ಚೀನಾದ ಕಪಟ ಯುದ್ಧತಂತ್ರಕ್ಕೆ ಚಾಣಕ್ಯನೀತಿಯಿಂದ ಉತ್ತರಿಸಬೇಕು! – ಹಿಂದೂ ಜನಜಾಗೃತಿ ಸಮಿತಿ

ಚೀನಾದ ಆಕ್ರಮಣದಲ್ಲಿ ಹುತಾತ್ಮರಾದ ಕರ್ನಲ್ ಮತ್ತು ೨ ಸೈನಿಕರಿಗೆ ಶ್ರದ್ಧಾಂಜಲಿ !

ಶ್ರೀ. ರಮೇಶ ಶಿಂದೆ

ಲಡಾಖ್‌ನ ಗಾಲ್ವಾನ್ ಕಣಿವೆಯಲ್ಲಿ ಚೀನಾ ಮತ್ತು ಭಾರತ ನಡುವೆ ನಡೆದ ಘರ್ಷಣೆಯಲ್ಲಿ ಓರ್ವ ಭಾರತೀಯ ಕರ್ನಲ್ ಮತ್ತು ಇಬ್ಬರು ಸೈನಿಕರು ಹುತಾತ್ಮರಾಗಿದ್ದಾರೆ. ಹಿಂದೂ ಜನಜಾಗೃತಿ ಸಮಿತಿಯು ಚೀನಾದ ಈ ಕುಕೃತ್ಯವನ್ನು ತೀವ್ರವಾಗಿ ಖಂಡಿಸುತ್ತದೆ. ಕೇಂದ್ರ ಸರಕಾರವು ದೇಶದ ಗಡಿಗಳನ್ನು ಭದ್ರಪಡಿಸಲು ಚಾಣಕ್ಯನೀತಿ ಮತ್ತು ಗೆರಿಲ್ಲಾಯುದ್ಧತಂತ್ರದ ಮೂಲಕ ಚೀನಾಗೆ ಕಠೋರವಾದ ಪ್ರತ್ಯುತ್ತರ ನೀಡಬೇಕು, ಎಂದು ಹಿಂದೂ ಜನಜಾಗೃತಿ ಸಮಿತಿಯು ಕೇಂದ್ರ ಸರ್ಕಾರಕ್ಕೆ ಕರೆ ನೀಡಿದೆ. ಚೀನಾದ ವಿರುದ್ಧ ಮೋದಿ ಸರಕಾರ ಅಳವಡಿಸಿದ ನೀತಿಯನ್ನು ಭಾರತೀಯ ಜನರು ಬಲವಾಗಿ ಬೆಂಬಲಿಸಲಿದ್ದಾರೆ.

ಭಾರತೀಯ ಸೇನೆಯು ಗಡಿಯಲ್ಲಿ ಹೋರಾಡಿ ಚೀನಾಗೆ ಪಾಠ ಕಲಿಸಲಿದೆ, ಆದರೆ ಪ್ರತಿಯೊಬ್ಬ ಭಾರತೀಯನು ಚೀನಾದ ವಸ್ತುಗಳನ್ನು ಬಹಿಷ್ಕರಿಸಿ ಸ್ವದೇಶಾಭಿಮಾನದ ಮೂಲಕ ಯುದ್ಧ ಮಾಡಿಯೇ ಚೀನಾವನ್ನು ಎಲ್ಲ ಸ್ತರಗಳಲ್ಲಿ ನಿರ್ನಾಮ ಮಾಡಬೇಕು ಎಂದೂ ಹಿಂದೂ ಜನಜಾಗೃತಿ ಸಮಿತಿಯು ಕರೆ ನೀಡಿದೆ.