ಸುಲ್ತಾನಪುರ (ಉತ್ತರಪ್ರದೇಶ) ಇಲ್ಲಿ ದೇವಸ್ಥಾನದ ಪರಿಸರದಲ್ಲಿ ೨೨ ವರ್ಷದ ಸಾಧುವಿನ ಮೃತದೇಹ ಮರದ ಮೇಲೆ ನೇತಾಡುತ್ತಿರುವ ಸ್ಥಿತಿಯಲ್ಲಿ ಪತ್ತೆ

ಸ್ಥಳೀಯರಿಗೆ ಹತ್ಯೆ ಎಂದು ಸಂದೇಹ

ಉತ್ತರಪ್ರದೇಶದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯು ಹದಗೆಟ್ಟಿದೆ ! ರಾಜ್ಯದಲ್ಲಿ ಕಾನೂನು ಮತ್ತು ಸುವಸ್ಯವಸ್ಥೆ ಅಸ್ತಿತ್ವದಲ್ಲಿದೆಯೇ ?

ಸುಲ್ತಾನಪುರ (ಉತ್ತರಪ್ರದೇಶ) – ಇಲ್ಲಿಯ ಛತೌನಾ ಮಾರುಕಟ್ಟೆಯ ಬಳಿಯ ವೀರ ಬಾಬಾ ದೇವಸ್ಥಾನದ ಪರಿಸರದಲ್ಲಿ ಓರ್ವ ಬಾಲಯೋಗಿ ಸಾಧುವಿನ ಮೃತದೇಹವು ಒಂದು ಮರದಲ್ಲಿ ನೇತಾಡುತ್ತಿರುವ ಸ್ಥಿತಿಯಲ್ಲಿ ಪತ್ತೆಯಾಗಿದೆ. ಬಾಲಯೋಗಿ ಸತ್ಯೇಂದ್ರ ಆನಂದ ಸರಸ್ವತಿಜೀ ಮಹಾರಾಜ (ವಯಸ್ಸು ೨೨) ಎಂದು ಅವರ ಹೆಸರಾಗಿದೆ. ಇದು ತಿಳಿಯುತ್ತಲೇ ಪೊಲೀಸರು ಶೀಘ್ರವಾಗಿ ಘಟನಾಸ್ಥಳಕ್ಕೆ ಧಾವಿಸಿ ಬಾಲಯೋಗಿ ಸಾಧುವಿನ ಶವವನ್ನು ವಶಕ್ಕೆ ಪಡೆದುಕೊಂಡು ಶವಪರೀಕ್ಷೆಗೆ ಕಳುಹಿಸಿದ್ದಾರೆ. ಸ್ಥಳೀಯರು ಇದು ಸಾಧುವಿನ ಹತ್ಯೆ ಮಾಡಲಾಗಿದೆ ಎಂದು ಸಂದೇಹ ವ್ಯಕ್ತಪಡಿಸಿದ್ದಾರೆ. ಇದು ಹತ್ಯೆಯೋ ಆತ್ಮಹತ್ಯೆಯೋ ?, ಇದರ ಬಗ್ಗೆ ಪೊಲೀಸರು ಕಲೆ ಹಾಕುತ್ತಿದ್ದಾರೆ. ಬಾಲಯೋಗಿ ಸತ್ಯೇಂದ್ರ ಸರಸ್ವತಿ ಮಹಾರಾಜರು ಹಿಮಾಚಲ ಪ್ರದೇಶದಿಂದ ಇಲ್ಲಿಗೆ ಬಂದಿದ್ದರು. ಅನೇಕ ವರ್ಷಗಳಿಂದ ಅವರು ಛತೌನಾ ಮಾರುಕಟ್ಟೆಯ ಹತ್ತಿರದ ವೀರ ಬಾಬಾ ದೇವಸ್ಥಾನದಲ್ಲಿ ವಾಸವಾಗಿದ್ದರು.