ಅಲ್ಪಸಂಖ್ಯಾತರು ಕಡಿಮೆ ಶಿಕ್ಷಣವನ್ನು ಪಡೆದುದರಿಂದ ಅವರು ಭಯೋತ್ಪಾದನೆಯತ್ತ ಹೊರಳುತ್ತಾರೆ, ಎಂದು ಹೇಳುವವರು ಈಗ ಇದರ ಬಗ್ಗೆ ಏನೂ ಹೇಳುವುದಿಲ್ಲ !
ಇಂತಹ ಉನ್ನತ ಶಿಕ್ಷಣ ಪಡೆದ ಮತಾಂಧರಿಂದಾಗಿ ಜನರು ಯಾವುದೇ ಅಲ್ಪಸಂಖ್ಯಾತರ ಮೇಲೆ ಎಂದಾದರೂ ನಂಬಿಕೆ ಇಡಬಹುದೇ ?
ಬೆಂಗಳೂರು – ಇಸ್ಲಾಮಿಕ್ ಸ್ಟೇಟ್‌ನ ಖುರಾಸಾನ ಗುಂಪಿಗಾಗಿ ಸಕ್ರಿಯವಿರುವ ಡಾ. ಅಬ್ದೂರ್ ರೆಹಮಾನ್ ಈ ೨೮ ವರ್ಷದ ನೇತ್ರತಜ್ಞನನ್ನು ರಾಷ್ಟ್ರೀಯ ತನಿಖಾ ತಂಡವು (ಎನ್.ಐ.ಎ.ಯು) ಬೆಂಗಳೂರಿನಲ್ಲಿ ಬಂಧಿಸಿದೆ. ಆತ ಇಲ್ಲಿಯ ಎಮ್.ಎಸ್. ರಾಮಯ್ಯ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದ. ಡಾ. ಅಬ್ದೂರ್ ೨೦೧೪ ರಲ್ಲಿ ಸಿರಿಯಾಗೂ ಹೋಗಿ ಬಂದಿದ್ದಾನೆ. ಅಲ್ಲಿ ಇಸ್ಲಾಮಿಕ್ ಸ್ಟೇಟ್‌ನ ಭಯೋತ್ಪಾದಕರ ಚಿಕಿತ್ಸೆಗಾಗಿ ಆತ ೧೦ ದಿನ ಉಳಿದಿದ್ದ. ಸದ್ಯ ಆತ ‘ಇಸ್ಲಾಮಿಕ್ ಸ್ಟೇಟ್’ನ ಭಯೋತ್ಪಾದಕರ ಸಹಾಯಕ್ಕಾಗಿ ‘ಮೆಡಿಕಲ್ ಆಪ್’ ತಯಾರಿಸುತ್ತಿದ್ದ. ಈ ಪ್ರಕರಣದಲ್ಲಿ ಎನ್.ಐ.ಎ.ಯು ಪುಣೆಯಿಂದ ೨೨ ವರ್ಷದ ಸಾದಿಯಾ ಅನ್ವರ ಶೇಖಳನ್ನೂ ಬಂಧಿಸಿದ್ದಾರೆ.
೨೦೧೮ ರಲ್ಲಿ ಖುರಾಸಾನ್ ಗುಂಪು ಭಾರತದಲ್ಲಿ ಆತ್ಮಾಹುತಿ ಹಲ್ಲೆ ಮಾಡಲು ಪ್ರಯತ್ನಿಸಿತ್ತು. ಜಗತ್ತಿನಾದ್ಯಂತ ಇಸ್ಲಾಮಿಕ್ ಸ್ಟೇಟ್‌ನ ೨೦ ಶಾಖೆಗಳು ಸಕ್ರಿಯವಿದೆ. ಅದರಲ್ಲಿ ಕೆಲವರು ಆಧುನಿಕ ತಂತ್ರಜ್ಞಾನವನ್ನು ಉಪಯೋಗಿಸುತ್ತಿದ್ದಾರೆ. ಅದರಲ್ಲಿ ಡ್ರೋನ್ ಕೂಡ ಸೇರಿದೆ. ಈ ಗುಂಪಿನಿಂದ ನ್ಯೂಯಾರ್ಕ್ ಮೇಲೆ ಆಕ್ರಮಣ ಮಾಡುವ ಸಂಚನ್ನು ರೂಪಿಸಿತ್ತು. ೨೦೧೭ ರಲ್ಲಿ ಈ ಗುಂಪು ಯುರೋಪಿನ ಸ್ವಿಡನ್‌ನ ಸ್ಟಾಕ್‌ಹೋಮ್ ಪಟ್ಟಣದಲ್ಲಿ ಮಾಡಿದ ಆಕ್ರಮಣದಲ್ಲಿ ೫ ಜನರು ಸಾವನ್ನಪ್ಪಿದ್ದರು ಎಂದು ಅಮೇರಿಕಾ ಹೇಳಿದೆ.