ನದಿದಡದಲ್ಲಿ ಮರಳು ತೆಗೆಯುತ್ತಿರುವಾಗ ಪ್ರಾಚೀನ ಶಿವ ಮಂದಿರ ಪತ್ತೆ !

ನೆಲ್ಲೊರ (ಆಂದ್ರಪ್ರದೇಶ) – ಜೂನ್ ೧೬ ರಂದು ಇಲ್ಲಿಯ ಪೆರುಮಲಾಪಾಡು ಗ್ರಾಮದ ಹತ್ತಿರದ ಪೆನ್ನಾ ನದಿಯ ದಡದಲ್ಲಿ ಮರಳನ್ನು ತೆಗೆಯುತ್ತಿರುವಾಗ ಪ್ರಾಚೀನ ಶಿವ ಮಂದಿರ ಪತ್ತೆಯಾಗಿದೆ. ಮರಳು ತೆಗೆಯುತ್ತಿರುವಾಗ ಆರಂಭದಲ್ಲಿ ಒಂದು ಕಟ್ಟಡ ಸಿಕ್ಕಿತು. ಇನ್ನಷ್ಟು ಮರಳನ್ನು ತೆಗೆದ ನಂತರ ದೇವಸ್ಥಾನ ಕಾಣಿಸಿತು. ನಂತರ ಅದು ಐತಿಹಾಸಿಕ ಶಿವಮಂದಿರ ಇದೆ ಎಂದು ಹೇಳಲಾಗುತ್ತಿದೆ.

ಸ್ಥಳೀಯ ನಾಗರೀಕರು ಹೇಳಿದ ಪ್ರಕಾರ, ‘ಈ ದೇವಸ್ಥಾನ ಸುಮಾರು ೨೦೦ ವರ್ಷ ಹಳೆಯದಾಗಿದ್ದು, ಭಗವಾನ ಪರಶುರಾಮರವರು ೧೦೧ ದೇವಸ್ಥಾನಗಳನ್ನು ಕಟ್ಟಿದ್ದರು, ಅದರ ಪೈಕಿ ಇದೊಂದಾಗಿದೆ ಎಂದು ಹೇಳಿದರೆ’ ಇನ್ನೊಂದು ಕಡೆ ಪುರಾತತ್ವ ಇಲಾಖೆಯ ಸಹಾಯಕ ನಿರ್ದೇಶಕರಾದ ರಾಮಸುಬ್ಬಾ ರೆಡ್ಡಿಯವರು ಹೇಳಿದಂತೆ,

‘ಈ ಶಿವ ಮಂದಿರ ೧೮೫೦ ರಲ್ಲಿ ಬಂದಿದ್ದ ನೆರೆಯಿಂದಾಗಿ ಮುಳುಗಿರಬಹುದು ಅಥವಾ ಮರಳಿನಡಿಯಲ್ಲಿ ಹೂತಿರಬಹುದು ಎಂದು ಹೇಳಿದರು. ಪೆನ್ನಾ ನದಿ ತನ್ನ ಮಾರ್ಗ ಬದಲಿಸುತ್ತಿರುತ್ತದೆ.’