ವಯನಾಡ್ (ಕೇರಳ) – ಲೆಬನಾನ್‌ನಲ್ಲಿ ಹಿಜ್ಬುಲ್ಲಾ ಈ ಜಿಹಾದಿ ಭಯೋತ್ಪಾದಕ ಸಂಘಟನೆಯ ಭಯೋತ್ಪಾದಕರ ಪೇಜರ್ ಸ್ಫೋಟದ ಪ್ರಕರಣದಲ್ಲಿ ನಾರ್ವೆಯ ಭಾರತೀಯ ಮೂಲದ ರಿನ್ಸನ್ ಜೋಸ್ ಹೆಸರು ಬೆಳಕಿಗೆ ಬಂದಿತ್ತು. ಆತ ಕೇರಳದವನಾಗಿದ್ದಾನೆ. ಕೇರಳ ಪೊಲೀಸರು ವಯನಾಡ್‌ನಲ್ಲಿರುವ ಅವನ ನಿವಾಸಕ್ಕೆ ತೆರಳಿ ಕುಟುಂಬವರನ್ನು ವಿಚಾರಣೆ ನಡೆಸಿದ್ದಾರೆ.
LEBANON PAGER BLASTS: Norway based Keralite Rinson Jose under scanner
Kerala Police verify background, family asserts innocence#Israel #LebanonBlasts #PagerBlasts #Indian #Hezbollah pic.twitter.com/l5wf13ccxx
— Sanatan Prabhat (@SanatanPrabhat) September 23, 2024
ಈ ಕುರಿತು ಕೇರಳ ಪೊಲೀಸರು, ವಿಶೇಷ ಶಾಖೆಯ ಅಧಿಕಾರಿಗಳು ಕುಟುಂಬದ ಹಿನ್ನೆಲೆ ಪರಿಶೀಲಿಸಿದ್ದಾರೆ. ಇದರಲ್ಲಿ ಹೊಸದೇನೂ ಇಲ್ಲ. ಇಂತಹ ಪ್ರಕರಣಗಳ ವಾರ್ತೆ ಬಂದಾಗಲೆಲ್ಲ, ಈ ರೀತಿಯ ತನಿಖೆ ನಡೆಯುತ್ತಿರುತ್ತದೆ, ಎಂದು ಹೇಳಿದ್ದಾರೆ.
ಮತ್ತೊಂದೆಡೆ, ಭಾಜಪ ನಾಯಕ ಸಂದೀಪ್ ವೆರಿಯಾರ್ ಇವರು ರಿನ್ಸನ್ ಮತ್ತು ಅವರ ಕುಟುಂಬಕ್ಕೆ ರಕ್ಷಣೆ ನೀಡಬೇಕೆಂದು ಒತ್ತಾಯಿಸಿದ್ದಾರೆ. ರಿನ್ಸನ್ ಈ ದೇಶದ ಮಗನಿದ್ದಾನೆ. ಅವನು ಮಲಯಾಳಿಯಾಗಿದ್ದಾನೆ. ನಾವು ರಿನ್ಸನ್ ಮತ್ತು ಅವರ ಕುಟುಂಬದವರಿಗೆ ರಕ್ಷಣೆ ನೀಡಬೇಕು ಎಂದಿದ್ದಾರೆ.