ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜಸಿಂಹ ಚೌಹಾಣ ಇವರಿಗೆ ಕೊರೋನಾ ಸೋಂಕು

ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜಸಿಂಹ ಚೌಹಾಣ ಇವರಿಗೆ ಕೊರೋನಾ ಸೋಂಕು ತಗಲಿದೆ. ಅವರ ಕೊರೋನಾ ಪರೀಕ್ಷೆಯ ವರದಿಯಲ್ಲಿ ಸಕಾರಾತ್ಮಕ(ಪಾಝಿಟಿವ್) ಬಂದಿದೆ. ಅವರು ಸ್ವತಃ ಟ್ವೀಟ್ ಮಾಡಿ ಈ ಮಾಹಿತಿಯನ್ನು ನೀಡಿದ್ದಾರೆ.

ಒಂದು ಹಕ್ಕಿಯ ಗೂಡನ್ನು ಉಳಿಸಲು ಇಡೀ ಊರಿನ ಎಲ್ಲ ಬೀದಿ ದೀಪಗಳು ೩೫ ದಿನಗಳ ಕಾಲ ಸ್ಥಗಿತ !

ತಮಿಳುನಾಡಿನ ಶಿವಗಂಗಾ ಜಿಲ್ಲೆಯ ಪೋಥ್ಥಾಕುಡಿ ಗ್ರಾಮದಲ್ಲಿ ಕೇವಲ ಒಂದು ಪಕ್ಷಿಯ ಗೂಡಿಗಾಗಿ ಬೀದಿ ದೀಪಗಳನ್ನು ೩೫ ದಿನಗಳ ವರೆಗೆ ಸ್ಥಗಿತ ಗೊಳಿಸಲಾಗಿತ್ತು. ಒಂದು ಆಂಗ್ಲ ದಿನಪತ್ರಿಕೆಯು ಇದರ ಬಗ್ಗೆ ವರದಿ ಮಾಡಿದೆ. ಈ ವರದಿಗನುಸಾರ ಈ ಗ್ರಾಮದಲ್ಲಿ ವಾಸಿಸುತ್ತಿರುವ ಕರುಪಿ ರಾಜ ಎಂಬ ವಿದ್ಯಾರ್ಥಿಯು ತನ್ನ ಮನೆಯ ಸಮೀಪ ಬೀದಿ ದೀಪಗಳ ‘ಸ್ವಿಚ್‌ಬೋರ್ಡ್’ನಲ್ಲಿ ಹಕ್ಕಿ ಗೂಡು ಕಟ್ಟಿರುವುದನ್ನು ನೋಡಿದನು.

ಸುಲ್ತಾನಪುರ (ಉತ್ತರಪ್ರದೇಶ) ಇಲ್ಲಿ ದೇವಸ್ಥಾನದ ಪರಿಸರದಲ್ಲಿ ೨೨ ವರ್ಷದ ಸಾಧುವಿನ ಮೃತದೇಹ ಮರದ ಮೇಲೆ ನೇತಾಡುತ್ತಿರುವ ಸ್ಥಿತಿಯಲ್ಲಿ ಪತ್ತೆ

ಇಲ್ಲಿಯ ಛತೌನಾ ಮಾರುಕಟ್ಟೆಯ ಬಳಿಯ ವೀರ ಬಾಬಾ ದೇವಸ್ಥಾನದ ಪರಿಸರದಲ್ಲಿ ಓರ್ವ ಬಾಲಯೋಗಿ ಸಾಧುವಿನ ಮೃತದೇಹವು ಒಂದು ಮರದಲ್ಲಿ ನೇತಾಡುತ್ತಿರುವ ಸ್ಥಿತಿಯಲ್ಲಿ ಪತ್ತೆಯಾಗಿದೆ. ಬಾಲಯೋಗಿ ಸತ್ಯೇಂದ್ರ ಆನಂದ ಸರಸ್ವತಿಜೀ ಮಹಾರಾಜ (ವಯಸ್ಸು ೨೨) ಎಂದು ಅವರ ಹೆಸರಾಗಿದೆ.

ಎಲ್ಲ ವಾಚಕರು, ಹಿತಚಿಂತಕರು ಮತ್ತು ಧರ್ಮಪ್ರೇಮಿಗಳಲ್ಲಿ ಸವಿನಯ ವಿನಂತಿ !

ಕೆಲವು ಹಿತಚಿಂತಕರು ಈ ಯೋಜನೆಗೆ ಸಹಾಯ ಮಾಡುವ ಇಚ್ಛೆಯನ್ನು ಈ ಮೊದಲು ಸಹ ವ್ಯಕ್ತಪಡಿಸಿದ್ದಾರೆ. ಒಟ್ಟಾರೆ ಎಲ್ಲೆಡೆಗಳಲ್ಲಿರುವ ಆಶ್ರಮಗಳು ಹಾಗೂ ಸೇವಾಕೇಂದ್ರಗಳ ಚಿಕ್ಕ-ದೊಡ್ಡ ಪ್ರಸ್ತಾಪಿತ ಯೋಜನೆಗಳ ವ್ಯಾಪ್ತಿಯ ವಿಚಾರ ಮಾಡಿದಾಗ ದೊಡ್ಡ ಪ್ರಮಾಣದಲ್ಲಿ ನಿಧಿಯ ಆವಶ್ಯಕತೆಯಿದೆ.

ಸಾಧಕರಿಗೆ ಸೂಚನೆ

ಸಾಧಕರಿಗೆ ಪ್ರಕಾಶ ಕಿರಣಗಳ ಈ ಪರಿಣಾಮವು ರಾಮನಾಥಿ ಆಶ್ರಮದ ಹೊರತಾಗಿ ಇತರ ಸನಾತನದ ಆಶ್ರಮಗಳಲ್ಲಿ, ಸಾಧಕರ ಮನೆಗಳಲ್ಲಿ ಹಾಗೂ ಇತರ ಸ್ಥಳಗಳಲ್ಲಿಯೂ ಕಂಡು ಬಂದಲ್ಲಿ ಸಾಧಕರು ಅದನ್ನು ಮುಂದಿನಂತೆ ಅಧ್ಯಯನ ಮಾಡಬೇಕು.

ಸಾಧಕರಿಗಾಗಿ ಮಹತ್ವದ ಸೂಚನೆ

ಅತ್ಯಾವಶ್ಯಕವಾಗಿದ್ದರೆ ಮಾತ್ರ ಮನೆಯಿಂದ ಹೊರಗೆ ಹೋಗಬೇಕು, ಸೇವೆಗಾಗಿ ಹೊರಗೆ ಹೋಗಲು ಹೇಳಿದ್ದರೆ, ಆ ಸಾಧಕರನ್ನು ಬಿಟ್ಟು ಬೇರೆ ಯಾರೂ ಸೇವೆಗಾಗಿ ಹೊರಗೆ ಹೋಗಬಾರದು, ೧೦ ವರ್ಷಗಳಿಗಿಂತ ಕಡಿಮೆ ವಯಸ್ಸಿನ ಮತ್ತು ೬೫ ವರ್ಷಗಳಿಗಿಂತ ಹೆಚ್ಚು ವಯಸ್ಸಿನ ವ್ಯಕ್ತಿಗಳು ಮನೆಯ ಹೊರಗೆ ಹೋಗಬಾರದು.

ಹಿಂದೂಗಳ ದೇವತೆಗಳ ವಿಡಂಬನೆಯನ್ನು ಮಾಡುವ ವಿದೇಶಿ ಕಂಪನಿಗಳನ್ನು ಭಾರತ ಸರಕಾರ ವಿರೋಧಿಸಬೇಕು !

ಅಮೇರಿಕದ ‘ಕಾಫಿ ಶಾಪ್ ಆಫ್ ಹಾರರ್ಸ್ ಎಂಬ ಕಂಪನಿಯು ತಯಾರಿಸಿದ ಕಪ್ಪು ಚಹಾದ ಉತ್ಪಾದನೆಗೆ ‘ಬ್ಲಡ್ ಆಫ್ ಕಾಲಿ’ (ಕಾಳಿಯ ರಕ್ತ) ಎಂದು ಹೆಸರಿಟ್ಟು ಮಹಾಕಾಳಿ ದೇವಿಯ ಅವಮಾನ ಮಾಡಿದೆ. ‘ಈ ಉತ್ಪಾದನೆಯನ್ನು ಹಿಂಪಡೆದು ಕ್ಷಮೆ ಯಾಚಿಸಬೇಕು’, ಎಂದು ಹಿಂದೂಗಳು ಆಗ್ರಹಿಸಿದ್ದಾರೆ.

ಹೊಸ್ಟನ್‌ನಲ್ಲಿರುವ ಚೀನಾದ ವಾಣಿಜ್ಯ ರಾಯಭಾರಿ ಕಛೇರಿ ಬೇಹುಗರಿಕೆಯ ಮುಖ್ಯಕೇಂದ್ರವಾಗಿತ್ತು ! – ಅಮೇರಿಕಾ

ಹೊಸ್ಟನ್‌ನಲ್ಲಿಯ ಚೀನಾದ ವಾಣಿಜ್ಯ ರಾಯಭಾರಿ ಕಛೇರಿಯು ಬೇಹುಗರಿಕೆಯ ಮುಖ್ಯಕೇಂದ್ರವಾಗಿತ್ತು. ಈ ರಾಯಭಾರಿ ಕಛೇರಿಯಿಂದ ಬೆಹುಗರಿಕೆಯೊಂದಿಗೆ ಬೌದ್ಧಿಕ ಸಂಪತ್ತಿನ ಕಳ್ಳತನವನ್ನೂ ಮಾಡಲಾಗುತ್ತಿತ್ತು. ಆದ್ದರಿಂದ ನಾವು ಅದನ್ನು ಮುಚ್ಚುವ ನಿರ್ಧಾರಕ್ಕೆ ಬಂದೆವು, ಎಂದು ಅಮೇರಿಕಾದ ವಿದೇಶಾಂಗ ಸಚಿವ ಮೈಕ್ ಪಾಂಪಿಒ ಮಾಹಿತಿ ನೀಡಿದರು.

ಕೊರೋನಾದ ರೋಗಿ ಪತ್ತೆಯಾಗಿದ್ದರಿಂದ ವಸತಿಗೃಹವನ್ನು ಸೀಲ್ ಮಾಡುವಾಗ ಕೆಲವು ನಾಗರಿಕರು ಒಳಗೆ ಸಿಲುಕಿದ್ದರು !

ಇಲ್ಲಿ ಒಂದು ಕಟ್ಟಡದಲ್ಲಿ ಕೊರೋನಾದ ರೋಗಿ ಪತ್ತೆಯಾಗಿದ್ದರಿಂದ ಮಹಾನಗರಪಾಲಿಕೆಯ ಸಿಬ್ಬಂದಿಗಳು ೨ ವಸತಿಗೃಹಗಳ ಬಾಗಿಲನ್ನು ಸೀಲ್ ಮಾಡಿದರು; ಆದರೆ ಈ ಮನೆಗಳಲ್ಲಿ ೧ ಮಹಿಳೆ, ೨ ಮಕ್ಕಳು ಹಾಗೂ ೧ ಹಿರಿಯ ನಾಗರಿಕರು ಇದ್ದರು. ಈ ಘಟನೆಯಿಂದಾಗಿ ಜನರಲ್ಲಿ ಆಕ್ರೋಶ ವ್ಯಕ್ತವಾದಾಗ ಮಹಾನಗರಪಾಲಿಕೆಯ ಆಯುಕ್ತರು ಸೀಲನ್ನು ತೆಗೆಯುವಂತೆ ಆದೇಶ ನೀಡುತ್ತ ಕ್ಷಮೆ ಯಾಚಿಸಬೇಕಾಯಿತು.