ಪರಾತ್ಪರ ಗುರು ಡಾ. ಆಠವಲೆ ಇವರ ತೇಜಸ್ವಿ ವಿಚಾರ

ಹಿಂದೂ ರಾಷ್ಟ್ರದ ಸ್ಥಾಪನೆಯಾಗಲು ನಾವು ಭಕ್ತರಾಗುವುದು ಆವಶ್ಯಕ
ಶ್ರೀರಾಮನು ಸ್ವತಃ ಈಶ್ವರ ಅವತಾರನಾಗಿದ್ದನು. ಪಾಂಡವರ ಸಮಯದಲ್ಲಿ ಪೂರ್ಣಾವತಾರ ಶ್ರೀಕೃಷ್ಣನಿದ್ದನು. ಛತ್ರಪತಿ ಶಿವಾಜಿ ಮಹಾರಾಜರ ಸಮಯದಲ್ಲಿ ಸಮರ್ಥ ರಾಮದಾಸ ಸ್ವಾಮಿಗಳು ಇದ್ದರು. ಇದರಿಂದ ಈಶ್ವರಿ ರಾಜ್ಯದ ಸ್ಥಾಪನೆಯನ್ನು ಈಶ್ವರನು ಸ್ವತಃ ಮಾಡುತ್ತಾನೆ ಅಥವಾ ಸಂತರಿಂದ ಮಾಡಿಸಿಕೊಳ್ಳುತ್ತಾನೆ ಎಂಬುದು ಗಮನಕ್ಕೆ ಬರುತ್ತದೆ. ‘ಈಗ ಹಿಂದೂ ರಾಷ್ಟ್ರದ ಸ್ಥಾಪನೆಯನ್ನು ಈಶ್ವರನು ಮಾಡಲಿ ಅಥವಾ ಸಂತರಿಂದ ಮಾಡಿಸಿಕೊಳ್ಳಬೇಕು, ಎಂಬುದಕ್ಕಾಗಿ ನಾವು ಅವರ ಭಕ್ತರಾಗುವುದು ಆವಶ್ಯಕವಾಗಿದೆ. – ಪರಾತ್ಪರ ಗುರು ಡಾ. ಆಠವಲೆ