Temple Shudhi Tirupati Laddu Row : ಪ್ರಸಾದದ ಲಡ್ಡುವಿನಲ್ಲಿನ ಕಲಬೆರಕೆಯಿಂದ ತಿರುಪತಿ ದೇವಸ್ಥಾನದ ಶುದ್ಧೀಕರಣ

ಮಹಾಶಾಂತಿ ಹೋಮ ಮತ್ತು ಪಂಚಗವ್ಯದ ಪ್ರೋಕ್ಷಣೆ

ತಿರುಪತಿ (ಆಂಧ್ರಪ್ರದೇಶ) – ತಿರುಪತಿ ಬಾಲಾಜಿ ದೇವಸ್ಥಾನದಲ್ಲಿ ಪ್ರಾಣಿಗಳ ಕೊಬ್ಬಿನಿಂದ ತಯಾರಿಸಲಾದ ತುಪ್ಪವನ್ನು ಪ್ರಸಾದದ ಲಡ್ಡುವಿಗಾಗಿ ಉಪಯೋಗಿಸಿರುವ ಪ್ರಕರಣದ ಬಳಿಕ ಈಗ ದೇವಸ್ಥಾನವನ್ನು ಶುದ್ಧೀಕರಣಗೊಳಿಸಲಾಗುತ್ತಿದೆ. ಸಪ್ಟೆಂಬರ 23ರಂದು ಬೆಳಿಗ್ಗೆ ತಿರುಪತಿಯಲ್ಲಿ ಶಾಂತಿ ಹೋಮವನ್ನು ಮಾಡಲಾಯಿತು. ಹಾಗೆಯೇ ಪಂಚಗವ್ಯವವನ್ನು ಪ್ರೋಕ್ಷಿಸಲಾಯಿತು.

ತಿರುಮಲ ತಿರುಪತಿ ದೇವಸ್ಥಾನ ಸಮಿತಿ ವತಿಯಿಂದ ಬೆಳಗ್ಗೆ 6ರಿಂದ 10ರವರೆಗೆ ಮಹಾಶಾಂತಿ ಹೋಮ ಹಾಗೂ ಪಂಚಗವ್ಯ ಪ್ರೋಕ್ಷಣೆ ಮಾಡಲಾಯಿತು. ಮಧ್ಯಾಹ್ನದವರೆಗೆ ಕೆಲವು ಧಾರ್ಮಿಕ ಶುದ್ಧೀಕರಣ ಪ್ರಕ್ರಿಯೆಗಳನ್ನು ನಡೆಸಲಾಯಿತು. ಈ ವಿಧಿಯ ವೇಳೆ ಹಲವು ಪ್ರಮುಖರು ಭಾಗವಹಿಸಿದ್ದರು ಎಂದು ಮೂಲಗಳು ತಿಳಿಸಿವೆ.

ಲಡ್ಡುವಿನ ಕಲಬೆರಕೆಯ ತನಿಖೆಗೆ ವಿಶೇಷ ಸಮಿತಿ ರಚನೆ.

ಪ್ರಸಾದದ ಲಡ್ಡುವಿನಲ್ಲಿನ ಕಲಬೆರಕೆಯ ತನಿಖೆಗಾಗಿ ವಿಶೇಷ ತನಿಖಾ ಸಮಿತಿಯನ್ನು ರಚಿಸಲಾಗಿದೆ. ಪೊಲೀಸ್ ಮಹಾನಿರ್ದೇಶಕರ ಅಧ್ಯಕ್ಷತೆಯಲ್ಲಿ ಈ ಸಮಿತಿ ಕಾರ್ಯನಿರ್ವಹಿಸಲಿದೆ. ಈ ಪ್ರಕರಣದಲ್ಲಿ ಅಧಿಕಾರದ ದುರ್ಬಳಕೆಯನ್ನು ಮಾಡಿದವರಾರು? ಎನ್ನುವ ಬಗ್ಗೆಯೂ ತನಿಖೆ ನಡೆಸಲಾಗುವುದು. ಈ ಸಮಿತಿಯ ವರದಿಯನ್ನು ಸರಕಾರಕ್ಕೆ ಸಲ್ಲಿಸಲಾಗುವುದು. ವರದಿಯ ನಂತರ ಕಠಿಣ ಕ್ರಮ ಕೈಗೊಳ್ಳುತ್ತೇವೆ’ ಎಂದು ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಹೇಳಿದ್ದಾರೆ. ‘ತಿರುಮಲ ತಿರುಪತಿ ಪವಿತ್ರ ದೇವಸ್ಥಾನವಾಗಿದೆ. ದೇವರ ಪ್ರಸಾದದಲ್ಲಿ ಮತ್ತೊಮ್ಮೆ ಕಲಬೆರಕೆ ಮಾಡುವ ಧೈರ್ಯ ಯಾರಿಗೂ ಬರಬಾರದು. ಈ ರೀತಿಯಲ್ಲಿ ನಾವು ತಪ್ಪಿತಸ್ಥರಿಗೆ ಶಿಕ್ಷೆ ನೀಡುತ್ತೇವೆ ಎಂದು ನಾಯ್ಡು ಭರವಸೆ ನೀಡಿದ್ದಾರೆ.