ಶ್ರೀ ತಿರುಪತಿ ದೇವಸ್ಥಾನದ ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬು ಸೇರಿಸಿರುವುದು ಹಿಂದೂಗಳ ಧಾರ್ಮಿಕ ಶ್ರದ್ಧೆಯ ಮೇಲೆ ಮಾಡಿರುವ ಪ್ರಯತ್ನಪೂರ್ವಕ ದಾಳಿಯಾಗಿದೆ ! – ಹಿಂದೂ ಜನಜಾಗೃತಿ ಸಮಿತಿ

ಪ್ರಸಾದದ ಲಡ್ಡುವಿನಲ್ಲಿ ಕಲಬೆರಿಕೆ ಮಾಡುವವರ ಮೇಲೆ ತಕ್ಷಣ ದೂರು ದಾಖಲಿಸಲು ಒತ್ತಾಯ

ಭಾಗ್ಯನಗರ (ತೆಲಂಗಾಣ) – ಜಗತ್ತಿನಾದ್ಯಂತ ಇರುವ ಕೋಟ್ಯಾಂತರ ಭಕ್ತರ ಶ್ರದ್ಧೆಯ ಕೇಂದ್ರವಾಗಿರುವ ಶ್ರೀ ತಿರುಪತಿ ಬಾಲಾಜಿ ದೇವಸ್ಥಾನದ ಪ್ರಸಾದದ ಲಡ್ಡುವಿನಲ್ಲಿ ಪ್ರಾಣಿಗಳ ಕೊಬ್ಬಿನಿಂದ ತಯಾರಿಸಿರುವ ತುಪ್ಪವನ್ನು ಬಳಸಲಾಗಿದೆ ಎಂಬ ಅತ್ಯಂತ ಗಂಭೀರ ವರದಿಯನ್ನು ಆಂಧ್ರ ಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಬಹಿರಂಗಗೊಳಿಸಿದ ನಂತರ ಎಲ್ಲೆಡೆ ಆಕ್ರೋಶದ ಅಲೆ ಭುಗಿಲೆದ್ದಿದೆ.

ಪ್ರಸಾದದಲ್ಲಿ ಪ್ರಾಣಿಗಳ ಕೊಬ್ಬಿನ ತುಪ್ಪ ಬೆರೆಸುವುದು ಕೇವಲ ಕಲಬೆರಕೆ ಅಷ್ಟೇ ಅಲ್ಲ, ಇದು ಹಿಂದೂಗಳ ಧಾರ್ಮಿಕ ಶ್ರದ್ಧೆಯ ಮೇಲೆ ಪ್ರಯತ್ನ ಪೂರ್ವಕವಾಗಿ ಮಾಡಿರುವ ದಾಳಿಯಾಗಿದೆ. ಇದು ಹಿಂದುಗಳ ವಿಶ್ವಾಸ ಘಾತದ ಪ್ರತೀಕವಾಗಿದೆ. ಮಾಜಿ ಮುಖ್ಯಮಂತ್ರಿ ಜಗನ್ಮೋಹನ ರೆಡ್ಡಿ ಅವರ ತಂದೆ ಸ್ಯಾಮ್ಯುಯೆಲ್ ರಾಜಶೇಖರ ರೆಡ್ಡಿ ಮುಖ್ಯಮಂತ್ರಿ ಆಗಿದ್ದಾಗ ಶ್ರೀ ತಿರುಪತಿ ಬಾಲಾಜಿ ದೇವಸ್ಥಾನದ ಪವಿತ್ರ ಲಡ್ಡು ತಯಾರಿಸುವ ಕಾಂಟ್ರಾಕ್ಟ್ ಅನ್ನು ಒಂದು ಕ್ರೈಸ್ತ ಸಂಸ್ಥೆಗೆ ನೀಡಿದ್ದರು ಮತ್ತು ದೇವಸ್ಥಾನದ ಆಡಳಿತ ಸಮಿತಿಯಲ್ಲಿ ಕ್ರೈಸ್ತರನ್ನು ನೇಮಕ ಮಾಡಿದ್ದರು. ದೇವಸ್ಥಾನ ಪರಿಸರದಲ್ಲಿ ಕ್ರೈಸ್ತ ಮಿಷಿನರಿಗಳಿಂದ ಮತಾಂತರಕ್ಕೆ ಪ್ರೋತ್ಸಾಹ ನೀಡಲಾಗಿತ್ತು.

ಈಗ ಪ್ರಸಾದದ ಲಡ್ಡುವಿನಲ್ಲಿ ಕೊಬ್ಬು ಸೇರಿಸಿ ಹಿಂದುಗಳನ್ನು ಭ್ರಷ್ಟ ಮಾಡುವ ಷಡ್ಯಂತರ ರಚಿಸಲಾಗಿದೆ. ಈ ಪಾಪ ಮಾಡಿರುವವರ ವಿರುದ್ಧ ಧಾರ್ಮಿಕ ಭಾವನೆಗೆ ಧಕ್ಕೆ ಉಂಟು ಮಾಡಿರುವುದೆಂದು ದೂರು ದಾಖಲಿಸಿ ಅವರನ್ನು ತಕ್ಷಣ ಬಂಧಿಸಬೇಕೆಂದು ಹಿಂದೂ ಜನ ಜಾಗೃತಿ ಸಮಿತಿಯ ರಾಜ್ಯ ಸಮನ್ವಯಕ ಚೇತನ ಗಾಡಿ ಅವರು ಆಗ್ರಹಿಸಿದ್ದಾರೆ. ಭಾಗ್ಯನಗರದ ವಿವಿಧ ಸಂಘಟನೆಗಳು ಒಟ್ಟಾಗಿ ಸೇರಿ ಹಿಮಾಯತ ನಗರದ ತಿರುಮಲ ತಿರುಪತಿ ದೇವಸ್ಥಾನದ ಎದುರು ಪ್ರತಿಭಟನೆ ನಡೆಸಿದರು. ನಂತರ ಬಶೀರಭಾಗ ವೃತ್ತದ ವರೆಗೆ ಮೋರ್ಚಾ ನಡೆಸಲಾಯಿತು.

ಈ ಪ್ರತಿಭಟನೆಯಲ್ಲಿ ಹಿಂದೂ ಜನಜಾಗ್ರತಿ ಸಮಿತಿಯ ಜೊತೆಗೆ, ಸನಾತನ ಸಂಸ್ಥೆ, ರಾಷ್ಟ್ರೀಯ ಶಿವಾಜಿ ಸೇನೆ, ಹಿಂದೂ ಸಂಘಟನಾ ಏಕತಾಮಂಚ, ಹನುಮಾನ್ ಚಾಲೀಸಾ ಗ್ರೂಪ್, ಸನಾತನ ಹಿಂದೂ ಸಂಘ, ಗ್ಲೋಬಲ್ ಹಿಂದೂ ಹ್ಯೂಮನ್ ರೈಟ್ಸ್ ಕಲೆಕ್ಟಿವ್, ದಲಿತ ಹಿಂದೂ ಸೇನಾ, ಭಾಜಪ, ಭಜರಂಗ ಸೇನಾ ಮತ್ತು ಇಶಾ ಫೌಂಡೇಶನ್ ನ ಕಾರ್ಯಕರ್ತರು ಪಾಲ್ಗೊಂಡಿದ್ದರು.