ಎಸ್.ಡಿ.ಪಿ.ಐ. ಈ ಮತಾಂಧ ರಾಜಕೀಯ ಪಕ್ಷದ ಕಛೇರಿಯಲ್ಲಿ ಮಾರಕಾಸ್ತ್ರಗಳೊಂದಿಗೆ ೮ ಗಲಭೆಕೋರರ ಬಂಧನ

ಬೆಂಗಳೂರು ಗಲಭೆ ಪ್ರಕರಣ

  • ಬೆಂಗಳೂರು ಹಿಂಸಾಚಾರ ಯಾರು ಮಾಡಿದರು ? ಇದು ಆಗಲೂ ಸ್ಪಷ್ಟವಾಗಿತ್ತು ಮತ್ತು ಈಗಲೂ ಪುರಾವೆ ಸಹಿತ ಸ್ಪಷ್ಟವಾಗುತ್ತಿದೆ; ಆದರೆ ಇದರ ಬಗ್ಗೆ ಯಾರೂ ಮಾತನಾಡುವುದಿಲ್ಲ, ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ !

  • ಹಿಂದೂ ಸಂಘಟನೆಗಳು ಅಪ್ಪಿತಪ್ಪಿ ಒಂದು ಕಲ್ಲು ಎಸೆಯುತ್ತಿದ್ದರೆ ಈ ಜಾತ್ಯತೀತವಾದಿಗಳು ಇಲ್ಲಿಯವರೆಗೆ ಈ ಸಂಘಟನೆಯ ಮೇಲೆ ನಿರ್ಬಂಧ ಹೇರಿ ಎಂದು ದೇಶದಾದ್ಯಂತ ಅಭಿಯಾನ ನಡೆಸುತ್ತಿದ್ದರು !

ಬೆಂಗಳೂರು : ಬೆಂಗಳೂರು ಗಲಭೆ ಪ್ರಕರಣದಲ್ಲಿ ಹೆಗ್ಗಡೆನಗರದ ಎಸ್.ಡಿಪಿಐ ಕಚೇರಿ ಮೇಲೆ ನಡೆದ ಸಿಸಿಬಿ ಪೊಲೀಸರ ದಾಳಿ ಮಾಡಿ ೮ ಮತಾಂಧರನ್ನು ಬಂಧಿಸಿದ್ದಾರೆ. ಈ ಸಮಯದಲ್ಲಿ ಪೊಲೀಸರು ಕಬ್ಬಿಣದ ರಾಡ್, ಬ್ಯಾಟ್ ಸಮೇತ ಹಲವು ಮಾರಕಾಸ್ತ್ರಗಳು ಪತ್ತೆಯಾಗಿವೆ. ಇದರಿಂದ ಪೊಲೀಸರಿಗೆ ಈ ಗಲಭೆಯಲ್ಲಿ ‘ಎಸ್‌ಡಿಪಿಐ’ ಭಾಗಿಯಾಗಿದ್ದರ ಬಗ್ಗೆ ಪುರಾವೆಗಳು ಸಿಕ್ಕಿದೆ. ಇದು ವರೆಗೂ ಬಂಧಿತರಾದ ಪ್ರತಿಯೊಬ್ಬನ ಹೆಸರಲ್ಲಿರುವ ಫೇಸ್‌ಬುಕ್, ಟ್ವಿಟರ್ ಹಾಗೂ ಇನ್‌ಸ್ಟಾಗ್ರಾಂ ಖಾತೆಯನ್ನು ಪರಿಶೀಲಿಸಲಾಗುತ್ತಿದೆ. ಅದರಲ್ಲಿನ ಮಾಹಿತಿ ಆಧರಿಸಿಯೇ ಪೊಲೀಸರು ಈ ದಾಳಿ ನಡೆಸಿದ್ದಾರೆ.

ಗಲಭೆಗಾಗಿ ಎಸ್‌ಡಿ.ಪಿ.ಐ.ಮುಖಂಡ ಮುಜಾಮಿಲ್ ಪಾಷಾನಿಂದ ಕಛೇರಿಯಲ್ಲಿ ಸಭೆ

ಎಸ್.ಡಿ.ಪಿ.ಐ. ಮುಖಂಡ ಮುಜಾಮಿಲ್ ಪಾಷಾ ಹಾಗೂ ಇತರ ಸದಸ್ಯರು ಗಲಭೆ ನಡೆಸುವುದಕ್ಕೆ ಮೊದಲೇ ಹೆಗ್ಗಡೆ ನಗರದ ಕಚೇರಿಯಲ್ಲೇ ಹಲವು ಬಾರಿ ಸಭೆ ನಡೆಸಿದ್ದರು. ಗಲಭೆ ನಡೆದ ದಿನದಂದು ಕಚೇರಿಯಲ್ಲಿ ಹಲವರು ಸೇರಿದ್ದರು. ಅವರಲ್ಲಿ ಕೆಲವರು ಡಿ.ಜೆ.ಹಳ್ಳಿ ಪೊಲೀಸ್ ಠಾಣೆ ಬಳಿ ಗಲಭೆ ಎಬ್ಬಿಸಿದ್ದರು ಎಂಬ ಮಾಹಿತಿಯನ್ನು ಪೊಲೀಸರು ನೀಡಿದ್ದಾರೆ.