ಅಮೇರಿಕಾದ ಡೆಮೊಕ್ರೆಟಿಕ್ ಪಕ್ಷದ ‘ಆನ್‌ಲೈನ್’ ರಾಷ್ಟ್ರೀಯ ಸಮ್ಮೇಳನದ ಪ್ರಾರ್ಥನಾ ಸಭೆಯಲ್ಲಿ ವೇದ ಹಾಗೂ ಮಹಾಭಾರತದ ಶ್ಲೋಕಗಳ ಪಠಣ !

ಭಾರತದ ಎಷ್ಟು ಜನಪ್ರತಿನಿಧಿಗಳು ಸಮ್ಮೇಳನವನ್ನು ವೇದಮಂತ್ರ ಪಠಣ ಅಥವಾ ಸ್ತೋತ್ರ ಪಠಣದಿಂದ ಆರಂಭಿಸುತ್ತಾರೆ ?

ಅಮೇರಿಕಾದ ರಾಷ್ಟ್ರಾಧ್ಯಕ್ಷ ಸ್ಥಾನಕ್ಕಾಗಿ ಬಯೋಡೇನ್ ಹಾಗೂ ಉಪರಾಷ್ಟ್ರಪತಿ ಸ್ಥಾನಕ್ಕಾಗಿ ಭಾರತೀಯ ಸಂಜಾತೆ ಸಿನೆಟರ್ ಕಮಲಾ ಹ್ಯಾರಿಸ್

ವಾಶಿಂಗ್‌ಟನ್(ಅಮೇರಿಕಾ) – ಅಮೇರಿಕಾದ ಡೆಮೊಕ್ರೆಟಿಕ್ ಪಕ್ಷದ ‘ಆನ್‌ಲೈನ್’ ರಾಷ್ಟ್ರೀಯ ಸಮ್ಮೇಳನವು ‘ಸರ್ವಧರ್ಮ ಪ್ರಾರ್ಥನಾಸಭೆ’ಯ ಮೂಲಕ ಆರಂಭವಾಯಿತು. ಇದರಲ್ಲಿ ವೇದ ಹಾಗೂ ಮಹಾಭಾರತಗಳ ಶ್ಲೋಕ, ಅದೇರೀತಿ ಸಿಕ್ಖ್ ಧರ್ಮದ ‘ಅರದಾಸ’ನನ್ನೂ ಪಠಿಸಲಾಯಿತು. ಟೆಕ್ಸಾಸ್(ಕೆನಡಾ)ನಲ್ಲಿಯ ಚಿನ್ಮಯ ಮಿಶನ್‌ನ ಓರ್ವ ಅನುಯಾಯಿಯು ವೇದಮಂತ್ರೋಚ್ಚಾರ ಮಾಡಿದರು.
ಅಮೇರಿಕಾದ ಎಲ್ಲಕ್ಕಿಂತ ದೊಡ್ಡ ಹಿಂದೂ ಸಂಘಟನೆಯಾಗಿರುವ ಚಿನ್ಮಯ ಮಿಶನ ಡಲ್ಲಾಸ ಫೋರ್ಟ್ ವರ್ಥನ ಬೋರ್ಡ್‌ನ ಸದಸ್ಯೆ ನಿಲಿಮಾ ಗೊನುಗುಂಟಲಾರವರು ಶಾಂತಿಪಾಠವನ್ನು ಓದಿದರು. ಬಾಯಡೆನ ಹಾಗೂ ಹ್ಯಾರಿಸ್ ಇವರಿಗಾಗಿ ಅವರು ಮಹಾಭಾರತದ ‘ಯತೋ ಕೃಷ್ಣ ತತೋ ಧರ್ಮ, ಯತೋ ಧರ್ಮ ತತೋ ಜಯ’, ಈ ಶ್ಲೋಕವನ್ನು ಪಠಿಸಿದರು. ‘ಆಗಸ್ಟ್ ೧೭ ರಿಂದ ಆರಂಭವಾದ ಈ ಸಮ್ಮೇಳನದಲ್ಲಿ ಡೆಮೊಕ್ರೆಟಿಕ್ ಪಕ್ಷದಿಂದ ಜೋ ಬಾಯಡೆನ್ ಇವರಿಗೆ ಅಮೇರಿಕಾದ ರಾಷ್ಟ್ರಾಧ್ಯಕ್ಷ ಸ್ಥಾನಕ್ಕಾಗಿ ಹಾಗೂ ಭಾರತೀಯ ಸಂಜಾತೆ ಸಿನೆಟರ್ ಕಮಲಾ ಹ್ಯಾರಿಸ್ ಇವರನ್ನು ಉಪರಾಷ್ಟ್ರಪತಿ ಸ್ಥಾನಕ್ಕಾಗಿ ಅಭ್ಯರ್ಥಿಯಾಗಿ ಅಧಿಕೃತವಾಗಿ ಘೋಷಣೆಯನ್ನು ಮಾಡಲಿದ್ದಾರೆ.