧ ಗಲಭೆಯಿಂದ ೮ ವರ್ಷಗಳ ಹಿಂದೆ, ಅಂದರೆ ೧೧ ಅಗಸ್ಟ್ ೨೦೧೨ ರಂದು ಮುಂಬಯಿಯ ಆಝಾದ್ ಮೈದಾನದಲ್ಲಿ ನಡೆದಿರುವ ಗಲಭೆಯ ನೆನಪಾಗುತ್ತದೆ. ಆ ಗಲಭೆಯಲ್ಲಿ ಮಹಿಳಾ ಪೊಲೀಸರ ಮಾನ ಭಂಗವಾಯಿತು, ‘ಮಿಡಿಯಾ ವ್ಯಾನ್’ ಸುಟ್ಟುಹಾಕಲಾಯಿತು, ಪೊಲೀಸರನ್ನು ಥಳಿಸಲಾಯಿತು, ಹುತಾತ್ಮಾ ಸ್ಮಾರಕವನ್ನು ಪುಡಿ ಮಾಡಲಾಯಿತು ಇತ್ಯಾದಿ ಅನೇಕ ಘಟನೆಗಳು ಘಟಿಸಿದವು. ನಮ್ಮ ಸಂಘಟನೆಯ ಸದಸ್ಯರು ಗಲಭೆಕೋರರಿಂದ ನಷ್ಟಪರಿಹಾರವನ್ನು ತುಂಬಿಸಿಕೊಳ್ಳಲು ಈ ಪ್ರಕರಣದಲ್ಲಿ ಮುಂಬೈ ಉಚ್ಚ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ದಾಖಲಿಸಿದ್ದರು. ಅರ್ಜಿಯ ನಂತರ ನಷ್ಟಪರಿಹಾರವನ್ನು ತುಂಬಿಸಿಕೊಳ್ಳಲು ಪ್ರಕ್ರಿಯೆ ಆರಂಭವಾಯಿತು.

೨. ಬೆಂಗಳೂರಿನಲ್ಲಿ ೨ ಪೊಲೀಸ್ ಠಾಣೆ ಸಹಿತ ಕಾಂಗ್ರೆಸ್ಸಿನ ಶಾಸಕರ ನಿವಾಸಕ್ಕೆ ಬೆಂಕಿ ಹಚ್ಚುವುದು, ಪೊಲೀಸರ ೩ ವಾಹನಗಳನ್ನು ಸುಟ್ಟು ಹಾಕುವುದು, ಜನಸಾಮಾನ್ಯರ ೩೦೦ ಕ್ಕೂ ಹೆಚ್ಚು ವಾಹನಗಳನ್ನು ಸುಟ್ಟು ಹಾಕುವುದು, ಇತ್ಯಾದಿ ಹಾನಿಕಾರಕ ಘಟನೆಗಳು ನಡೆದಿವೆ. ಇದು ಅನಿರೀಕ್ಷಿತ ಹಾಗೂ ಉದ್ರಿಕ್ತ ಗಲಭೆಯಲ್ಲ. ಅದೊಂದು ಪೂರ್ವನಿಯೋಜಿತ ಆಕ್ರಮಣವಾಗಿತ್ತು, ಎಂಬುದು ನಮ್ಮ ಆರೋಪವಾಗಿದೆ. ರಾಜ್ಯದ ಕಂದಾಯ ಮಂತ್ರಿಗಳು ಕೂಡ ಮಾಧ್ಯಮಗಳಿಗೆ ನೀಡಿದ ಮಾಹಿತಿಯಲ್ಲಿ ಹೀಗೆಯೆ ಹೇಳಿದ್ದು ವಿಶೇಷವಾಗಿ ಗೃಹಸಚಿವರು ಸ್ವತಃ ಒಂದು ದಿನಪತ್ರಿಕೆಗೆ ಹೀಗೆಯೆ ಹೇಳಿಕೆಯನ್ನು ನೀಡಿದ್ದಾರೆ.

೩. ವಿವಿಧ ವಾರ್ತಾವಾಹಿನಿಗಳು ಮತ್ತು ಪೊಲೀಸ್ ಅಧಿಕಾರಿಗಳು ಈ ಗಲಭೆಕೋರರನ್ನು ಸುಲಭದಲ್ಲಿ ಗುರುತಿಸಬಲ್ಲರು; ಆದ್ದರಿಂದ ಈ ಪತ್ರದ ಮೂಲಕ ನಾವು ತಮಗೆ ಇತರ ಕಾನೂನುಕ್ರಮಗಳ ಸಹಿತ ಈ ಮುಂದಿನ ವಿಷಯಗಳ ಬಗ್ಗೆ ತಕ್ಷಣ ಕಾರ್ಯಾಚರಣೆ ಮಾಡಬೇಕೆಂದು ಕರೆ ನೀಡುತ್ತೇವೆ.

ಅ. ಕರ್ನಾಟಕ ಪೊಲೀಸ್ ಕಾನೂನು ೧೯೬೩ ರ ಕಲಮ್ ೫ ರ ಅಂತರ್ಗತ ಆವಶ್ಯಕ ಕ್ರಮ ತೆಗೆದುಕೊಳ್ಳುತ್ತಾ ಗಲಭೆಕೋರರಿಂದ ನಷ್ಟಪರಿಹಾರವನ್ನು ತುಂಬಿಸಿಕೊಂಡು ಅದನ್ನು ಸಂತ್ರಸ್ತರಿಗೆ ಹಂಚಬೇಕು.

ಆ. ‘ಕಾನೂನುಬಾಹಿರ ಕೃತಿ ತಡೆ ಕಾನೂನು (ಯು.ಎ.ಪಿ.ಎ.)’ ಮತ್ತು ‘ಕಕೋಕಾ’ದಂತಹ ವಿಶೇಷ ಕಾನೂನಿನ ಅಂತರ್ಗತ ಅಪರಾಧವನ್ನು ದಾಖಲಿಸಬೇಕು

ಇ. ದೆಹಲಿ ಮತ್ತು ಮುಂಬಯಿಯಲ್ಲಿ ನಡೆದಿರುವ ಗಲಭೆಯ ಹಾಗೆಯೆ ಬೆಂಗಳೂರಿನಲ್ಲಿಯೂ ಪೂರ್ವನಿಯೋಜಿತ ಗಲಭೆ ನಡೆದಿದೆಯೆ ?, ಎಂಬುದನ್ನು ಪತ್ತೆ ಹಚ್ಚಲು ವಿಶೇಷ ತನಿಖಾ ದಳವನ್ನು (‘ಎಸ್.ಐ.ಟಿ’) ಸ್ಥಾಪಿಸಬೇಕು.

ಈ. ಆರ್ಥಿಕ ಹಿನ್ನೆಲೆಯನ್ನು ಪತ್ತೆ ಹಚ್ಚುವುದು, ಅಂದರೆ ಈ ಗಲಭೆಗೆ ಹಣಕಾಸು ಸಹಾಯವಾಗಿದ್ದರೆ ಅದಕ್ಕನುಸಾರ ಆವಶ್ಯಕ ಕ್ರಮತೆಗೆದುಕೊಳ್ಳಬೇಕು.

ಉ. ಗಲಭೆಕೋರರನ್ನು ಬಂಧಿಸುವುದು ಹಾಗೂ ಅವರನ್ನು ಸೆರೆಮನೆಗೆ ತಳ್ಳುವುದು ಇತ್ಯಾದಿ ಇದು ಸರಕಾರ, ಗೃಹಇಲಾಖೆ ಮತ್ತು ಪೊಲೀಸರ ಕರ್ತವ್ಯವಾಗಿದೆ; ಆದರೂ ಸರಕಾರದ ವತಿಯಿಂದ ಗಂಭೀರವಾದ ಹೆಜ್ಜೆಯನ್ನಿಟ್ಟು ಆರೋಪಿಗಳಿಗೆ ಜಾಮೀನು ಸಿಗದಂತೆ ಹಾಗೂ ಖಟ್ಲೆ ಯೋಗ್ಯ ರೀತಿಯಲ್ಲಿ ನಡೆಸಬೇಕೆಂದು ಪ್ರಯತ್ನಿಸಬೇಕು.