ಬೇರೆ ದೇಶಗಳ ರಾಷ್ಟ್ರಧ್ವಜ ಹಾರಿಸುವುದರ ವಿರುದ್ಧ ಪೊಲೀಸರು ಕಠಿಣ ಕ್ರಮ ಕೈಗೊಳ್ಳಬೇಕು ! – ಪ್ರಮೋದ್ ಮುತಾಲಿಕ್

ಮಂಡ್ಯ – ಇಲ್ಲಿನ ನಾಗಮಂಗಲದಲ್ಲಿ ನಡೆದ ಗಲಭೆಯಲ್ಲಿ ಬಂಧಿಸಲಾಗಿರುವ ಬದ್ರಿಕೊಪ್ಪಲು ಗ್ರಾಮದ ಹಿಂದೂ ಯುವಕರನ್ನು ಮಂಡ್ಯ ಜಿಲ್ಲಾ ಕಾರಾಗೃಹಕ್ಕೆ ಭೇಟಿ ಮಾಡಲು ಬಂದಿದ್ದ ಶ್ರೀರಾಮಸೇನೆ ಮುಖಂಡ ಪ್ರಮೋದ್ ಮುತಾಲಿಕ್ ಅವರನ್ನು ಜಿಲ್ಲೆಯ ಗಡಿ ಮದ್ದೂರು ತಾಲೂಕಿನ ನಿಡಘಟ್ಟದಲ್ಲಿ ಪೊಲೀಸರು ತಡೆದರು. ಈ ಕುರಿತು ಶ್ರೀ. ಮುತಾಲಿಕ ಇವರು ಪ್ರಸಾರ ಮಾಧ್ಯಮದೊಂದಿಗೆ ಮಾತನಾಡುತ್ತಾ, ಡಾ. ಅಂಬೇಡ್ಕರ್ ಅವರು ಸಂವಿಧಾನದ ಮೂಲಕ ಎಲ್ಲ ರೀತಿಯ ಸ್ವಾತಂತ್ರ್ಯ ನೀಡಿದ್ದಾರೆ. ನಾನು ಮಂಡ್ಯಕ್ಕೆ ಭೇಟಿ ನೀಡಿದ ನಂತರ ಏನಾದರೂ ನಡೆದರೆ ನನ್ನ ವಿರುದ್ಧ ಅಪರಾಧ ದಾಖಲಿಸಿರಿ; ಆದರೆ ನಮ್ಮನ್ನು ಈ ರೀತಿ ತಡೆಯುವುದು ಅಕ್ಷಮ್ಯ ಅಪರಾಧವಾಗಿದೆ. ಕಾಂಗ್ರೆಸ ಸರಕಾರ ಬಂದಾಗಿನಿಂದ ಹಿಂದೂಗಳು ಮೇಲೆ ನಿರಂತರ ದೌರ್ಜನ್ಯಗಳು ಆಗುತ್ತಿವೆ. ನಾಗಮಂಗಲ ಮತ್ತು ದಾವಣಗೆರೆಯ ಘಟನೆಗಳು ಅವುಗಳ ಪುರಾವೆಗಳಾಗಿವೆ. ಇಂದು ಪ್ಯಾಲೆಸ್ತೀನ್‌ನ ಧ್ವಜ ಹಾರಿಸುತ್ತಾರೆ. ನಾಳೆ ಪಾಕಿಸ್ತಾನದ ಧ್ವಜ ಹಾರಿಸಬಹುದು. ಇಂತಹವರ ವಿರುದ್ಧ ಪೊಲೀಸರು ಕಠಿಣ ಕ್ರಮ ಕೈಗೊಳ್ಳಬೇಕು. ‘ಈದ್ ಮಿಲಾದ ಸಂದರ್ಭದಲ್ಲಿ ಇಂತಹ ಧ್ವಜವನ್ನು ಏಕೆ ಹಾರಿಸುತ್ತಾರೆ ?’ ಎಂದು ಅವರು ಪ್ರಶ್ನಿಸಿದರು.

ಸಂಪಾದಕೀಯ ನಿಲುವು

ಪೊಲೀಸರಿಗೆ ಇಂತಹ ಸಲಹೆ ಏಕೆ ನೀಡಬೇಕಾಗುತ್ತದೆ ? ಸ್ವತಃ ಅವರಿಗೆ ತಿಳಿಯುವುದಿಲ್ಲವೇ ?