‘ಚೀನಾದ ವಸ್ತುಗಳನ್ನು ನಿಷೇಧಿಸಲು’ ಅಂತರರಾಷ್ಟ್ರೀಯ ಆಂದೋಲನಕ್ಕೆ ಭಾರತ ಸಹಿತ ಜಗತ್ತಿನ ೧೪ ದೇಶಗಳಲ್ಲಿನ ೧೪೦ ಮುಖ್ಯ ನಗರಗಳಲ್ಲಿ ಉತ್ಸಾಹದಿಂದ ಸಹಭಾಗ !

ರಾಷ್ಟ್ರಪ್ರೇಮಿಗಳು ಚೀನಾದ ಮೊಬೈಲ್, ಆಟದ ಸಾಮಾನು, ಗೃಹೋಪಯೋಗಿ ವಸ್ತು ಕಸದಬುಟ್ಟಿಗೆ ಎಸೆದರು !

 

ಮೊದಲು ಕೊರೋನಾ ವಿಷಾಣು ಹಾಗೂ ಈಗ ಲಡಾಖನಲ್ಲಿ ಭಾರತೀಯ ೨೦ ಸೈನಿಕರ ಹುತಾತ್ಮಕ್ಕೆ ಕಾರಣವಾದ ಕಪಟಿ ಚೀನಾ ಡ್ರೆಗಾನ್‌ಗೆ ಪಾಠ ಕಲಿಸಲು ಸನಾತನ ಸಂಸ್ಥೆ, ಹಿಂದೂ ಜನಜಾಗೃತಿ ಸಮಿತಿ ಹಾಗೂ ಇತರ ಹಿಂದುತ್ವನಿಷ್ಠ ಸಂಘಟನೆಗಳು ಜಂಟಿಯಾಗಿ ಇಂದು ಅಂತರರಾಷ್ಟ್ರೀಯ ಮಟ್ಟದಲ್ಲಿ ಸಾಂಕೇತಿಕ ಆಂದೋಲನ ಮಾಡಲಾಯಿತು. ಇದರಲ್ಲಿ ಭಾರತದೊಂದಿಗೆ ಜಗತ್ತಿನಾದ್ಯಂತ ೧೪ ದೇಶ ಮತ್ತು ೧೪೦ ಮುಖ್ಯ ನಗರಗಳ ರಾಷ್ಟ್ರಪ್ರೇಮಿ ಭಾರತೀಯರು ‘ಚೀನಾ ವಸ್ತುಗಳನ್ನು ನಿಷೇಧಿಸಿ’ ಈ ಆಂದೋಲನವನ್ನು ಮಾಡಿದರು. ಈ ಆಂದೋಲನದಲ್ಲಿ ಚೀನಾದ ಆಟಿಕೆ, ಗೃಹೋಪಯೋಗಿ ವಸ್ತು ಅದೇರೀತಿ ಇತರ ವಸ್ತುಗಳನ್ನು ಕಸದ ಬುಟ್ಟಿಗೆ ಎಸೆಯುವ ಮೂಲಕ ಚೀನಾವನ್ನು ತೀವ್ರವಾಗಿ ಖಂಡಿಸಲಾಯಿತು. ಅನೇಕ ಜನರು ತಮ್ಮ ಮೊಬೈಲ್‌ನಲ್ಲಿಯ ಚೀನಾ ಆಪ್, ಅದೇರೀತಿ ಕಂಪ್ಯುಟರ್‌ದಲ್ಲಿಯ ಸಾಫ್ಟವೇರ್ ತೆಗೆದು ಹಾಕುವ ಮೂಲಕ ಆಂದೋಲನದಲ್ಲಿ ಸಹಭಾಗಿಯಾದರು. ವಿಶೇಷವೆಂದರೆ ಈ ಆಂದೋಲನದಲ್ಲಿ  ಮಕ್ಕಳ ಸಹಭಾಗ ಲಕ್ಷಣೀಯವಾಗಿತ್ತು. ಅವರು ತಮ್ಮ ಚೀನಾದ ಆಟಿಕೆಯನ್ನು ಎಸೆದು ರಾಷ್ಟ್ರಭಕ್ತಿಯ ಆದರ್ಶ ಉದಾಹರಣೆಯನ್ನು ತೋರಿದರು.

ಕಪಟಿ ಚೀನಾದ ವಿರುದ್ಧ ಇಂದು ಸಂಪೂರ್ಣ ಭಾರತದಲ್ಲಿ ಮಾತ್ರವಲ್ಲದೇ ಜಾಗತಿಕ ಸ್ತರದ ವಾತಾವರಣವು ಕುಪಿತಗೊಂಡಿದೆ. ಚೀನಾಗೆ ಪಾಠ ಕಲಿಸಲು ಪ್ರತಿಯೊಬ್ಬರು ತಮ್ಮ ತಮ್ಮ ಕ್ಷಮತೆಗನುಸಾರ ಹೋರಾಡುತ್ತಿದ್ದಾರೆ. ಈ ಹೋರಾಟ ವ್ಯಾಪಕ ಮಾಡಲೆಂದು ನೀಡಿದ ಕರೆಗೆ ಇಂದು ಭಾರತದೊಂದಿಗೆ ಅಮೇರಿಕಾ, ಕೆನಡಾ, ಇಂಗ್ಲೆಂಡ್, ಸ್ವಿಡನ್, ಲಿಬೀಯಾ, ಇಥೋಯೋಪಿಯಾ, ಸಂಯುಕ್ತ ಅರಬ ಅಮಿರಾತ್, ಸೌದಿ ಅರೇಬಿಯಾ, ಕತಾರ, ಕುವೈತ್, ಮಾರಿಶಸ್, ಆಸ್ಟ್ರೇಲಿಯಾ ಇತ್ಯಾದಿ ದೇಶಗಳಲ್ಲಿ ಆಂದೋಲನಗಳನ್ನು ಮಾಡಲಾಯಿತು. ಅಲ್ಲಿಯ ನಾಗರಿಕರು

‘Boycott Chinese Products’ #ChineseProductsInDustbin, ‘ಚೀನಾದ ವಸ್ತು ಕಸದ ಬುಟ್ಟಿಗೆ ಹಾಕಿ’, ‘ಎಸೆಯಿರಿ ಎಸೆಯಿರಿ ಚೀನಾದ ವಸ್ತು ಎಸೆಯಿರಿ’, ‘ಭಯೋತ್ಪಾದನೆಗೆ ಎರಡೇ ಹೆಸರು ಚೈನಾ ಮತ್ತು ಪಾಕಿಸ್ತಾನ’, ‘ಸ್ವದೇಶಿ ಉಪಯೋಗಿಸಿ ಚೈನಾಗೆ ಓಡಿಸಿ’ ಹೀಗೆ ಆಂಗ್ಲ, ಹಿಂದಿ ಹಾಗೂ ಮರಾಠಿ ಫಲಕಗಳನ್ನು ಹಿಡಿದು ಆಂದೋಲನ ಮಾಡಿದರು.

ಅದರೊಂದಿಗೆ ಭಾರತದ ೨೦ ರಾಜ್ಯಗಳ ನವ ದೆಹಲಿ, ಬೆಂಗಳೂರು, ಮುಂಬಯಿ, ಚೆನ್ನೈ, ಭೋಪಾಳ, ಭಾಗ್ಯನಗರ (ಹೈದ್ರಾಬಾದ), ಪಟ್ನಾ, ಕರ್ಣಾವತಿ (ಅಹಮದಾಬಾದ), ಆಗರತಲಾ ಈ ರಾಜಧಾನಿಗಳಿರುವ ನಗರಗಳು ಅದೇ ರೀತಿ ಮೈಸೂರು, ಮಂಗಳೂರು, ಜೋಧಪೂರ, ಫರೀದಾಬಾದ, ಪ್ರಯಾಗರಾಜ, ವಾರಾಣಸಿ, ಗೋರಖಪೂರ, ಇಂದೂರ, ಉಜ್ಜೈನ, ವಾಪೀ, ಬಡೋದಾ, ನಾಗಪೂರ ಇತ್ಯಾದಿ ೧೪೦ ನಗರಳಿಂದ ಈ ಪ್ರತಿಕ್ರಿಯಾತ್ಮಕ ಆಂದೋಲನಗಳನ್ನು ಮಾಡಲಾಯಿತು. ಭಾರತ ಸರಕಾರವು ದೇಶದ ಗಡಿಯನ್ನು ಭದ್ರವಾಗಿಡಲು ಎಲ್ಲ ರೀತಿಯಿಂದಲೂ ಪ್ರಯತ್ನಿಸಬೇಕು ಹಾಗೂ ನಾವು ಒಬ್ಬ ಭಾರತೀಯರೆಂದು ಆಂತರಿಕ ಸ್ತರದಲ್ಲಿ ಚೀನಾಗೆ ಪಾಠ ಕಲಿಸಲು ಕಟಿಬದ್ಧರಾಗಿದ್ದೇವೆ, ಎಂದು ಈ ಆಂದೋಲನದ ಮೂಲಕ ಸಂದೇಶವನ್ನು ನೀಡಲಾಯಿತು.

ಇಂದು ಈ ವಿಷಯದಲ್ಲಿ ರಾಷ್ಟ್ರಪ್ರೇಮಿ ನಾಗರಿಕರು ಒಟ್ಟಾಗಿ ಟ್ವಿಟರ್‌ನಲ್ಲಿ #ChineseProductsInDustbin ಹೆಸರಿನಲ್ಲಿ ನಡೆಸಿದ ಟ್ರೆಂಡ್‌ಗೆ ಅತ್ಯುತ್ತಮ ಬೆಂಬಲ ವ್ಯಕ್ತವಾಯಿತು. ಕೆಲವು ಸಮಯದಲ್ಲಿಯೇ ಈ ಟ್ರೆಂಡ್ ದೇಶದಲ್ಲಿ ಮೊದಲ ಸ್ಥಾನದಲ್ಲಿತ್ತು. ಇದರಲ್ಲಿ ೫೮ ಸಾವಿರ ಟ್ವೀಟ್ಸ್‌ಗಳನ್ನು ಮಾಡಿ ನಾಗರಿಕರು ಚೀನಾದ ವಸ್ತುಗಳನ್ನು ಬಹಿಷ್ಕರಿಸುವಂತೆ ಕರೆ ನೀಡಿದರು.