ಇದನ್ನು ಹಿಂದೂಗಳಿಗೆ ಮತಾಂತರಕ್ಕಾಗಿ ಸರಕಾರ ನೀಡುತ್ತಿರುವ ಆಮಿಷ ಎಂದು ಹೇಳಬೇಕೆ ?
ತಿರುವನಂತಪುರಮ್ – ಕೇರಳ ರಾಜ್ಯದ ಹಿಂದುಳಿದ ವರ್ಗದ ಅಭಿವೃದ್ಧಿ ನಿಗಮವು ಹಿಂದೂ ಧರ್ಮದ ಪರಿಶಿಷ್ಟಜಾತಿಯಿಂದ ಕ್ರೈಸ್ತರಾಗಿ ಮತಾಂತರವಾದವರಿಗೆ ೨೦೨೦-೨೦೨೧ ವರ್ಷಕ್ಕೆ ೫ ಕೋಟಿ ರೂಪಾಯಿ ಖರ್ಚು ಮಾಡುವ ನಿಯಮವನ್ನು ಮಾಡಿದೆ, ಈ ಆಶಯದ ಆದೇಶವನ್ನು ಮುಖ್ಯ ಕಾರ್ಯದರ್ಶಿ ವಿಶ್ವನಾಥ ಸಿನ್ಹಾ ಇವರು ಹಿಂದುಳಿದ ವರ್ಗದ ಅಭಿವೃದ್ಧಿ ನಿಗಮದ ಅಧ್ಯಕ್ಷ ಹಾಗೂ ಕಾರ್ಯನಿರ್ವಾಹಕರ ಸೂಚನೆಗನುಸಾರ ಜಾರಿಗೆ ತಂದಿದೆ. ಈ ಆದೇಶದಲ್ಲಿ ೨೦೨೦-೨೦೨೧ ರಲ್ಲಿ ಮತಾಂತರಗೊಂಡ ಕ್ರೈಸ್ತರಿಗಾಗಿ ಖರ್ಚು ಮಾಡುವ ಯೋಜನೆಯನ್ನೂ ಜೋಡಿಸಲಾಗಿದೆ. ಇದರಲ್ಲಿ ಮನೆ ಕಟ್ಟುವುದು, ಮದುವೆ, ಮನೆಗಾಗಿ ಭೂಮಿ ಖರೀದಿಸುವುದು, ಇಂಜಿನಿಯರಿಂಗ್ ಹಾಗೂ ವೈದ್ಯಕೀಯ ವಿಷಯದಲ್ಲಿ ಶಿಕ್ಷಣ ನೀಡುವುದು, ಶಿಷ್ಯವೇತನ, ಸರಕಾರಿ ಅಥವಾ ಇತರ ಶ್ರೀಮಂತ ಜನರಿಗಾಗಿ ವೈಯಕ್ತಿಕ ಕೆಲಸಕ್ಕಾಗಿ ಸಾಲ, ಶಿಕ್ಷಣಕ್ಕಾಗಿ ಸಾಲ ಇವುಗಳು ನಿಯಮದಲ್ಲಿ ಒಳಗೊಂಡಿದೆ.