ಉನ್ನಾವ (ಉತ್ತರಪ್ರದೇಶ) ಇಲ್ಲಿಯ ಭಾಜಪದ ಶಾಸಕ ಸಾಕ್ಷಿ ಮಹಾರಾಜ ಇವರ ಮೇಲೆ ಬಾಂಬ್ ಹಲ್ಲೆ ಮಡುವುದಾಗಿ ಬೆದರಿಸಿದ್ದ ಮತಾಂಧನ ಬಂಧನ

ಮತಾಂಧರು ಈ ರೀತಿ ಕಮ್ಯುನಿಸ್ಟರು, ಕಾಂಗ್ರೇಸ್‌ನವರು ಅಥವಾ ಜಾತ್ಯತೀತವಾದಿ ಜನಪ್ರತಿನಿಧಿಗಳಿಗೆ ಬೆದರಿಸುವುದಿಲ್ಲ; ಏಕೆಂದರೆ ಮತಾಂಧರಿಗೆ ಧರ್ಮ ಇರುತ್ತದೆ ಹಾಗೂ ಹಿಂದುತ್ವನಿಷ್ಠರನ್ನೇ ಗುರಿಯಾಗಿಸುತ್ತಾರೆ !

ಉನ್ನಾವ (ಉತ್ತರಪ್ರದೇಶ) – ಇಲ್ಲಿಯ ಭಾಜಪದ ಶಾಸಕ ಸಾಕ್ಷಿ ಮಹಾರಾಜ ಇವರಿಗೆ ಕರೆ ಮಾಡಿ ಬಾಂಬ್ ಎಸೆದು ಹತ್ಯೆ ಮಾಡುವುದಾಗಿ ಬೆದರಿಕೆಯೊಡ್ಡಿದ ಗಫ್ಫಾರನ್ನು ಬಿಜನೌರ್‌ನಿಂದ ಬಂಧಿಸಲಾಗಿದೆ. ಗಫ್ಫಾರ್ ಕುವೈತ್‌ನಲ್ಲಿ ಇದ್ದಾಗ ಆತ ಬೆದರಿಕೆಯೊಡಿದ್ದನು. ಗಫ್ಫಾರ್ ಭಾರತಕ್ಕೆ ಬಂದನಂತರ ಬಂಧಿಸಲಾಯಿತು. ಪೊಲೀಸರ ಹೇಳಿಕೆಯ ಪ್ರಕಾರ, ‘ಆತ ಇದೇ ರೀತಿ ಇತರ ನಾಯಕರಿಗೂ ಬೆದರಿಕೆಯನ್ನು ನೀಡಿರುವ ಸಾಧ್ಯತೆಗಳಿವೆ’ ಎಂದು ಹೇಳಿದ್ದಾರೆ. ‘ಕುವೈತ್ ನಲ್ಲಿರುವಾಗ ಓರ್ವ ವ್ಯಕ್ತಿ ಆತನಿಗೆ ಕರೆ ಮಾಡಿ ಬೆದರಿಕೆಯೊಡ್ಡಲು ಹೇಳಿದ್ದರು’ ಎಂದು ಗಫ್ಫಾರ್ ಹೇಳಿದ್ದಾನೆ.