‘ಭಾರತ ಮಾತಾ ಕಿ ಜೈ’ ಹಾಗೂ ‘ವಂದೇ ಮಾತರಮ್’ನ ಘೋಷಣೆ ನೀಡದ ದೆಹಲಿಯ ಮುಖ್ಯಮಂತ್ರಿ ಕೆಜರಿವಾಲ !

ಕೆಂಪು ಕೋಟೆಯಲ್ಲಿನ ಸ್ವಾತಂತ್ರ್ಯದಿನದ ಕಾರ್ಯಕ್ರಮ

ದೇಶಭಕ್ತಿಯ ಘೋಷಣೆ ಕೂಗದ ಒಬ್ಬರು ಒಂದು ರಾಜ್ಯದ ಮುಖ್ಯಮಂತ್ರಿಯಾಗಬಹುದು ಇಂತಹ ಘಟನೆ ಕೇವಲ ಭಾರತದಲ್ಲಿ ಮಾತ್ರ ಸಾಧ್ಯ ! ಇಂತಹವರಿಗೆ ಜನರೇ ಪ್ರಶ್ನಿಸುವುದು ಆವಶ್ಯಕವಾಗಿದೆ !

ನವ ದೆಹಲಿ – ಆಗಸ್ಟ್ ೧೫ ರ ಸ್ವಾತಂತ್ರ್ಯದಿನದಂದು ಕೆಂಪು ಕೋಟೆಯಲ್ಲಿ ಧ್ವಜವಂದನೆಯ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿಯವರು ಕೈಯನ್ನು ಎತ್ತಿ ‘ಭಾರತಮಾತಾ ಕೀ ಜೈ’ ಹಾಗೂ ‘ವಂದೇ ಮಾತರಮ್’ ಘೋಷಣೆ ನೀಡುವಂತೆ ಎಲ್ಲರಿಗೆ ಕರೆ ನೀಡಿದ್ದರು. ಇದೇ ಸಮಯದಲ್ಲಿ ಅಲ್ಲಿ ಉಪಸ್ಥಿತ ಎಲ್ಲರೂ ಮೋದಿಯವರ ಕರೆಗೆ ಸ್ಪಂದಿಸುತ್ತಾ ಘೋಷಣೆಯನ್ನು ಕೂಗಿದರು; ಆದರೆ ದೆಹಲಿಯ ಮುಖ್ಯಮಂತ್ರಿ ಅರವಿಂದ ಕೆಜರಿವಾಲ ಇವರು ಘೋಷಣೆ ಕೂಗಲಿಲ್ಲ, ಇದರ ವಿಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿದೆ. ಇದಕ್ಕೆ ಭಾಜಪದ ದೆಹಲಿಯ ವಕ್ತಾರರಾದ ತಾಜಿಂದರ ಪಾಲ ಸಿಂಹ ಬಗ್ಗಾ ಇವರು ಟ್ವೀಟ್ ಮಾಡಿ ಟೀಕಿಸಿದ್ದಾರೆ.