ದೇಶದಲ್ಲಿ ಕೊರೋನಾ ಪೀಡಿತ ರೋಗಿಗಳ ಗುಣಮುಖರಾಗುವ ಪ್ರಮಾಣ ಶೇ. ೫೦ ರಷ್ಟು ! – ಪ್ರಧಾನಮಂತ್ರಿ ನರೇಂದ್ರ ಮೋದಿ

ನವ ದೆಹಲಿ – ಭಾರತದಲ್ಲಿ ಕೊರೋನಾ ಪೀಡಿತ ರೋಗಿಗಳ ಗುಣಮುಖರಾಗುವ ಪ್ರಮಾಣ ಶೇ. ೫೦ ರಷ್ಟಿದೆ, ಎಂಬ ಮಾಹಿತಿಯನ್ನು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಮುಖ್ಯಮಂತ್ರಿಗಳೊಂದಿಗೆ ‘ವಿಡಿಯೋ ಕಾನ್ಫರೆನ್ಸ್’ ಮೂಲಕ ಮಾತನಾಡುತ್ತಿರುವಾಗ ನೀಡಿದರು. ‘ಕೊರೋನಾದಿಂದಾಗಿ ಯಾರೆಲ್ಲ ಮೃತಪಟ್ಟಿದ್ದಾರೆ, ಅದು ಖೇದಕರವಾಗಿದೆ’, ಎಂದೂ ಅವರು ಹೇಳಿದ್ದಾರೆ.

ಪ್ರಧಾನಮಂತ್ರಿ ತಮ್ಮ ಮಾತನ್ನು ಮುಂದುವರಿಸುತ್ತ, ‘ರಾಜ್ಯದಲ್ಲಿಯ ಕೊರೋನಾದ ಸ್ಥಿತಿಯ ಬಗ್ಗೆ ನನಗೆ ತಿಳಿದುಕೊಳ್ಳಬೇಕಿದೆ. ಅದರ ಬಗ್ಗೆ ನನಗೆ ನಿಮ್ಮೆಲ್ಲರ ಸಲಹೆ ಬೇಕಿದೆ. ಇದರಿಂದ ಮುಂದಿನ ರಣನೀತಿ ನಿರ್ಧರಿಸಬಹುದು. ನಾವೆಲ್ಲರು ಕೊರೋನಾ ಸಂಕ್ರಮಣವನ್ನು ತಡೆಗಟ್ಟಲು ಎಷ್ಟು ಬೇಗ ಜಯ ಸಾಧಿಸುವೆವೋ ಅಷ್ಟೇ ಬೇಗ ನಮ್ಮ ಅರ್ಥವ್ಯವಸ್ಥೆ ಸುಧಾರಣೆಯಾಗಲಿದೆ. ಕೊರೋನಾದ ಹಾವಳಿಯನ್ನು ತಡೆಗಟ್ಟಲು ಯಶಸ್ವಿಯಾದರೆ ಸರಕಾರಿ ಕಾರ್ಯಾಲಯ, ಖಾಸಗಿ ಕಾರ್ಯಾಲಯ ಇತ್ಯಾದಿಗಳು ತೆರೆಯಬಹುದು, ಅದೇರೀತಿ ಸಾರಿಗೆ ಸಂಪರ್ಕ ಕ್ರಮೇಣ ಆರಂಭವಾಗಬಹುದು ಹಾಗೂ ಉದ್ಯೋಗದ ಅವಕಾಶವೂ ಸಿಗಬಹುದು’ ಎಂದು ಹೇಳಿದರು.