ಒಂದು ಹಕ್ಕಿಯ ಗೂಡನ್ನು ಉಳಿಸಲು ಇಡೀ ಊರಿನ ಎಲ್ಲ ಬೀದಿ ದೀಪಗಳು ೩೫ ದಿನಗಳ ಕಾಲ ಸ್ಥಗಿತ !

* ಎಲ್ಲಿ ಒಂದು ಪಕ್ಷಿಯ ಗೂಡನ್ನು ಉಳಿಸಲು ೩೫ ದಿನಗಳ ಕಾಲ ಕತ್ತಲೆಯಲ್ಲಿ ವಾಸಿಸುವ ಸಹಿಷ್ಣು ವೃತ್ತಿಯ ಹಿಂದೂಗಳು ಮತ್ತು ಎಲ್ಲಿ ಮಾಂಸವನ್ನು ತಿನ್ನಲು ಹಾಡುಹಗಲೇ ಗೋಮಾತೆಯನ್ನು ಕ್ರೂರವಾಗಿ ಕೊಲ್ಲುವ ಮತಾಂಧರು !

ಚೆನ್ನೈ: ತಮಿಳುನಾಡಿನ ಶಿವಗಂಗಾ ಜಿಲ್ಲೆಯ ಪೋಥ್ಥಾಕುಡಿ ಗ್ರಾಮದಲ್ಲಿ ಕೇವಲ ಒಂದು ಪಕ್ಷಿಯ ಗೂಡಿಗಾಗಿ ಬೀದಿ ದೀಪಗಳನ್ನು ೩೫ ದಿನಗಳ ವರೆಗೆ ಸ್ಥಗಿತ ಗೊಳಿಸಲಾಗಿತ್ತು. ಒಂದು ಆಂಗ್ಲ ದಿನಪತ್ರಿಕೆಯು ಇದರ ಬಗ್ಗೆ ವರದಿ ಮಾಡಿದೆ.

ಈ ವರದಿಗನುಸಾರ ಈ ಗ್ರಾಮದಲ್ಲಿ ವಾಸಿಸುತ್ತಿರುವ ಕರುಪಿ ರಾಜ ಎಂಬ ವಿದ್ಯಾರ್ಥಿಯು ತನ್ನ ಮನೆಯ ಸಮೀಪ ಬೀದಿ ದೀಪಗಳ ‘ಸ್ವಿಚ್‌ಬೋರ್ಡ್’ನಲ್ಲಿ ಹಕ್ಕಿ ಗೂಡು ಕಟ್ಟಿರುವುದನ್ನು ನೋಡಿದನು. ಹಕ್ಕಿಯು ಈ ಗೂಡಿನಲ್ಲಿ ಮೊಟ್ಟೆಗಳನ್ನು ಸಹ ಇಟ್ಟಿತ್ತು. ಆದ್ದರಿಂದ ಈ ಗೂಡು, ಆ ಹಕ್ಕಿ ಮತ್ತು ಅದರ ಮೊಟ್ಟೆಗಳನ್ನು ಉಳಿಸುವ ಸಲುವಾಗಿ, ಕರುಪಿ ರಾಜ ತನ್ನ ಸ್ನೇಹಿತರ ಮುಂದೆ ವಿದ್ಯುತ್ ಸ್ಥಗಿತಗೊಳಿಸುವ ವಿಚಾರವನ್ನು ಮಂಡಿಸಿದನು. ಆದರೆ, ಒಂದು ಪಕ್ಷಿಗಾಗಿ ಇಷ್ಟು ದೊಡ್ಡ ನಿರ್ಧಾರ ತೆಗೆದುಕೊಳ್ಳುವ ವಿಚಾರವು ಗ್ರಾಮದ ಕೆಲವರಿಗೆ ಒಪ್ಪಿಗೆಯಾಗಲಿಲ್ಲ. ಆದ್ದರಿಂದ ಕರುಪಿಯು ಗ್ರಾಮದ ಸರಪಂಚರ ಬಳಿ ಹೋಗಿ ಎಲ್ಲವನ್ನು ವಿವರಿಸಿದನು ಮತ್ತು ವಿದ್ಯುತ್ ಸ್ಥಗಿತಗೊಳಿಸುವಂತೆ ಒತ್ತಾಯಿಸಿದನು. ಕೊನೆಯಲ್ಲಿ ಸರಪಂಚರು ಕರುಪಿಯ ಬೇಡಿಕೆಯನ್ನು ಒಪ್ಪಿಕೊಂಡು ಮಾನವೀಯ ದೃಷ್ಟಿಯಿಂದ ಬೀದಿ ದೀಪಗಳ ವಿದ್ಯುತ್ ಪೂರೈಕೆಯನ್ನು ಸ್ಥಗಿತಗೊಳಿಸಲು ಆದೇಶಿಸಿದರು. ಈ ಕಾರಣದಿಂದ, ಈ ಗ್ರಾಮದ ರಸ್ತೆಗಳು ೩೫ ದಿನಗಳ ಕಾಲ ಕತ್ತಲೆಯಲ್ಲಿತ್ತು.