ಫ್ರಾಂಕ್‌ಫರ್ಟ್(ಜರ್ಮನಿ)ನಲ್ಲಿ ಪಾಕಿಸ್ತಾನದ ನಾಗರಿಕರಿಗೆ ಪ್ರತ್ಯುತ್ತರ ನೀಡಿದ ಭಾರತೀಯ ಯುವಕ !

ಇಂತಹ ಯುವಕರೇ ದೇಶದ ಶಕ್ತಿಯಾಗಿದ್ದಾರೆ!

ನವ ದೆಹಲಿ – ಆಗಸ್ಟ್ ೧೫ ರಂದು ಭಾರತದ ಸ್ವಾತಂತ್ರ್ಯದಿನದಂದು ಜರ್ಮನಿಯ ಫ್ರಾಂಕ್‌ಫರ್ಟ್‌ದಲ್ಲಿ ಪಾಕಿಸ್ತಾನಿ ನಾಗರಿಕರು ಪಾಕಿಸ್ತಾನದ ಸ್ವಾತಂತ್ರ್ಯದಿನವನ್ನು ಆಚರಿಸುವಾಗ ಭಾರತವಿರೋಧಿ ಹಾಗೂ ಪ್ರಧಾನಿ ನರೇಂದ್ರ ಮೋದಿಯ ವಿರುದ್ಧ ಘೋಷಣೆಗಳನ್ನು ಕೂಗುತ್ತಿದ್ದರು. ಈ ಸಮಯದಲ್ಲಿ ಪ್ರಶಾಂತ ವೆಂಗುರ್ಲೆಕರ ಈ ಭಾರತೀಯ ಯುವಕನು ಒಬ್ಬನೇ ಪ್ರತ್ಯುತ್ತರ ನೀಡಿದನು. ಪಾಕಿಸ್ತಾನದ ನಾಗರಿಕರು ಇಲ್ಲಿ ಪಾಕಿಸ್ತಾನದ ಧ್ವಜವನ್ನು ಹಿಡಿದು ಮೆರವಣಿಗೆಯನ್ನು ಮಾಡುತ್ತಿರುವಾಗ ಪ್ರಶಾಂತ ವೆಂಗುರ್ಲೆಕರ ಇವರು ರಸ್ತೆಯ ಒಂದು ಬದಿಯಲ್ಲಿ ನಿಂತು ಕೈಯಲ್ಲಿ ಚಿಕ್ಕದಾದ ೨ ಭಾರತೀಯ ಧ್ವಜಗಳನ್ನು ಹಿಡಿದು ಅವರ ಎದುರಿಗೆ ಹಾರಿಸುತ್ತಿದ್ದರು.

‘ಬಾಪ ಬಾಪ ಹೊತಾ ಹೈ’ (ತಂದೆ ಯಾವಾಗಲೂ ತಂದೆಯೇ ಆಗಿರುತ್ತಾನೆ) ಎಂದು ಪಾಕಿಸ್ತಾನದ ನಾಗರಿಕರನ್ನು ಉದ್ದೇಶಿಸಿ ಹೇಳುತ್ತಿದ್ದರು. ಇದರಿಂದ ಪಾಕಿಸ್ತಾನಿ ನಾಗರಿಕರು ಇವರತ್ತ ಧಾವಿಸಿ ಬಂದರು, ಆದರೂ ಅವರು ತ್ರಿವರ್ಣಧ್ವಜವನ್ನು ಹಾರಿಸುತ್ತಾ ದಿಟ್ಟವಾಗಿ ಹೆದರದೇ ನಿಂತಿದ್ದರು. ಈ ‘ವಿಡಿಯೋ’ ಅವರು ತಮ್ಮ ಟ್ವಿಟರ್ ಖಾತೆಯಲ್ಲಿ ಪೋಸ್ಟ್ ಮಾಡಿದ್ದರು. ಪ್ರಶಾಂತ ವೆಂಗುರ್ಲೆಕರ ಇವರು ಸಿವಿಲ್ ಇಂಜಿನಿಯರ ಆಗಿದ್ದು ಅವರು ಜರ್ಮನಿಯಲ್ಲೇ ಕೆಲಸ ಮಾಡುತ್ತಿದ್ದಾರೆ.