ಕೇರಳದ ಮುಖ್ಯಮಂತ್ರಿಯ ಮಗಳ ಮದುವೆಯಲ್ಲಿ ಸಂಘದ ಸ್ವಯಂಸೇವಕನ ಹತ್ಯೆಯ ಮತಾಂಧ ಆರೋಪಿಗೆ ‘ಅತಿಗಣ್ಯ ವ್ಯಕ್ತಿ’ಯೆಂದು’ ಉಪಸ್ಥಿತಿ !

  • ‘ಕಮ್ಯುನಿಸ್ಟ್ ಸರಕಾರದ ರಾಜ್ಯದಲ್ಲಿ ಹೀಗಾಗುವುದೇ ಜಾತ್ಯತೀತವಾಗಿದೆ’, ಎಂದು ಪ್ರಗತಿ(ಅಧೋಗತಿ)ಪರರು ಹೇಳುವರು !
  • ಸ್ವತಃ ಮುಖ್ಯಮಂತ್ರಿಯ ಮಗಳ ಮದುವೆಯಲ್ಲಿ ಹೀಗಾದರೆ, ರಾಜ್ಯದಲ್ಲಿರುವ ಇತರ ಅಪರಾಧಿ ಮತಾಂಧರ ಮೇಲೆ ಎಷ್ಟು ಕ್ರಮಕೈಗೊಳ್ಳುತ್ತಿರಬಹುದು ಎಂಬುದು ಇದರಿಂದ ಗಮನಕ್ಕೆ ಬರುತ್ತದೆ !

ತಿರುವನಂತಪುರಮ್ (ಕೇರಳ) – ಜೂನ್ ೧೫ ರಂದು ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಇವರ ಮಗಳ ಮದುವೆಯ ಸಮಾರಂಭದಲ್ಲಿ ‘ಅತಿಗಣ್ಯ ವ್ಯಕ್ತಿ’ ಎಂದು ಉಪಸ್ಥಿತರಿದ್ದ ಮಹಮ್ಮದ ಹಾಶಿಮ ಈತ ರಾಷ್ಟ್ರೀಯ ಸ್ವಯಂಸೇವಕ ಸಂಘದ ಕಾರ್ಯಕರ್ತ ಸುರೇಶ ಬಾಬುವಿನ ಹತ್ಯೆಯ ಅಪರಾಧಿಯಾಗಿದ್ದಾನೆ. ಆತನಿಗೆ ‘ಪೆರೊಲ್’ ಮೇಲೆ ಬಿಡಲಾಗಿತ್ತು. ಇದರಿಂದ ಭಾಜಪವು ವಿಜಯನ್ ಇವರಲ್ಲಿ ಉತ್ತರ ಕೇಳಿದ್ದಾರೆ.

೧. ವಿಜಯನ್ ಇವರ ಮಗಳ ಮದುವೆ ಮಾರ್ಕ್ಸ್‌ವಾದಿ ಕಮ್ಯುನಿಸ್ಟ್ ಪಕ್ಷದ ನಾಯಕ ಮಹಮ್ಮದ ರಿಯಾಜನ ಮಗನೊಂದಿಗೆ ಆಯಿತು. ಈ ಮದುವೆಗೆ ಕೇವಲ ೫೦ ಜನರು ಉಪಸ್ಥಿತರಿದ್ದರು. ಅದರಲ್ಲಿ ಮಹಮ್ಮದ ಹಾಶಿಮ್ ಸಹ ಇದ್ದನು. ಆತ ಮಹಮ್ಮದ ರಿಯಾಜನ ಸಂಬಂಧಿಕನಾಗಿದ್ದಾನೆ. ಆತನನ್ನು ತ್ರಿಶೂರನ ಸುರೇಶ ಬಾಬು ಹತ್ಯೆಯ ಪ್ರಕರಣದಲ್ಲಿ ೭ ವರ್ಷದ ಶಿಕ್ಷೆಯಾಗಿದೆ. ಕೊರೋನಾ ಸಂಕಟದಿಂದಾಗಿ ಆತನನ್ನು ‘ಪೆರೋಲ್’ ಮೇಲೆ ಬಿಡುಗಡೆ ಮಾಡಲಾಗಿದೆ.

೨. ಭಾಜಪದ ನಾಯಕ ಸಂದೀಪ ವರಿಯರ ಫೇಸ್‌ಬುಕ್‌ನಲ್ಲಿ, ‘ಯಾವುದೇ ಅಪರಾಧಿ ವ್ಯಕ್ತಿ ಸರಕಾರಿ ನಿವಾಸಸ್ಥಾನಕ್ಕೆ ಹೇಗೆ ಬರಹುದು ? ಹಾಗೂ ಅದೂ ಮುಖ್ಯಮಂತ್ರಿಯವರ ಹೆಗಲ ಮೇಲೆ ಕೈ ಇಟ್ಟು ಹೇಗೆ ನಿಲ್ಲಬಹುದು ? ಇದು ಸುರಕ್ಷೆಯ ದೃಷ್ಟಿಯಿಂದ ದೊಡ್ಡ ತಪ್ಪಾಗಿದೆ. ಗೃಹಸಚಿವಾಲಯದ ಖಾತೆ ಸ್ವತಃ ಮುಖ್ಯಮಂತ್ರಿಯವರ ಬಳಿ ಇದೆ’ ಎಂದು ಹೇಳಿದ್ದಾರೆ.