Odisha Army Officer Fiancee Molested : ಪೊಲೀಸರಿಂದ ಯೋಧನ ಭಾವಿ ಪತ್ನಿಗೆ ಲೈಂಗಿಕ ಕಿರುಕುಳ ಮತ್ತು ಥಳಿತ !

೫ ಪೊಲೀಸರು ಅಮಾನತು, ಪೊಲೀಸ ಠಾಣೆಯಲ್ಲಿಯೇ ನಡೆದ ಘಟನೆ, ಪೀಡಿತೆ ರೌಡಿಗಳ ವಿರುದ್ಧ ದೂರು ನೀಡಲು ಪೊಲೀಸ ಠಾಣೆಗೆ ಹೋಗಿದ್ದಳು

ಭುವನೇಶ್ವರ (ಓಡಿಸ್ಸಾ) – ಒಡಿಸ್ಸಾದ ಪೊಲೀಸರು ಓರ್ವ ಯೋಧನ ಭಾವಿ ಪತ್ನಿಗೆ ಲೈಂಗಿಕ ಕಿರುಕುಳ ನೀಡಿರುವ ಘಟನೆ ಬೆಳಕಿಗೆ ಬಂದಿದೆ. ಸಪ್ಟೆಂಬರ್ ೧೪ ರಂದು ಭುವನೇಶ್ವರದ ಒಂದು ಪೊಲೀಸ ಠಾಣೆಯಲ್ಲಿಯೇ ಈ ಘಟನೆ ನಡೆದಿದೆ. ಈ ಪ್ರಕರಣದಲ್ಲಿ ೫ ಪೊಲೀಸರನ್ನು ಅಮಾನತುಗೊಳಿಸಲಾಗಿದೆ. ಇದರಲ್ಲಿ ಓರ್ವ ಪೊಲೀಸ್ ಅಧಿಕಾರಿ ಸಹಿತ ೨ ಮಹಿಳಾ ಪೊಲೀಸರ ಸಮಾವೇಶ ಕೂಡ ಇದೆ. ಈ ಘಟನೆಯ ನಂತರ ಸಂತ್ರಸ್ತೆಯು ಪ್ರಸಾರ ಮಾಧ್ಯಮಗಳೆದುರು ಪೊಲೀಸರು ನಡೆಸಿರುವ ದುಷ್ಕೃತ್ಯವನ್ನು ಬಹಿರಂಗಪಡಿಸಿದ್ದಾಳೆ.

ಆಕೆ ಮಾತನಾಡುವಾಗ,

೧. ತಡರಾತ್ರಿ ೧ ಗಂಟೆಗೆ ನಾನು ನನ್ನ ಬಂದ್ ಮಾಡಿ ಮನೆಗೆ ಹೊರಟಿದ್ದೆ. ನನ್ನ ಜೊತೆಗೆ ನನ್ನ ಭಾವಿ ಪತಿ ಕೂಡ ಇದ್ದರು. ಆ ಸಮಯದಲ್ಲಿ ಕೆಲವು ಕಿಡಿಗೇಡಿಗಳು ನಮ್ಮ ಕಾರನ್ನು ತಡೆದರು ಮತ್ತು ನಮ್ಮ ಜೊತೆಗೆ ವಾಗ್ವಾದ ನಡೆಸಿದರು.
೨. ನಾನು ಮತ್ತು ನನ್ನ ಭಾವಿ ಪತಿ ಹೇಗೋ ತಪ್ಪಿಸಿಕೊಂಡವು ಮತ್ತು ಈ ಪ್ರಕರಣಕ್ಕೆ ನ್ಯಾಯ ಕೇಳಲು ನಾವು ಪೊಲೀಸ್ ಠಾಣೆಗೆ ಹೋದೆವು. ಆ ಸಮಯದಲ್ಲಿ ಪೊಲೀಸ ಠಾಣೆಯಲ್ಲಿ ಓರ್ವ ಮಹಿಳಾ ಹವಾಲದಾರ್ ಗೌನ್ ಹಾಕಿಕೊಂಡು ಕುಳಿತಿದ್ದಳು.
೩. ನಾನು ಆಕೆಗೆ ಸಹಾಯ ಕೇಳಿದಾಗ ಆಕೆ ನನ್ನ ಜೊತೆಗೆ ಉದ್ಘಾಟತನದಿಂದ ಮಾತನಾಡಿದಳು. ನಾನು ಆಕೆಗೆ ನ್ಯಾಯವಾದಿ ಇರುವುದಾಗಿ ಹಾಗೂ ದೂರು ದಾಖಲಿಸಿಕೊಳ್ಳುವುದು, ಇದು ಪೊಲೀಸರ ಕರ್ತವ್ಯವಾಗಿದೆ ಎಂದು ಹೇಳಿದೆ. ಅದಕ್ಕೆ ಮಹಿಳಾ ಪೊಲೀಸ ಹವಾಲದಾರ ನನ್ನ ಮೇಲೆ ಸಿಟ್ಟಾದಳು. ಆಕೆ ನನ್ನ ಭಾವಿ ಪತಿಯನ್ನು ಜೈಲಿಗೆ ಹಾಕಿದಳು. ನಾನು ಅವರಿಗೆ ಆತ ಸೈನಿಕ ಅಧಿಕಾರಿ ಇರುವುದೆಂದು ಹೇಳಿದೆ. ಆ ಸಮಯದಲ್ಲಿ ಇಬ್ಬರು ಮಹಿಳಾ ಪೊಲೀಸ ಸಿಬ್ಬಂದಿಗಳು ಬಂದರು ಮತ್ತು ಅವರು ನನಗೆ ಹೊಡೆಯಲು ಆರಂಭಿಸಿದರು. ನನ್ನ ಕೂದಲು ಎಳೆದು ನನ್ನನ್ನು ಎಳೆದುಕೊಂಡು ಹೋದರು.
೪. ಆ ಇಬ್ಬರು ಮಹಿಳಾ ಪೊಲೀಸರು ನನ್ನ ಜಾಕೆಟ್ ತೆಗೆದು ನನ್ನ ಕೈಗಳನ್ನು ಕಟ್ಟಿದರು. ನನ್ನ ಸೆರಗು ತೆಗೆದು ನನ್ನ ಕಾಲುಗಳು ಕೂಡ ಕಟ್ಟಿ ಒಂದು ಕೋಣೆಯಲ್ಲಿ ಕೂಡಿ ಹಾಕಿದರು.
೫. ಕೆಲವು ಸಮಯದಲ್ಲಿ ಓರ್ವ ಪೊಲೀಸ್ ಅಧಿಕಾರಿ ಅಲ್ಲಿಗೆ ಬಂದನು. ಅವನು ನನ್ನ ಒಳ ಉಡುಪುಗಳನ್ನು ತೆಗೆದು ಖಾಸಗಿ ಅಂಗದ ಮೇಲೆ ಹೊಡೆಯಲಾರಂಭಿಸಿದನು. ನನಗೆ ಲೈಂಗಿಕ ಕಿರುಕುಳ ನೀಡಲಾಯಿತು.
೬. ಬೆಳಿಗ್ಗೆ ೬ ಗಂಟೆಗೆ ಮತ್ತೆ ಪೊಲೀಸ ಅಧಿಕಾರಿ ಬಂದನು. ಅವನ ಜೊತೆಗೆ ಓರ್ವ ಮಹಿಳೆ ಕೂಡ ಬಂದಿದ್ದಳು. ಆ ಪೋಲಿಸ ಅಧಿಕಾರಿ ಕೂಡ ನನ್ನ ಒಳ ಉಡುಪುಗಳನ್ನು ಎಳೆದನು ಮತ್ತು ತನ್ನ ಖಾಸಗಿ ಅಂಗವನ್ನು ತೋರಿಸುತ್ತಾ ನನ್ನ ಜೊತೆಗೆ ಅತ್ಯಂತ ಹೊಲಸು ಭಾಷೆಯಲ್ಲಿ ಮಾತನಾಡಿದನು. ಇದೆಲ್ಲವನ್ನು ಹೇಳುವಾಗ ಸಂತ್ರಸ್ತೆಯ ಕಣ್ಣು ತುಂಬಿ ಬಂದಿತ್ತು. ಈ ಪ್ರಕರಣದಲ್ಲಿ ಸಂತ್ರಸ್ತೆಯು ಪೊಲೀಸ ಸಿಬ್ಬಂದಿಯ ವಿರುದ್ಧ ದೂರು ದಾಖಲಿಸಿದ್ದಾಳೆ.

ಸಂಪಾದಕೀಯ ನಿಲುವು

ಯೋಧನ ಭಾವಿ ಪತ್ನಿಯೊಂದಿಗೆ ಹೀಗೆ ವರ್ತಿಸುವ ಪೊಲೀಸರು ಸಾಮಾನ್ಯ ಮಹಿಳೆಯರೊಂದಿಗೆ ಹೇಗೆ ವರ್ತಿಸುವರು, ಇದನ್ನು ಯೋಚಿಸದಿರುವುದೇ ಒಳಿತು ! ಇಂತಹ ಪೊಲೀಸರಿಗೆ ಜೀವಾವಧಿ ಶಿಕ್ಷೆ ವಿಧಿಸಬೇಕು !