ಸಲ್ಮಾನ ಖಾನ್, ಕರಣ ಜೋಹರ ಸಹಿತ ೮ ಜನರ ವಿರುದ್ಧ ನ್ಯಾಯಾಲಯದಲ್ಲಿ ದೂರು ದಾಖಲು

ನಾಯಕ ನಟ ಸುಶಾಂತಸಿಂಗ ರಾಜಪೂತ್ ಆತ್ಮಹತ್ಯೆ ಪ್ರಕರಣ

ಪಾಟಲೀಪುತ್ರ (ಬಿಹಾರ) – ಹಿಂದಿ ಚಲನಚಿತ್ರ ಸೃಷ್ಟಿಯ ನಾಯಕನಟ ಸುಶಾಂತ ಸಿಂಗ ರಾಜಪೂತ್ ಇವರ ಆತ್ಮಹತ್ಯೆಯ ಪ್ರಕರಣದಲ್ಲಿ ಬಿಹಾರದ ಮುಝಫ್ಫರಪುರದಲ್ಲಿಯ ನ್ಯಾಯವಾದಿ ಸುಧೀರ ಕುಮಾರ್ ಓಝಾರವರು ನ್ಯಾಯಾಲಯದಲ್ಲಿ ನಿರ್ದೇಶಕ ಕರಣ ಜೋಹರ, ಸಂಜಯ ಲೀಲಾ ಭನ್ಸಾಲಿ, ಎಕ್ತಾ ಕಪೂರ್ ಹಾಗೂ ನಟ ಸಲ್ಮಾನ ಖಾನ್ ಸಹಿತ ೮ ಜನರ ವಿರುದ್ಧ ದೂರನ್ನು ದಾಖಲಿಸಿದ್ದಾರೆ.
ನ್ಯಾಯವಾದಿ ಓಝಾರವರು ತಮ್ಮ ದೂರಿನಲ್ಲಿ, ಸುಶಾಂತ ಸಿಂಗ್ ರಾಜಪೂತ ಮೂಲ ಬಿಹಾರಿನವರಾಗಿದ್ದರು. ಅವರ ಮೇಲೆ ಅನ್ಯಾಯ ಮಾಡಲಾಗಿತ್ತು. ಸುಶಾಂತನಿಂದ ೭ ಚಲನಚಿತ್ರ ಕಸಿದುಕೊಳ್ಳಲಾಗಿತ್ತು. ಅದೇರೀತಿ ಅವರ ಕೆಲವು ಚಲನಚಿತ್ರಗಳನ್ನು ಪ್ರದರ್ಶನಗೊಳಿಸಲು ಬಿಡಲಿಲ್ಲ. ಇದರ ವಿರುದ್ಧ ನಾನು ಈ ದೂರನ್ನು ದಾಖಲಿಸಿದ್ದು ಉದ್ದೇಶಪೂರ್ವಕವಾಗಿ ಇಂತಹ ಪರಿಸ್ಥಿತಿಯನ್ನು ನಿರ್ಮಿಸಿದ್ದರಿಂದ ಸುಶಾಂತ ಆತ್ಮಹತ್ಯೆಯಂತಹ ದೊಡ್ಡ ಹೆಜ್ಜೆಯನ್ನು ಇಟ್ಟರು. ಎಲ್ಲರ ಮೇಲೆ ಸುಶಾಂತ ಸಿಂಗ್ ಗೆ ಆತ್ಮಹತ್ಯೆಗೆ ಪ್ರಚೋದನೆ ನೀಡಿರುವ ಪ್ರಕರಣದಲ್ಲಿ ಭಾ.ದಂ.ಸಂ. ನ ವಿಧಿ ೩೦೬, ೧೦೯, ೫೦೪ ಹಾಗೂ ೫೦೬ ನ ಕಲಂ ಅನ್ನು ದಾಖಲಿಸಿದೆ ಎಂದು ಹೇಳಿದ್ದಾರೆ.