ಚೀನಾದ ೫೨ ಆಪ್‌ಗಳನ್ನು ನಿಷೇಧಿಸಿ ! – ಗುಪ್ತಚರ ವಿಭಾಗದಿಂದ ಸರಕಾರಕ್ಕೆ ಶಿಫಾರಸ್ಸು

ಗುಪ್ತಚರ ಇಲಾಖೆಯು ಚೀನಾದ ೫೨ ಅಪಾಯಕಾರಿ ‘ಆಪ್ಸ್’ ನಿಷೇಧಿಸಿ ಅಥವಾ ದೇಶದ ನಾಗರಿಕರಲ್ಲಿ ಈ ೫೨ ‘ಆಪ್ಸ್’ ಉಪಯೋಗಿಸದಿರಿ, ಎಂಬ ಎಚ್ಚರಿಕೆಯನ್ನು ನೀಡಿದೆ. ಇದರ ವರದಿಯನ್ನು ಸರಕಾರಕ್ಕೆ ನೀಡಿ ಅದರ ಮೇಲೆ ನಿರ್ಬಂಧವನ್ನು ಹೇರುವ ಬಗ್ಗೆ ಶಿಫಾರಸ್ಸನ್ನು ಮಾಡಿದೆ.

ಕೇರಳದ ಮುಖ್ಯಮಂತ್ರಿಯ ಮಗಳ ಮದುವೆಯಲ್ಲಿ ಸಂಘದ ಸ್ವಯಂಸೇವಕನ ಹತ್ಯೆಯ ಮತಾಂಧ ಆರೋಪಿಗೆ ‘ಅತಿಗಣ್ಯ ವ್ಯಕ್ತಿ’ಯೆಂದು’ ಉಪಸ್ಥಿತಿ !

ಜೂನ್ ೧೫ ರಂದು ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಇವರ ಮಗಳ ಮದುವೆಯ ಸಮಾರಂಭದಲ್ಲಿ ‘ಅತಿಗಣ್ಯ ವ್ಯಕ್ತಿ’ ಎಂದು ಉಪಸ್ಥಿತರಿದ್ದ ಮಹಮ್ಮದ ಹಾಶಿಮ ಈತ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಕರ್ತ ಸುರೇಶ ಬಾಬುವಿನ ಹತ್ಯೆಯ ಅಪರಾಧಿಯಾಗಿದ್ದಾನೆ. ಆತನಿಗೆ ‘ಪೆರೊಲ್’ ಮೇಲೆ ಬಿಡಲಾಗಿತ್ತು. ಇದರಿಂದ ಭಾಜಪವು ವಿಜಯನ್ ಇವರಲ್ಲಿ ಉತ್ತರ ಕೇಳಿದ್ದಾರೆ.

ಉನ್ನಾವ (ಉತ್ತರಪ್ರದೇಶ) ಇಲ್ಲಿಯ ಭಾಜಪದ ಶಾಸಕ ಸಾಕ್ಷಿ ಮಹಾರಾಜ ಇವರ ಮೇಲೆ ಬಾಂಬ್ ಹಲ್ಲೆ ಮಡುವುದಾಗಿ ಬೆದರಿಸಿದ್ದ ಮತಾಂಧನ ಬಂಧನ

ಇಲ್ಲಿಯ ಭಾಜಪದ ಶಾಸಕ ಸಾಕ್ಷಿ ಮಹಾರಾಜ ಇವರಿಗೆ ಕರೆ ಮಾಡಿ ಬಾಂಬ್ ಎಸೆದು ಹತ್ಯೆ ಮಾಡುವುದಾಗಿ ಬೆದರಿಕೆಯೊಡ್ಡಿದ ಗಫ್ಫಾರನ್ನು ಬಿಜನೌರ್‌ನಿಂದ ಬಂಧಿಸಲಾಗಿದೆ. ಗಫ್ಫಾರ್ ಕುವೈತ್‌ನಲ್ಲಿ ಇದ್ದಾಗ ಆತ ಬೆದರಿಕೆಯೊಡಿದ್ದನು. ಗಫ್ಫಾರ್ ಭಾರತಕ್ಕೆ ಬಂದನಂತರ ಬಂಧಿಸಲಾಯಿತು.

‘ಚೀನಾದ ವಸ್ತುಗಳನ್ನು ನಿಷೇಧಿಸಲು’ ಅಂತರರಾಷ್ಟ್ರೀಯ ಆಂದೋಲನಕ್ಕೆ ಭಾರತ ಸಹಿತ ಜಗತ್ತಿನ ೧೪ ದೇಶಗಳಲ್ಲಿನ ೧೪೦ ಮುಖ್ಯ ನಗರಗಳಲ್ಲಿ ಉತ್ಸಾಹದಿಂದ ಸಹಭಾಗ !

ಮೊದಲು ಕೊರೋನಾ ವಿಷಾಣು ಹಾಗೂ ಈಗ ಲಡಾಖನಲ್ಲಿ ಭಾರತೀಯ ೨೦ ಸೈನಿಕರ ಹುತಾತ್ಮಕ್ಕೆ ಕಾರಣವಾದ ಕಪಟಿ ಚೀನಾ ಡ್ರೆಗಾನ್‌ಗೆ ಪಾಠ ಕಲಿಸಲು ಸನಾತನ ಸಂಸ್ಥೆ, ಹಿಂದೂ ಜನಜಾಗೃತಿ ಸಮಿತಿ ಹಾಗೂ ಇತರ ಹಿಂದುತ್ವನಿಷ್ಠ ಸಂಘಟನೆಗಳು ಜಂಟಿಯಾಗಿ ಇಂದು ಅಂತರರಾಷ್ಟ್ರೀಯ ಮಟ್ಟದಲ್ಲಿ ಸಾಂಕೇತಿಕ ಆಂದೋಲನ ಮಾಡಲಾಯಿತು.

ನದಿದಡದಲ್ಲಿ ಮರಳು ತೆಗೆಯುತ್ತಿರುವಾಗ ಪ್ರಾಚೀನ ಶಿವ ಮಂದಿರ ಪತ್ತೆ !

ಜೂನ್ ೧೬ ರಂದು ಇಲ್ಲಿಯ ಪೆರುಮಲಾಪಾಡು ಗ್ರಾಮದ ಹತ್ತಿರದ ಪೆನ್ನಾ ನದಿಯ ದಡದಲ್ಲಿ ಮರಳನ್ನು ತೆಗೆಯುತ್ತಿರುವಾಗ ಪ್ರಾಚೀನ ಶಿವ ಮಂದಿರ ಪತ್ತೆಯಾಗಿದೆ. ಮರಳು ತೆಗೆಯುತ್ತಿರುವಾಗ ಆರಂಭದಲ್ಲಿ ಒಂದು ಕಟ್ಟಡ ಸಿಕ್ಕಿತು. ಇನ್ನಷ್ಟು ಮರಳನ್ನು ತೆಗೆದ ನಂತರ ದೇವಸ್ಥಾನ ಕಾಣಿಸಿತು. ನಂತರ ಅದು ಐತಿಹಾಸಿಕ ಶಿವಮಂದಿರ ಇದೆ ಎಂದು ಹೇಳಲಾಗುತ್ತಿದೆ.

ಹಿಂದೂ ಧರ್ಮ ತೊರೆದು ಕ್ರೈಸ್ತರಾದವರಿಗೆ ಕೇರಳ ಸರಕಾರ ೫ ಕೋಟಿ ರೂಪಾಯಿ ಸಹಾಯ !

ಕೇರಳ ರಾಜ್ಯದ ಹಿಂದುಳಿದ ವರ್ಗದ ಅಭಿವೃದ್ಧಿ ನಿಗಮವು ಹಿಂದೂ ಧರ್ಮದ ಪರಿಶಿಷ್ಟಜಾತಿಯಿಂದ ಕ್ರೈಸ್ತರಾಗಿ ಮತಾಂತರವಾದವರಿಗೆ ೨೦೨೦-೨೦೨೧ ವರ್ಷಕ್ಕೆ ೫ ಕೋಟಿ ರೂಪಾಯಿ ಖರ್ಚು ಮಾಡುವ ನಿಯಮವನ್ನು ಮಾಡಿದೆ, ಈ ಆಶಯದ ಆದೇಶವನ್ನು ಮುಖ್ಯ ಕಾರ್ಯದರ್ಶಿ ವಿಶ್ವನಾಥ ಸಿನ್ಹಾ ಇವರು ಹಿಂದುಳಿದ ವರ್ಗದ ಅಭಿವೃದ್ಧಿ ನಿಗಮದ ಅಧ್ಯಕ್ಷ ಹಾಗೂ ಕಾರ್ಯನಿರ್ವಾಹಕರ ಸೂಚನೆಗನುಸಾರ ಜಾರಿಗೆ ತಂದಿದೆ.

ಸಲ್ಮಾನ ಖಾನ್, ಕರಣ ಜೋಹರ ಸಹಿತ ೮ ಜನರ ವಿರುದ್ಧ ನ್ಯಾಯಾಲಯದಲ್ಲಿ ದೂರು ದಾಖಲು

ಹಿಂದಿ ಚಲನಚಿತ್ರ ಸೃಷ್ಟಿಯ ನಾಯಕನಟ ಸುಶಾಂತ ಸಿಂಗ ರಾಜಪೂತ್ ಇವರ ಆತ್ಮಹತ್ಯೆಯ ಪ್ರಕರಣದಲ್ಲಿ ಬಿಹಾರದ ಮುಝಫ್ಫರಪುರದಲ್ಲಿಯ ನ್ಯಾಯವಾದಿ ಸುಧೀರ ಕುಮಾರ್ ಓಝಾರವರು ನ್ಯಾಯಾಲಯದಲ್ಲಿ ನಿರ್ದೇಶಕ ಕರಣ ಜೋಹರ, ಸಂಜಯ ಲೀಲಾ ಭನ್ಸಾಲಿ, ಎಕ್ತಾ ಕಪೂರ್ ಹಾಗೂ ನಟ ಸಲ್ಮಾನ ಖಾನ್ ಸಹಿತ ೮ ಜನರ ವಿರುದ್ಧ ದೂರನ್ನು ದಾಖಲಿಸಿದ್ದಾರೆ.

‘#TeachLessonToChina’ಈ ಹ್ಯಾಷ್ ಟ್ಯಾಗ್ ರಾಷ್ಟ್ರೀಯ ಟ್ರೆಂಡ್‌ನಲ್ಲಿ ಮೊದಲನೇ ಸ್ಥಾನದಲ್ಲಿದ್ದರೆ ಜಾಗತಿಕ ಟ್ರೆಂಡ್ ನಲ್ಲಿ ೭ ನೇ ಸ್ಥಾನದಲ್ಲಿ !

ಚೀನಾ ಹಾಗೂ ಭಾರತದ ಸೈನಿಕರ ನಡುವೆ ಆಗಿದ್ದ ಕಾಳಗದಲ್ಲಿ ಭಾರತದ ಒಬ್ಬ ಕರ್ನಲ್ ಸಹಿತ ೨೦ ಸೈನಿಕರು ಹುತಾತ್ಮರಾದರು. ಇದಾದ ನಂತರ ದೇಶವ್ಯಾಪಿ ಆಕ್ರೋಶ ವ್ಯಕ್ತವಾಗುತ್ತಿರುವಾಗ ಟ್ವಿಟರ್‌ನಿಂದಲೂ ವಿರೋಧ ವ್ಯಕ್ತವಾಗಿದೆ. ಜೂನ್ ೧೬ ರಂದು ಬೆಳಿಗ್ಗೆ ರಾಷ್ಟ್ರಪ್ರೇಮಿಗಳಿಂದ ‘#TeachLessonToChina’ ಈ ಹ್ಯಾಷ್‌ಟ್ಯಾಗ್‌ನ ಟ್ರೆಂಡ್ ಆರಂಭಿಸಲಾಯಿತು.

ಚೀನಾದ ಕಪಟ ಯುದ್ಧತಂತ್ರಕ್ಕೆ ಚಾಣಕ್ಯನೀತಿಯಿಂದ ಉತ್ತರಿಸಬೇಕು! – ಹಿಂದೂ ಜನಜಾಗೃತಿ ಸಮಿತಿ

ಲಡಾಖ್‌ನ ಗಾಲ್ವಾನ್ ಕಣಿವೆಯಲ್ಲಿ ಚೀನಾ ಮತ್ತು ಭಾರತ ನಡುವೆ ನಡೆದ ಘರ್ಷಣೆಯಲ್ಲಿ ಓರ್ವ ಭಾರತೀಯ ಕರ್ನಲ್ ಮತ್ತು ಇಬ್ಬರು ಸೈನಿಕರು ಹುತಾತ್ಮರಾಗಿದ್ದಾರೆ. ಹಿಂದೂ ಜನಜಾಗೃತಿ ಸಮಿತಿಯು ಚೀನಾದ ಈ ಕುಕೃತ್ಯವನ್ನು ತೀವ್ರವಾಗಿ ಖಂಡಿಸುತ್ತದೆ. ಕೇಂದ್ರ ಸರಕಾರವು ದೇಶದ ಗಡಿಗಳನ್ನು ಭದ್ರಪಡಿಸಲು ಚಾಣಕ್ಯನೀತಿ ಮತ್ತು ಗೆರಿಲ್ಲಾಯುದ್ಧತಂತ್ರದ ಮೂಲಕ ಚೀನಾಗೆ ಕಠೋರವಾದ ಪ್ರತ್ಯುತ್ತರ ನೀಡಬೇಕು

ದೇಶದಲ್ಲಿ ಕೊರೋನಾ ಪೀಡಿತ ರೋಗಿಗಳ ಗುಣಮುಖರಾಗುವ ಪ್ರಮಾಣ ಶೇ. ೫೦ ರಷ್ಟು ! – ಪ್ರಧಾನಮಂತ್ರಿ ನರೇಂದ್ರ ಮೋದಿ

ಭಾರತದಲ್ಲಿ ಕೊರೋನಾ ಪೀಡಿತ ರೋಗಿಗಳ ಗುಣಮುಖರಾಗುವ ಪ್ರಮಾಣ ಶೇ. ೫೦ ರಷ್ಟಿದೆ, ಎಂಬ ಮಾಹಿತಿಯನ್ನು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮುಖ್ಯಮಂತ್ರಿಗಳೊಂದಿಗೆ ‘ವಿಡಿಯೋ ಕಾನ್ಫರೆನ್ಸ್’ ಮೂಲಕ ಮಾತನಾಡುತ್ತಿರುವಾಗ ನೀಡಿದರು. ‘ಕೊರೋನಾದಿಂದಾಗಿ ಯಾರೆಲ್ಲ ಮೃತಪಟ್ಟಿದ್ದಾರೆ, ಅದು ಖೇದಕರವಾಗಿದೆ’, ಎಂದೂ ಅವರು ಹೇಳಿದ್ದಾರೆ.