ಬೆಂಗಳೂರು ಗಲಭೆಗೆ ಇಸ್ಲಾಮಿಕ್ ಸ್ಟೇಟ್‌ನ ನಂಟಿರುವ ಶಂಕೆ

ಇಸ್ಲಾಮಿಕ್ ಸ್ಟೇಟ್‌ದೊಂದಿಗೆ ನಂಟಿರುವ ಅಲ್ ಹಿಂದ್ ಸಂಘಟನೆಯ ಕಾರ್ಯಕರ್ತನ ಬಂಧನ

ಈ ಉಗ್ರ ಸಂಘಟನೆಗಳು ದೇಶದಲ್ಲಿ ಈ ರೀತಿ ಇನ್ನೆಲ್ಲಾದರೂ ಗಲಭೆ ಮಾಡಲು ಸಂಚು ರೂಪಿಸಿವೆಯೇ ? ಇದನ್ನು ಗುಪ್ತಚರ ಇಲಾಖೆಯು ಪತ್ತೆ ಹಚ್ಚಬೇಕು ಮತ್ತು ಸಂಬಂಧಿತ ಮೇಲೆ ಈಗಲೇ ಕ್ರಮಕೈಗೊಳ್ಳಬೇಕು !

ಬೆಂಗಳೂರು: ಬೆಂಗಳೂರು ಗಲಭೆ ಪ್ರಕರಣದಲ್ಲಿ ಇಸ್ಲಾಮಿಕ್ ಸ್ಟೇಟ್ ಈ ಉಗ್ರ ಸಂಘಟನೆಯ ಕೈವಾಡವಿರುವ ಬಗ್ಗೆ ಪೊಲೀಸರಿಗೆ ಪ್ರಾಥಮಿಕ ಸಾಕ್ಷ್ಯಗಳು ಲಭಿಸಿವೆ. ಗಲಭೆಗೆ ಉಗ್ರರ ಕೈವಾಡ ಇರುವುದು ಬಯಲಾಗುತ್ತಿದ್ದಂತೆ ಕೇಂದ್ರೀಯ ತನಿಖಾ ತಂಡ ಬೆಂಗಳೂರಿನಲ್ಲಿ ಅಫ್ರೋಜ್ ಹೆಸರಿನ ಶಂಕಿತನೊಬ್ಬನನ್ನು ವಶಕ್ಕೆ ಪಡೆದಿದ್ದಾರೆ. ಅಫ್ರೋಜ್‌ನು ಇಸ್ಲಾಮಿಕ್ ಸ್ಟೇಟ್ ಸದಸ್ಯನೆಂದು ಹೇಳಲಾಗುತ್ತಿದೆ. ಈ ಗಲಭೆಯ ಮುಖ್ಯ ಆರೋಪಿ ಸಮಿಯುದ್ದೀನ್ ಎಂಬಾತನನ್ನು ಬಂಧಿಸಿದ್ದಾರೆ. ಇವನು ಆಲ್ ಹಿಂದ್ ಉಗ್ರ ಸಂಘಟನೆಯ ಕಾರ್ಯಕರ್ತನಾಗಿದ್ದಾನೆ. ಈ ಸಂಘಟನೆಗೆ ಇಸ್ಲಾಮಿಕ್ ಸ್ಟೇಟ್ ನಂಟಿದೆ. ೨೦೧೬ ನೇ ಇಸವಿಯಲ್ಲಿ ನಡೆದಿದ್ದ ರಾ.ಸ್ವ. ಸಂಘದ ಕಾರ್ಯಕರ್ತ ಆರ್.ರುದ್ರೇಶ್ ಹತ್ಯೆ ಪ್ರಕರಣದಲ್ಲಿ ಸಮಿಯುದ್ದೀನ್ ಎಂಬಾತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು ; ಸಾಕ್ಷ್ಯಾಧಾರದ ಕೊರತೆಯಿಂದಾಗಿ ಅವನನ್ನು ಬಿಡುಗಡೆಮಡಲಾಗಿತ್ತು.

೧. ಗಲಭೆ ನಡೆದ ಸ್ಥಳದಲ್ಲಿ ಸಮಿಯುದ್ದೀನ್ ಇರುವ ವಿಡಿಯೋ ಲಭ್ಯವಾಗಿದೆ. ಆ ಸ್ಥಳದಲ್ಲೇ ನಿಂತು ಪೊಲೀಸರ ಮೇಲೆ ಹಲ್ಲೆ ನಡೆಸಿ ಬೆಂಕಿ ಹಚ್ಚುವಂತೆ ಒಬ್ಬ ಯುವಕನಿಗೆ ಪ್ರಚೋದನೆ ನೀಡುತ್ತಿರುವುದು ಸೆರೆಯಾಗಿದೆ. ಅವನು ವಾಟ್ಸ್‌ಆಪ್ ಮೂಲಕ ನೂರಾರು ಗಲಭೆಕೋರರನ್ನು ಒಟ್ಟುಗೂಡಿಸಿದ್ದಾರೆ ಎಂಬುದು ಸ್ಪಷ್ಟವಾಗಿದೆ. ಈ ಹಿಂದೆ ರುದ್ರೇಶ ಕೊಲೆ ಪ್ರಕರಣದಲ್ಲಿ ಬಂಧಿತ ಆರೋಪಿಗಳ ಮನೋಸ್ಥೈರ್ಯವನ್ನು ಹೆಚ್ಚಿಸಲು ಹಲವಾರು ಬಾರಿ ಜೈಲಿಗೆ ಭೇಟಿ ನೀಡಿದ್ದರು. ಸಮಿಯುದ್ದೀನ್‌ನ ಮೊಬೈಲ್ ಫೋನ್ ಪರಿಶೀಲಿಸಿದಾಗ ಇಸ್ಲಾಂ ಧರ್ಮವನ್ನು ಬಲಪಡಿಸುವ ಬಗ್ಗೆ ಚರ್ಚಿಸಲು ಆತ ಅಲ್-ಹಿಂದ್ ಸಂಘಟನೆಯ ಮುಖ್ಯಸ್ಥರನ್ನು ಸಂಪರ್ಕಿಸಿದ್ದ ಎಂದು ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

೨. ದಕ್ಷಿಣ ಭಾರತದಲ್ಲಿ ಇಸ್ಲಾಮಿಕ್ ಸ್ಟೇಟ್‌ಅನ್ನು ಬಲಪಡಿಸುವ ಪ್ರಕರಣದಲ್ಲಿ ಬಂಧಿಸಲ್ಪಟ್ಟ ತಮಿಳುನಾಡಿನ ಖ್ವಾಜಾ ಮೊಯಿದ್ದೀನ್ ಅವರು ‘ಅಲ್-ಹಿಂದ್’ಅನ್ನು ಸ್ಥಾಪಿಸಿದ್ದಾನೆ. ಈ ಸಂಘಟನೆಯ ಸದಸ್ಯರಿಗೆ ಹಿಂದೂ ನಾಯಕರನ್ನು ಹತ್ಯೆ ಮಾಡಲು ತಿಳಿಸಲಾಯಿತು. ಅದರಿಂದ ೨೦೧೯ ರ ಡಿಸೆಂಬರ್‌ನಲ್ಲಿ ತಮಿಳುನಾಡಿನ ‘ಹಿಂದೂ ಮಕ್ಕಳ ಕಚ್ಚಿ’ ಸಂಘಟನೆಯ ಕೆ.ಸಿ. ಸುರೇಶ್ ಇವರ ಕೊಲೆ ಮಾಡಯಾಯಿತು.

೩. ಮೆಹಬೂಬ್ ಪಾಷಾ ನೇತೃತ್ವದಲ್ಲಿ ಬೆಂಗಳೂರಿನ ಸುದ್ದುಗುಂಟೆಪಾಳ್ಯದಲ್ಲಿ ಅಲ್ ಹಿಂದ್‌ನ ಕಚೇರಿಯನ್ನು ತೆರೆದು ಸದಸ್ಯರನ್ನು ನೇಮಿಸಲಾಯಿತು. ೨೦೧೯ ರಲ್ಲಿ ಗುರುಪ್ಪನಪಳ್ಯದಲ್ಲಿರುವ ಮೆಹಬೂಬ್ ಪಾಷಾ ಮನೆಯಲ್ಲಿ ಚಟುವಟಿಕೆಗಳ ಕುರಿತು ಸಭೆ ನಡೆಸಿದ್ದ. ಆತ ವಿದೇಶಿ ಉಗ್ರ ಸಂಘಟನೆಗಳ ಮುಖ್ಯಸ್ಥರನ್ನು ಆನ್‌ಲೈನ್‌ನಲ್ಲಿ ಸಂಪರ್ಕಿಸುತ್ತಿದ್ದ. ಈ ಮಾಹಿತಿಯ ತಿಳಿದ ನಂತರ ತಮಿಳುನಾಡು, ದೆಹಲಿ, ಕರ್ನಾಟಕ ಪೊಲೀಸರು ಮತ್ತು ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ದೇಶವ್ಯಾಪಿ ಕಾರ್ಯಾಚರಣೆ ನಡೆಸಿ ೧೭ ಶಂಕಿತ ಉಗ್ರರನ್ನು ಬಂಧಿಸಿದ್ದರು. ವಿಚಾರಣೆಯಲ್ಲಿ ಬೆಂಗಳೂರಿನ ಹೊರವಲಯ, ಚಾಮರಾಜ ನಗರದ ಗುಂಡ್ಲುಪೇಟೆ ಮತ್ತು ಶಿವನಸಮುದ್ರ ಬಳಿಯ ಅರಣ್ಯ ಪ್ರದೇಶದಲ್ಲಿ ಶಸ್ತ್ರಾಸ್ತ್ರ ತರಬೇತಿ ನಡೆಸಿರುವುದು ಬೆಳಕಿಗೆ ಬಂದಿತ್ತು.