ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜಸಿಂಹ ಚೌಹಾಣ ಇವರಿಗೆ ಕೊರೋನಾ ಸೋಂಕು

ಭೋಪಾಳ – ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜಸಿಂಹ ಚೌಹಾಣ ಇವರಿಗೆ ಕೊರೋನಾ ಸೋಂಕು ತಗಲಿದೆ. ಅವರ ಕೊರೋನಾ ಪರೀಕ್ಷೆಯ ವರದಿಯಲ್ಲಿ ಸಕಾರಾತ್ಮಕ(ಪಾಝಿಟಿವ್) ಬಂದಿದೆ. ಅವರು ಸ್ವತಃ ಟ್ವೀಟ್ ಮಾಡಿ ಈ ಮಾಹಿತಿಯನ್ನು ನೀಡಿದ್ದಾರೆ.
‘ನನ್ನಲ್ಲಿ ಕೊರೋನಾದ ಲಕ್ಷಣಗಳು ಕಂಡು ಬರುತ್ತಿದ್ದವು. ಅದಕ್ಕಾಗಿ ನಾನು ಪರೀಕ್ಷೆ ಮಾಡಿಸಿದೆ. ನನ್ನ ವರದಿ ಸಕಾರಾತ್ಮಕ ಬಂದಿದೆ. ನನ್ನ ಸಂಪರ್ಕಕ್ಕೆ ಬರುವ ಎಲ್ಲ ಸಹಕಾರಿಗಳು ತಮ್ಮ ಕೊರೋನಾದ ಪರೀಕ್ಷೆಯನ್ನು ಮಾಡಿಸಿಕೊಳ್ಳಬೇಕು, ಅದೇರೀತಿ ಅವರು ತಮ್ಮನ್ನು ಪ್ರತ್ಯೇಕೀಕರಣ(ಕ್ವಾರಂಟೈನ್)ದಲ್ಲಿರಬೇಕು’, ಎಂದು ಚೌಹಾಣರು ಕರೆ ನೀಡಿದ್ದಾರೆ.