ಹಿಂದೂಗಳ ಹತ್ಯೆಗಾಗಿಯೇ ದಾವಣಗೆರೆಯಲ್ಲಿ ಗಣೇಶ ಮೂರ್ತಿಯ ವಿಸರ್ಜನೆಯ ಮೆರವಣಿಗೆಯ ಮೇಲೆ ದಾಳಿಯ ಸಂಚು ರೂಪಿಸಲಾಗಿತ್ತು !

ಪೊಲೀಸ್ ಎಫ್‌ಐಆರ್‌ನಲ್ಲಿ ಆಘಾತಕಾರಿ ಅಂಶ ಬಯಲು !

ದಾವಣಗೆರೆ – ಸಪ್ಟೆಂಬರ 19 ರಂದು ಸಂಜೆ ಕೆ.ಆರ್. ರಸ್ತೆಯ ಮೇಲಿನ ಮುದೇಗೌಡ ಮಲ್ಲಮ್ಮ ಮುರಿಗೆಪ್ಪ ಶಾಲೆ ಹತ್ತಿರ ಅಂದಾಜು 70-80 ಅನ್ಯ ಕೋಮಿನ ಯುವಕರ ಗುಂಪು ಆಝಾದ ನಗರದ ಶ್ರೀ ಗಣೇಶಮೂರ್ತಿಯ ವಿಸರ್ಜನೆಯ ಮೆರವಣಿಗೆಯ ಮೇಲೆ ದಾಳಿ ನಡೆಸಿ ಹಿಂದೂಗಳನ್ನು ಹತ್ಯೆ ಮಾಡಲು ಸಂಚು ರೂಪಿಸಲಾಗಿತ್ತು ಎಂದು ಪೊಲೀಸರ ಎಫ್‌ಐಆರ್‍ನಿಂದ ಬೆಳಕಿಗೆ ಬಂದಿದೆ.

ವಿಸರ್ಜನೆಯ ಮೆರವಣಿಗೆ ಜಗಳೂರ ಬಸ್ ನಿಲ್ದಾಣದ ಹತ್ತಿರದ ವಾಟರ ಟ್ಯಾಂಕ ಹತ್ತಿರ ಬಂದಾಗ ಮೆರವಣಿಗೆಯ ಮೇಲೆ ಕಲ್ಲು ತೂರಾಟ ನಡೆಸಿದ್ದರು. ನರಸರಾಜ ಪೇಟೆಯ ಮುಖ್ಯ ರಸ್ತೆಯ ಮಾರ್ಗದಲ್ಲಿ ಬಂದ ಸುಮಾರು 70-80 ಯುವಕರು ಏಕಾಏಕಿ ಮೆರವಣಿಗೆಯ ಮೇಲೆ ಕಲ್ಲು ತೂರಾಟ ನಡೆಸಿದರು. ಇದರಿಂದ ಅಲ್ಲಿದ್ದ ಪೊಲೀಸರು ಗಾಯಗೊಂಡರು. ತಕ್ಷಣವೇ ಗುಂಪನ್ನು ಚದುರಿಸಿ ಮೆರವಣಿಗೆಯನ್ನು ಮುಂದಕ್ಕೆ ಒಯ್ಯಲಾಯಿತು. ಈ ಕಲ್ಲು ತೂರಾಟದ ಪ್ರಕರಣಕ್ಕೆ ಸಂಬಂಧಿಸಿದಂತೆ 6 ಎಫ್.ಐ.ಆರ್. ದಾಖಲಿಸಲಾಗಿದ್ದು, ಇಲ್ಲಿಯವರೆಗೆ 48 ಜನರನ್ನು ಬಂಧಿಸಲಾಗಿದೆ. ಸಾಕ್ಷಿಗಳ ಆಧಾರದಲ್ಲಿ ಇನ್ನಷ್ಟು ಆರೋಪಿಗಳನ್ನು ಬಂಧಿಸುವ ಪ್ರಕ್ರಿಯೆ ಮುಂದುವರಿದಿದೆಯೆಂದು ಪೊಲೀಸ ಅಧೀಕ್ಷಕರಾದ ಉಮಾ ಪ್ರಶಾಂತ ಅವರು ಮಾಹಿತಿ ನೀಡಿದ್ದಾರೆ.