ಭಗವಾನ ಶ್ರೀಕೃಷ್ಣ ಹಾಗೂ ಗೋಪಿಯರ ಅಶ್ಲೀಲ ಚಿತ್ರವನ್ನು ಬಿಡಿಸುವ ಅಸ್ಸಾಂನ ಹಿಂದೂದ್ವೇಷಿ ಚಿತ್ರಕಾರ ಆಕ್ರಮ ಹುಸೇನ್ ಮೇಲೆ ೫ ವರ್ಷಗಳ ನಂತರವೂ ಕ್ರಮ ಕೈಗೊಂಡಿಲ್ಲ !

ಪ್ರಸಾರ ಮಾಧ್ಯಮದಿಂದ ಆಕ್ಷೇಪಾರ್ಹ ಚಿತ್ರ ಪುನಃ ಪ್ರಸಾರ

ಹುಸೇನ್ ಮೇಲೆ ಕಠಿಣ ಕ್ರಮ ಕೈಗೊಳ್ಳುವಂತೆ ‘ಇಸ್ಕಾನ್’ನಿಂದ ಭಾಜಪ ಸರಕಾರಕ್ಕೆ ಬೇಡಿಕೆ

  • ಕೇಂದ್ರದಲ್ಲಿ ಹಾಗೂ ಈಗ ಅಸ್ಸಾಂನಲ್ಲಿ ಭಾಜಪದ ಸರಕಾರ ಇರುವಾಗ ಅದು ಇಲ್ಲಿಯವರೆಗೆ ಮತಾಂಧ ಹುಸೇನ್ ಮೇಲೆ ಕಠಿಣ ಶಿಕ್ಷೆ ಏಕೆ ನೀಡಲಿಲ್ಲ ? ಈಗಲಾದರೂ ಸರಕಾರ ಹುಸೇನ್ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕು, ಎಂದು ಹಿಂದೂಗಳ ಅಪೇಕ್ಷೆಯಾಗಿದೆ!
  • ಎಲ್ಲಿ ಮಹಮ್ಮದ ಪೈಗಂಬರ್‌ರ ಅವಮಾನ ಆಗಿದೆ ಎಂದು ಆರೋಪಿಸಿ ನೇರ ಹಿಂಸಾಚಾರಕ್ಕಿಳಿಯುವ ಮತಾಂಧರು ಮತ್ತು ಎಲ್ಲಿ ಶ್ರೀಕೃಷ್ಣನ ಅಶ್ಲೀಲ ವಿಡಂಬನೆಯಾದರೂ ಅದರ ವಿರುದ್ಧ ರಸ್ತೆಗಿಳಿಯುವುದು ಬಿಡಿ; ಸಣ್ಣ ಖಂಡನೆಯನ್ನೂ ವ್ಯಕ್ತ ಮಾಡದ ಹೆಚ್ಚಿನ ಹಿಂದೂಗಳು!
  • ಶ್ರೀಕೃಷ್ಣನ ಅಶ್ಲೀಲ ಚಿತ್ರವನ್ನು ಬಿಡಿಸುವ ಮತಾಂಧ ಚಿತ್ರಕಾರ ಅಕ್ರಮ ಹುಸೇನ್ ಆತ ಮಹಮ್ಮದ ಪೈಗಂಬರರ ಅಶ್ಲೀಲ ಚಿತ್ರ ಬಿಡಿಸುವುದಿಲ್ಲ, ಎಂಬುದು ಗಮನದಲ್ಲಿಡಿ !

ಗೌಹಾಟಿ(ಅಸ್ಸಾಂ) – ೨೦೧೫ ರಲ್ಲಿ ಭಗವಾನ ಶ್ರೀಕೃಷ್ಣ ಹಾಗೂ ಗೋಪಿಯರ ಅಶ್ಲೀಲ ಚಿತ್ರವನ್ನು ಬಿಡಿಸಿದ್ದ ಗೌಹಾಟಿ(ಅಸ್ಸಾಂ)ನಲ್ಲಿಯ ಹಿಂದೂದ್ವೇಷಿ ಆಕ್ರಮ ಹುಸೇನ್‌ನ ಮೇಲೆ ೫ ವರ್ಷಗಳ ನಂತರವೂ ಕ್ರಮ ಕೈಗೊಂಡಿಲ್ಲ. ಸದ್ಯ ಇದೇ ಚಿತ್ರ ಪುನಃ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದ್ದು ಹಿಂದೂಗಳ ಆಕ್ರೋಶ ವ್ಯಕ್ತವಾಗುತ್ತಿದೆ. ‘ಇಸ್ಕಾನ್’ ಈ ಸಂಘಟನೆಯು ಅಸ್ಸಾಂನ ಮುಖ್ಯಮಂತ್ರಿ ಸರ್ವಾನಂದ ಸೋನವಾಲರವರಲ್ಲಿ ಹುಸೇನ್ ಮೇಲೆ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿದ್ದಾರೆ.

ಭಗವಾನ ಶ್ರೀಕೃಷ್ಣನ ವಿಡಂಬನೆಯನ್ನು ಮಾಡುವ ಈ ಚಿತ್ರವು ೨೦೧೫ ರಲ್ಲಿ ‘ಗೌಹಾಟಿ ರಾಜ್ಯ ಆರ್ಟ್ ಗ್ಯಾಲರಿ’ ಯಲ್ಲಿ ನರವೇರಿದ್ದ ಚಿತ್ರಪ್ರದರ್ಶನದಲ್ಲಿ ಇಡಲಾಗಿತ್ತು. (ಹಿಂದೂದ್ವೇಷಿ ಚಿತ್ರಕಾರ ಮ.ಫಿ. ಹುಸೇನ್‌ನ ಹಿಂದೂದ್ವೇಷದ ವಂಶವನ್ನು ಮುಂದೆ ಕೊಂಡೊಯ್ಯುವ ಅಕ್ರಮ ಹುಸೇನ್ ! ಹಿಂದೂಗಳೇ, ಇಂತಹವರನ್ನು ಕಾನೂನುಮಾರ್ಗದಿಂದ ವಿರೋಧಿಸಿ ಹಾಗೂ ಆತನ ಮೇಲೆ ಕಾನೂನು ಕ್ರಮ ಕೈಗೊಳ್ಳುವ ತನಕ ಅದರ ಬೆಂಬತ್ತುವಿಕೆಯನ್ನು ಮಾಡಿ! – ಸಂಪಾದಕರು)

೫ ವರ್ಷಗಳ ಹಿಂದೆ ‘ಹಿಂದೂ ಲೀಗಲ್ ಸೆಲ್’ ಕೂಡಾ ದೂರನ್ನು ದಾಖಲಿಸಿತ್ತು !

೨೦೧೫ ರಲ್ಲಿ ಹುಸೇನ್ ವಿರುದ್ಧ ‘ಹಿಂದೂ ಲೀಗಲ್ ಸೆಲ್’ನ ಆಸ್ಸಾಂನ ಸಂಯೋಜಕರಾದ ನ್ಯಾಯವಾದಿ ಧರ್ಮಾನಂದ ದೇವ ಇವರು ಪೊಲೀಸರಲ್ಲಿ ದೂರನ್ನು ದಾಖಲಿಸಿದ್ದರು. ಆಗ ಪೊಲೀಸರು ಹುಸೇನ ಹಾಗೂ ‘ಗೌಹಾಟಿ ರಾಜ್ಯ ಆರ್ಟ್ ಗ್ಯಾಲರಿ’ಯ ಅಧಿಕಾರಿಗಳ ವಿರುದ್ಧ ಭಾರತೀಯ ದಂಡಸಂಹಿತೆ ಕಲಂ ೩೪ ಹಾಗೂ ೨೯೫(ಅ) ಅಂತರ್ಗತದಲ್ಲಿ ಅಪರಾಧವನ್ನು ದಾಖಲಿಸಲಾಗಿತ್ತು.

ಈ ಚಿತ್ರದಲ್ಲೇನಿದೆ ?

ಅಕ್ರಮ ತನ್ನ ಚಿತ್ರದಲ್ಲಿ ಭಗವಾನ ಶ್ರೀಕೃಷ್ಣನನ್ನು ೭ ಅರೆ ನಗ್ನ ಗೋಪಿಯರೊಂದಿಗೆ ಸರಾಯಿ ಅಂಗಡಿಯಲ್ಲಿ ನಿಂತಿರುವಂತೆ ತೋರಿಸಿದ್ದಾನೆ. ಅದರಲ್ಲಿ ಓರ್ವ ಅರೆ ನಗ್ನ ಅವಸ್ಥೆಯಲ್ಲಿರುವ ಗೋಪಿಯು ಭಗವಾನ ಶ್ರೀಕೃಷ್ಣನನ್ನು ಚುಂಬಿಸುವಂತೆ ಮತ್ತು ಇನ್ನೋರ್ವ ಶ್ರೀಕೃಷ್ಣನ ಕಾಲಿನ ಹತ್ತಿರ ಮಂಡಿಯೂರಿ ಸಂತಾಪಜನಕ ಸ್ಥಿತಿಯಲ್ಲಿ ಕುಳಿತಿರುವ ದೃಶ್ಯದಲ್ಲಿ ತೋರಿಸಲಾಗಿದೆ.

ಹುಸೇನನು ತ್ರಿವರ್ಣಧ್ವಜದ ಬಗ್ಗೆಯೂ ಘೋರ ಅವಮಾನಿಸಿದ್ದ !

ಭಗವಾನ ಶ್ರೀಕೃಷ್ಣನ ವಿಡಂಬನಾತ್ಮಕ ಚಿತ್ರ ಬಿಡಿಸಿದ ನಂತರ ಹುಸೇನ್ ತ್ರಿವರ್ಣದಿಂದ ಸರಾಯಿಯ ಬಾಟಲಿ ಹಾಗೂ ಒಳ ಉಡುಪುಗಳು ಹೊರ ಬರುತ್ತಿರುವಂತೆ ಚಿತ್ರವನ್ನು ಬಿಡಿಸಿದ್ದಾನೆ. ಇದರ ವಿರುದ್ಧ ‘ಹಿಂದೂ ಜಾಗರಣ ಮಂಚ್’ ಈ ಸಂಘಟನೆಯು ಸ್ಥಳೀಯ ಪೊಲೀಸ್ ಠಾಣೆಯಲ್ಲಿ ಹಾಗೂ ನ್ಯಾಯವಾದಿ ಧರ್ಮಾನಂದ ದೇವ ಇವರು ಸಿಲಚರನಲ್ಲಿ ಕ್ರಿಮಿನಲ್ ಅಪರಾಧವನ್ನು ದಾಖಲಿಸಿದ್ದರು.