|
ಗ್ವಾಲಿಯರ್ (ಮಧ್ಯಪ್ರದೇಶ) – ಮಧ್ಯಪ್ರದೇಶ ಸರಕಾರದ ಇಂಧನ ಸಚಿವ ಪ್ರದ್ಯುಮ್ನ ಸಿಂಗ್ ತೋಮರ್ ಅವರು ಇಲ್ಲಿ ಪರೀಕ್ಷಣೆಯ ಪ್ರವಾಸದಲ್ಲಿದ್ದರು. ಪರೀಕ್ಷಣೆಯ ಪ್ರವಾಸ ಮುಗಿದ ನಂತರ ತೋಮರ್ ಇಲ್ಲಿನ ಪಿಎಂಶ್ರೀ ಶಾಲೆಗೆ ದಿಢೀರ್ ಭೇಟಿ ನೀಡಿದರು. ಭೇಟಿ ನಿಡುವಾಗ ವಿದ್ಯಾರ್ಥಿಗಳು ಊಟ ಮಾಡುವ ಸಮಯವಾಗಿತ್ತು. ಇದನ್ನು ಕಂಡ ಸಚಿವರು ಕೂಡ ವಿದ್ಯಾರ್ಥಿಗಳ ಜೊತೆ ಊಟ ಮಾಡಲು ನಿರ್ಧರಿಸಿ ವಿದ್ಯಾರ್ಥಿಗಳ ಸಾಲಿನಲ್ಲಿ ಕುಳಿತರು. ಅವರು ಪಾತ್ರೆಯಲ್ಲಿದ್ದ ಆಲೂಗಡ್ಡೆ ಸಾರಿನಿಂದ ಆಲುಗಡ್ಡೆ ತೆಗೆಯಲು ಒಂದು ಚಮಚವನ್ನು ಪಾತ್ರೆಯೊಳಗೆ ಹಾಕಿದಾಗ ಒಂದೂ ಆಲೂಗಡ್ಡೆ ಸಿಗಲಿಲ್ಲ. ಸಚಿವರು ಪಾತ್ರೆಯಲ್ಲಿ ಆಲೂಗಡ್ಡೆಯನ್ನು ಹುಡುಕುತ್ತಲೇ ಇದ್ದರು. ಇದಾದ ಬಳಿಕ ಸಚಿವ ತೋಮರ್ ಏನೂ ಮಾತನಾಡದೆ ಆಹಾರ ಸೇವಿಸಲು ಆರಂಭಿಸಿದರು. ಊಟ ಮಾಡುವಾಗ ಅವರು ಶಾಲೆಯಲ್ಲಿ ಮಧ್ಯಾಹ್ನದ ಊಟದ ಗುಣಮಟ್ಟದ ಬಗ್ಗೆ ಜಿಲ್ಲಾ ಪಂಚಾಯಿತಿ ಮುಖ್ಯಾಧಿಕಾರಿಗಳಿಗೆ ಮೊಬೈಲ್ ಮೂಲಕ ಮಾತನಾಡಿ ಶಾಲೆಯ ಮಧ್ಯಾಹ್ನ ಭೋಜನದ ಗುಣಮಟ್ಟದ ಬಗ್ಗೆ ಅವರಿಗೆ ಕಿಡಿಕಾರಿದರು ಮತ್ತು ತಕ್ಷಣವೇ ಗುಣಮಟ್ಟ ಸುಧಾರಿಸುವಂತೆ ಆದೇಶಿಸಿದರು.
ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿವೇಕ್ ಕುಮಾರ್ ಅವರನ್ನು ಮಾಧ್ಯಮದವರು ಸಂಪರ್ಕಿಸಿದಾಗ, ಈ ಕುರಿತು ಸಚಿವರೊಂದಿಗೆ ಚರ್ಚಿಸಿದ್ದೇನೆ. ಅವರು ನನ್ನನ್ನು ಆಹಾರದ ಗುಣಮಟ್ಟವನ್ನು ಸುಧಾರಿಸಲು ಕ್ರಮ ಕೈಕೊಳ್ಳುವಂತೆ ಹೇಳಿದ್ದಾರೆ ಎದು ಹೇಳಿದರು. ಈ ಬಗ್ಗೆ ತನಿಖೆ ನಡೆಸಲು ತಂಡ ರಚಿಸಲಾಗಿದೆ. ತಂಡದ ವರದಿ ಬಂದ ತಕ್ಷಣ ಸಂಬಂಧಪಟ್ಟವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದರು.
ಸಂಪಾದಕೀಯ ನಿಲುವುನಿಜವಾದ ಅನುಭವ ಬಂದಾಗಲೇ, ಇದರ ಮೇಲೆ ಪರಿಹಾರ ಹುಡುಕಲಾಗುತ್ತದೆ ಎಂದು ಇದರಿಂದ ಮತ್ತೊಮ್ಮೆ ಗಮನಕ್ಕೆ ಬರುತ್ತದೆ ! |