ಅಕೋಲಾದಲ್ಲಿ ಮೆರವಣಿಗೆಯಲ್ಲಿ ಮತಾಂಧರು ಭಯೋತ್ಪಾದಕ ಮತ್ತು ಅಪರಾಧಿಗಳ ಚಿತ್ರಗಳು ರಾರಾಜಿಸಿದವು !

ಅಕೋಲಾ – ಇಲ್ಲಿ ಈದ್ ಪ್ರಯುಕ್ತ ನಡೆಸಿರುವ ಜುಲುಸ್‌ನಲ್ಲಿ (ಮುಸಲ್ಮಾನರ ಮೆರವಣಿಗೆಯಲ್ಲಿ) ಸಹಭಾಗಿ ಆಗಿದ್ದ ಕೆಲವು ಮುಸಲ್ಮಾನರ ಕೈಯಲ್ಲಿ ‘ಹಮಾಸ’ದ ಭಯೋತ್ಪಾದಕ ಸಂಘಟನೆಯ ಅಬೂ ಉಬೆದಾನ ‘ದ ರಿಯಲ್ ಹೀರೋ, ಲಾಯನ (ನಿಜವಾದ ನಾಯಕ, ಸಿಂಹ) ಎಂಬ ಬರಹವಿರುವ ದೊಡ್ಡ ಚಿತ್ರವಿತ್ತು. ಒಂದು ಸ್ಥಳದಲ್ಲಿ ಅಲ್ಜೇರಿಯನ್ ಹಮಜಾ ಬೆಂಡೇಲಾದಾಜ್ ಇವನ ಚಿತ್ರ ಕೂಡ ಇತ್ತು. ಅವನ ಮೇಲೆ ಅಮೆರಿಕದಲ್ಲಿನ ೨೧೭ ಬ್ಯಾಂಕ್ ಮತ್ತು ಫೈನಾನ್ಸ್ ಸಂಸ್ಥೆಗಳಲ್ಲಿ ಖಾಸಗಿ ಖಾತೆಗಳನ್ನು ಹ್ಯಾಕ್ ಮಾಡಿ ಲಕ್ಷಾಂತರ ಯುಎಸ್ ಡಾಲರ್ ಕಳ್ಳತನ ಮಾಡಿರುವ ಆರೋಪವಿದೆ. ಈ ಮೆರವಣಿಗೆಯಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಪೊಲೀಸ ಬಂದೋಬಸ್ತು ಕೂಡ ಇತ್ತು. (ಹಿಂದೂಗಳ ಮೇಲೆ ತತ್ಪರತೆಯಿಂದ ಕ್ರಮ ಕೈಗೊಳ್ಳುವ ಪೊಲೀಸರು ಮತಾಂಧರ ಎದುರು ಮಾತ್ರ ತಲೆತಗ್ಗಿಸುತ್ತಾರೆ, ಇದು ಪೊಲೀಸರ ದ್ವಿಮುಖ ನೀತಿ ಗಮನಿಸಿ ! ಭಯೋತ್ಪಾದಕರಿಗೆ ಬೆಂಬಲ ನೀಡುವುದನ್ನು ಮೌನವಾಗಿ ನೋಡುತ್ತಿರುವ ಪೊಲೀಸರನ್ನು ಅಮಾನತುಗೊಳಿಸಬೇಕು ! – ಸಂಪಾದಕರು)

ಸಂಪಾದಕೀಯ ನಿಲುವು

ಭಯೋತ್ಪಾದಕ ಮತ್ತು ಅಪರಾಧಿಗಳ ಚಿತ್ರಗಳನ್ನು ಮೆರೆಸುವವರು ಭಾರತದಲ್ಲಿ ಇರುವುದು, ಇದು ಭಾರತೀಯರಿಗಾಗಿ ಅಪಾಯದ ಎಚ್ಚರಿಕೆ