ಮಲೇಷಿಯಾಕ್ಕೆ ಪರಾರಿಯಾಗಿರುವ ಭಯೋತ್ಪಾದಕರಿಗೆ ಸ್ಫೂರ್ತಿದಾಯಕ ಡಾ. ಝಾಕಿರ್ ನಾಯಿಕ್ ಭಾರತಕ್ಕೆ ಮರಳುವ ಕುರಿತು ಹೇಳಿಕೆ
ಕೌಲಾಲಂಪುರ – ಭಾರತಕ್ಕೆ ಹೋಗುವುದು ನನಗೆ ತುಂಬಾ ಸುಲಭ; ಆದರೆ ಅಲ್ಲಿಂದ ಹೊರಬರುವುದು ಕಷ್ಟ ಎಂದು ಭಾರತಕ್ಕೆ ಬೇಕಾಗಿರುವ ಹಾಗೂ ಬಂಧನ ಭೀತಿಯಿಂದ ಮಲೇಷಿಯಾಕ್ಕೆ ಪರಾರಿಯಾಗಿರುವ ಭಯೋತ್ಪಾದಕರ ಸ್ಫೂರ್ತಿಯ ಮೂಲ ಡಾ. ಝಾಕಿರ್ ನಾಯಿಕ ಎಂದು ಹೇಳಿದ್ದಾನೆ. ಪಾಕಿಸ್ತಾನಿ ಯೂಟ್ಯೂಬರ್ ನಾದಿರ್ ಅಲಿ ಇತ್ತೀಚೆಗೆ ಝಾಕಿರ್ ನಾಯಿಕನ ಸಂದರ್ಶನ ನಡೆಸಿದ್ದಾರೆ. ಇದರಲ್ಲಿ ಝಾಕಿರ್ ನಾಯಿಕ್ ಭಾರತಕ್ಕೆ ಮರಳುವ ಕುರಿತು ನಾದಿರ್ ಅಲಿ ಕೇಳಿದ ಪ್ರಶ್ನೆಗೆ ಉತ್ತರಿಸುವಾಗ ಮೇಲಿನ ಹೇಳಿಕೆ ನೀಡಿದ್ದಾನೆ. ಭಾರತವು 2016 ರಲ್ಲಿ ಝಾಕಿರ್ ನಾಯಿಕ್ ಅವನ ‘ಇಸ್ಲಾಮಿಕ್ ರಿಸರ್ಚ್ ಫೌಂಡೇಶನ್’ ಅನ್ನು ನಿಷೇಧಿಸಿತ್ತು. ರಾಷ್ಟ್ರೀಯ ತನಿಖಾ ಸಂಸ್ಥೆಯು ಅವನ ವಿರುದ್ಧ ‘ಯುಎಪಿಎ’ ಕಾಯ್ದೆಯಡಿ ಅಪರಾಧವನ್ನೂ ದಾಖಲಿಸಿದೆ.
ಝಾಕಿರ್ ನಾಯಿಕ ಮಾತು ಮುಂದುವರಿಸಿ, “ನಾನು ಭಾರತಕ್ಕೆ ಹೋದ ಬಳಿಕ, ನನಗೆ ‘ರೆಡ್ ಕಾರ್ಪೆಟ್’ ಹಾಸಲಾಗುತ್ತದೆ. (ಸ್ವಾಗತಿಸಲಾಗುತ್ತದೆ) ಮತ್ತು ‘ಒಳಗೆ ಬಂದು ಜೈಲಿನಲ್ಲಿ ಕುಳಿತುಕೊಳ್ಳಿ’ ಎಂದು ಹೇಳಲಾಗುತ್ತದೆ” ಎಂದು ಹೇಳಿದನು. ಭಾರತದ ಪಟ್ಟಿಯಲ್ಲಿ ನಾನೇ ಮೊದಲ ಕ್ರಮಾಂಕದ ಭಯೋತ್ಪಾದಕನಾಗಿದ್ದೇನೆ. ನನ್ನ ಮೇಲಿನ ಆರೋಪಗಳೆಲ್ಲವೂ ಸುಳ್ಳಾಗಿವೆ. ಆ ಯಾವುದೇ ಆರೋಪಗಳು ಸಾಬೀತಾಗಿಲ್ಲ. “ಬಾಂಗ್ಲಾದೇಶದ ಒಬ್ಬ ಭಯೋತ್ಪಾದಕ ನನ್ನ ಫೇಸ್‌ಬುಕ್ ಅನುಯಾಯಿ(ಫಾಲೊವರ್ಸ್) ಆಗಿದ್ದನು ಮತ್ತು ಅವನು ನನ್ನಿಂದ ಪ್ರೇರಿತನಾಗಿದ್ದನು” ಎಂದು ಹೇಳಲಾಗಿದೆ. ಸ್ಫೂರ್ತಿ ನೀಡುವುದು ಮತ್ತು ಅನುಯಾಯಿಯಾಗಿರುವುದು(ಫಾಲೊವರ್ಸ್) ಎರಡು ವಿಭಿನ್ನ ವಿಷಯಗಳಾಗಿವೆ ಎಂದು ಹೇಳಿದನು.
ಸಂಪಾದಕೀಯ ನಿಲುವುಭಾರತಕ್ಕೆ ಬೇಕಾಗಿರುವ ಆರೋಪಿಗಳಿಗೆ ಆಶ್ರಯ ನೀಡುವ ಮಲೇಷಿಯಾ ಜೊತೆಗಿನ ಭಾರತವು ಎಲ್ಲ ವ್ಯಾಪಾರ ಸಂಬಂಧಗಳನ್ನು ಕಡಿತಗೊಳಿಸಿ ತಕ್ಕ ಪಾಠ ಕಲಿಸಬೇಕು ! ಭಾರತವು ಇಲ್ಲಿಯವರೆಗೆ ಅಂತಹ ಕಠಿಣ ನೀತಿಯನ್ನು ಅನುಸರಿಸಿಲ್ಲವಾದ್ದರಿಂದ, ಸಣ್ಣ ರಾಷ್ಟ್ರಗಳು ಸಹ ಭಾರತದ ಮೇಲೆ ದಾದಾಗಿರಿ ಮಾಡುತ್ತವೆ ಮತ್ತು ಜಿಹಾದಿ ಝಾಕಿಯಾರಂತಹ ಜಿಹಾದಿಗಳು ಕೊಬ್ಬುತ್ತಾರೆ ! |