Pejawara Shree On Tirupati Row : ತಿರುಪತಿ ಬಾಲಾಜಿ ದೇವಸ್ಥಾನದ ನಿರ್ವಹಣೆಯನ್ನು ಹಿಂದೂಗಳಿಗೆ ಒಪ್ಪಿಸಿ ! – ಪೇಜಾವರ ಶ್ರೀ ವಿಶ್ವ ಪ್ರಸನ್ನ ಸ್ವಾಮೀಜಿ

ಉಡುಪಿಯ ಪೇಜಾವರ ಮಠದ ವಿಶ್ವ ಪ್ರಸನ್ನ ಸ್ವಾಮೀಜಿ ಅವರ ಆಗ್ರಹ

ಪೇಜಾವರ ಮಠದ ವಿಶ್ವ ಪ್ರಸನ್ನ ಸ್ವಾಮೀಜಿ

ಉಡುಪಿ (ಕರ್ನಾಟಕ) – ತಿರುಪತಿ ಬಾಲಾಜಿ ದೇವಸ್ಥಾನದ ಪ್ರಸಾದದಲ್ಲಿ ಮೀನಿನ ಎಣ್ಣೆ, ಹಂದಿಯ ಕೊಬ್ಬು ಮತ್ತು ಗೋಮಾಂಸದಿಂದ ತಯಾರಿಸಿರುವ ಕೊಬ್ಬಿನ ಬಳಕೆ ಮಾಡಿರುವುದು ಹಿಂದೂ ಸಮುದಾಯದ ದೊಡ್ಡ ಅವಮಾನವಾಗಿದೆ. ಇದು ದೇವರ ಅವಮಾನ ಕೂಡ ಆಗಿದೆ. ಸರಕಾರವು ಇಂತಹ ನೀಚ ಕೃತ್ಯ ಮಾಡುವುದು ಖಂಡನೀಯವಾಗಿದೆ. ಧಾರ್ಮಿಕ ಕೇಂದ್ರಗಳು ಸರಕಾರದ ಆಧೀನದಲ್ಲಿರಬಾಲಾರದು, ಇದೆಲ್ಲಾ ಹಿಂದೂ ಧರ್ಮಿಯರ ಆಧೀನದಲ್ಲಿರಬೇಕು. ಸರ್ವೋಚ್ಚ ನ್ಯಾಯಾಲಯದ ನಿರ್ಣಯ ಕೂಡ ಇದೇ ಹೇಳುತ್ತದೆ. ಈಗಲಾದರೂ ದೇವಸ್ಥಾನಗಳನ್ನು ಸರಕಾರದ ಹಿಡಿತದಿಂದ ಮುಕ್ತಗೊಳಿಸಬೇಕು. ತಿರುಪತಿ ದೇವಸ್ಥಾನದ ಆಡಳಿತ ಹಿಂದುಗಳಿಗೆ ಒಪ್ಪಿಸಬೇಕೆಂದು ಉಡುಪಿಯ ಪೇಜಾವರ ಮಠದ ವಿಶ್ವ ಪ್ರಸನ್ನ ಸ್ವಾಮೀಜಿ ಅವರು ಆಗ್ರಹಿಸಿದ್ದಾರೆ.

ಸ್ವಾಮೀಜಿ ಮಾತು ಮುಂದುವರೆಸಿ, ತಿರುಪತಿಯ ಶ್ರೀನಿವಾಸನು ಗೋವುಗಳ ರಕ್ಷಣೆಗಾಗಿ ಅವತಾರ ತಾಳಿದ್ದನು ಎಂದು ನಮ್ಮ ಪುರಾಣ ಹೇಳುತ್ತದೆ. ಈ ಪುಣ್ಯಕ್ಷೇತ್ರದಲ್ಲಿ ಗೋವು ಸರ್ಪಕ್ಕೆ ಹಾಲು ಕುಡಿಸುತ್ತಿತ್ತು. ಆ ಸಮಯದಲ್ಲಿ ಶ್ರೀನಿವಾಸನು ಗೋವು ಮಾಲೀಕನ ಹಿಡಿತದಿಂದ ಗೋವುಗಳನ್ನು ರಕ್ಷಿಸಿದ್ದನೆಂದು ಹೇಳಲಾಗುತ್ತದೆ. ಅಂತಹ ಶ್ರೀನಿವಾಸನಿಗೆ ಹಸುಗಳ ಕೊಬ್ಬಿನ ಪ್ರಸಾದ ನೀಡಿರುವುದು ಅಕ್ಷಮ್ಯ ಅಪರಾಧವಾಗಿದೆ. ಇದು ಹಿಂದೂಗಳ ಧಾರ್ಮಿಕ ಶ್ರದ್ಧೆಯ ಮೇಲೆ ನಡೆದಿರುವ ದಾಳಿಯಾಗಿದೆ ಎಂದವರು ಖೇದ ವ್ಯಕ್ತಪಡಿಸಿದರು.