ನವ ದೆಹಲಿ – ಗುಪ್ತಚರ ಇಲಾಖೆಯು ಚೀನಾದ ೫೨ ಅಪಾಯಕಾರಿ ‘ಆಪ್ಸ್’ ನಿಷೇಧಿಸಿ ಅಥವಾ ದೇಶದ ನಾಗರಿಕರಲ್ಲಿ ಈ ೫೨ ‘ಆಪ್ಸ್’ ಉಪಯೋಗಿಸದಿರಿ, ಎಂಬ ಎಚ್ಚರಿಕೆಯನ್ನು ನೀಡಿದೆ. ಇದರ ವರದಿಯನ್ನು ಸರಕಾರಕ್ಕೆ ನೀಡಿ ಅದರ ಮೇಲೆ ನಿರ್ಬಂಧವನ್ನು ಹೇರುವ ಬಗ್ಗೆ ಶಿಫಾರಸ್ಸನ್ನು ಮಾಡಿದೆ. ಈ ೫೨ ‘ಆಪ್ಸ್’ ಸುರಕ್ಷಿತವಾಗಿರದೇ ಇದರ ಮಾಧ್ಯಮದಿಂದ ಭಾರತೀಯರ ಮಾಹಿತಿ ದೊಡ್ಡ ಪ್ರಮಾಣದಲ್ಲಿ ವಿದೇಶಕ್ಕೆ ಕಳುಹಿಸಲಾಗುತ್ತಿದೆ’, ಎಂದು ಗುಪ್ತಚರ ಇಲಾಖೆ ಹೇಳಿದೆ. ಭದ್ರತಾ ಸಂಸ್ಥೆಗಳು ಸರಕಾರಕ್ಕೆ ನೀಡಿದ ‘ಆಪ್ಸ್’ಗಳ ಪಟ್ಟಿಯಲ್ಲಿ ‘ಟಿಕ್-ಟಾಕ್’ ‘ಯುಸಿ ಬ್ರೌಝರ’, ‘ಎಕ್ಸೆಂಡರ್’, ‘ಶೇರಿಟ್’, ‘ಕ್ಲಿನ್ ಮಾಸ್ಟರ್’ ಇವುಗಳಂತಹ ‘ಆಪ್ಸ್’ ಸಮಾವೇಶಗೊಂಡಿವೆ. ನಿರ್ಬಂಧ ಹೇರುವ ಬಗೆಗಿನ ಬೇಡಿಕೆಗೆ ರಾಷ್ಟ್ರೀಯ ಸುರಕ್ಷೆ ಪರಿಷತ್ತಿನ ಸಚಿವಾಲಯವು ತಮ್ಮ ಬೆಂಬಲವನ್ನು ವ್ಯಕ್ತಪಡಿಸಿವೆ.