Subramanya Swamy Tirupati Laddu Row : ತಿರುಪತಿ ದೇವಸ್ಥಾನದ ಲಡ್ಡುವಿನ ಪ್ರಕರಣ; ಡಾ. ಸುಬ್ರಹ್ಮಣ್ಯ ಸ್ವಾಮಿ ಅವರಿಂದ ಸರ್ವೋಚ್ಚ ನ್ಯಾಯಾಲಯದಲ್ಲಿ ಅರ್ಜಿ

ವಿಚಾರಣೆಗಾಗಿ ಸಮಿತಿ ಸ್ಥಾಪನೆಗೆ ಆಗ್ರಹ

ನವದೆಹಲಿ – ತಿರುಪತಿ ಬಾಲಾಜಿ ದೇವಸ್ಥಾನದ ಪ್ರಸಾದದ ಲಡ್ಡುವಿನಲ್ಲಿ ಪ್ರಾಣಿಗಳ ಕೊಬ್ಬಿನ ಬಳಕೆ ಆಗಿರುವ ಪ್ರಕರಣದಲ್ಲಿ ಭಾಜಪದ ಹಿರಿಯ ನಾಯಕ ಡಾ. ಸುಬ್ರಹ್ಮಣ್ಯ ಸ್ವಾಮಿ ಅವರು ಸರ್ವೋಚ್ಚ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ ದಾಖಲಿಸಿದ್ದಾರೆ. ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಮಾಡಿರುವ ಆರೋಪದ ವಿಚಾರಣೆ ಮಾಡಲು ಉನ್ನತ ಮಟ್ಟದ ಮತ್ತು ಸ್ವತಂತ್ರ ಸಂಸ್ಥೆ ನೇಮಕಗೊಳಿಸಬೇಕೆಂದು ಡಾ.ಸ್ವಾಮಿ ವಿನಂತಿಸಿದ್ದಾರೆ.

ಈ ಅರ್ಜಿಯಲ್ಲಿ ಡಾ. ಸ್ವಾಮಿ, ತಿರುಪತಿಯ ಪ್ರಸಾದ ನೈವೇದ್ಯವೆಂದು ನೀಡಲಾಗುವ ಲಡ್ಡುವಿನಲ್ಲಿ ಕಲಬೆರಿಕೆಯ ವಸ್ತುಗಳು ಮತ್ತು ಪ್ರಾಣಿಗಳ ಕೊಬ್ಬು ಇರುವ ಆರೋಪದ ವಿಚಾರಣೆ ನಡೆಸಲು ಸರ್ವೋಚ್ಚ ನ್ಯಾಯಾಲಯದ ಉಸ್ತುವಾರಿಯಲ್ಲಿ ಒಂದು ಸಮಿತಿ ಸ್ಥಾಪನೆಗೆ ಆದೇಶ ನೀಡಬೇಕು. ಅದರ ಜೊತೆಗೆ ಪ್ರಯೋಗ ಶಾಲೆಯಲ್ಲಿನ ಲಡ್ಡುವಿನ ಪರೀಕ್ಷಣೆಯ ವರದಿ ಮತ್ತು ಆ ಪರೀಕ್ಷೆಯಲ್ಲಿ ಉಪಯೋಗಿಸಿರುವ ತುಪ್ಪದ ಸ್ಯಾಂಪಲ್ ಈ ವಿಷಯದ ಕುರಿತು ವರದಿ ತಯಾರಿಸಲು ನ್ಯಾಯಾಲಯವು ಆದೇಶ ನೀಡಬೇಕೆಂದು ಆಗ್ರಹಿಸಲಾಗಿದೆ. ಡಾ. ಸ್ವಾಮಿ ಅವರ ನ್ಯಾಯವಾದಿ ರಾಜೀವ ಕುಮಾರ್ ಮತ್ತು ಸತ್ಯಂ ಸಿಂಹ ಅವರು ಈ ಬಗ್ಗೆ ಮಾತಾನಾಡಿ, ಈ ಅರ್ಜಿಯಲ್ಲಿ ಕೋಟ್ಯಾಂತರ ಭಕ್ತರ ಶ್ರದ್ಧೆಗೆ ಆಘಾತ ಉಂಟಾಗಿದೆ. ಈ ಪ್ರಕರಣದ ವಿಚಾರಣೆ ನಡೆಸುವಂತೆ ವಿನಂತಿಸಲಾಗಿದೆ ಎಂದರು.