ಮಹಾನಗರಗಳು ಮತ್ತು ದೊಡ್ಡ ನಗರಗಳಲ್ಲಿ ವಾಸಿಸುವ ಸಾಧಕರಿಗಾಗಿ ಮಹತ್ವದ ಸೂಚನೆ

ಸಾಮಾನ್ಯವಾಗಿ ಹೊಸ ಮನೆ ಖರೀದಿಸುವಾಗ ‘ನಮ್ಮ ಮನೆಯು ಪ್ರಶಸ್ತವಾಗಿರಬೇಕು, ಅಲ್ಲಿ ಎಲ್ಲ ಸುಖ-ಸೌಲಭ್ಯಗಳಿರಬೇಕು ಎಂದು ಪ್ರತಿಯೊಬ್ಬರಿಗೆ ಅನಿಸುತ್ತದೆ. ಆಪತ್ಕಾಲದ ದೃಷ್ಟಿಯಿಂದ ಹಳ್ಳಿಯಲ್ಲಿ ಮನೆಯ ವ್ಯವಸ್ಥೆಯನ್ನು ಮಾಡುವಾಗ ಮಾತ್ರ ಎಲ್ಲ ಸುಖ ಸೌಲಭ್ಯಗಳ ಬದಲು ಅವಶ್ಯವಿರುವಷ್ಟು ಜೀವನಾವಶ್ಯಕ ಸೌಲಭ್ಯಗಳು ಸಿಗುವಂತಹ ವಿಚಾರ ಮಾಡಬೇಕು.

ರಾಜದಂಡದ ಅಂಕುಶವಿಲ್ಲದ್ದರಿಂದ ಸಮಾಜದ ಸ್ಥಿತಿ ಅರಾಜಕವಾಗಿದೆ !

‘ಮನುಷ್ಯನು ಮೂಲತಃ ಮತ್ತು ಸ್ವಭಾವತಃ ಸ್ವಾರ್ಥಿ, ಲೋಭಿಯಾಗಿರುತ್ತಾನೆ. ಅವನ ನಡವಳಿಕೆಯ ಮೇಲೆ ರಾಜದಂಡದ ಅಂಕುಶವಿಲ್ಲದಿದ್ದರೆ ಅವನು ಅನಿಯಂತ್ರಿತನಾಗಲು ತಡವಾಗಲಾರದು. ಅಂತಹ ಮನುಷ್ಯನನ್ನು ನಿಯಂತ್ರಿಸುವುದು, ಧರ್ಮದ ಮತ್ತು ದಂಡದ ಕರ್ತವ್ಯವಿದೆ.

ಭಾಗ್ಯನಗರದ ಮತಾಂಧಪ್ರೇಮಿ ಪೊಲೀಸರ ಕಾನೂನುದ್ರೋಹವನ್ನು ತಿಳಿಯಿರಿ !

ತೆಲಂಗಾಣ ಉಚ್ಚ ನ್ಯಾಯಾಲಯವು ಕೊರೋನಾ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಮೊಹರಂ ದಿನದಂದು ಹಳೆಭಾಗ್ಯನಗರದಲ್ಲಿ ಮೆರವಣಿಗೆಯನ್ನು ನಡೆಸಲು ಅನುಮತಿ ನೀಡಿರಲಿಲ್ಲ. ಈ ಆದೇಶವನ್ನು ಉಲ್ಲಂಘಿಸಿದರೆ ಕಠಿಣ ಕ್ರಮ ಕೈಗೊಳ್ಳುವಂತೆ ನ್ಯಾಯಾಲಯ ಪೊಲೀಸರಿಗೆ ಸೂಚಿಸಿತ್ತು. ಆದರೂ ಪೊಲೀಸ್ ಆಯುಕ್ತರು ಮೆರವಣಿಗೆಗೆ ಅನುಮತಿ ನೀಡಿ ಭದ್ರತೆ ಪೂರೈಸಿದ್ದರು.

ಚೀನಾ ಕಬಳಿಸಿದ ಭೂಮಿಯನ್ನು ಪಡೆಯಲು ಬುಮಲಾ (ಅರುಣಾಚಲ ಪ್ರದೇಶ) ದಲ್ಲಿ ಭೂಮಾತೆಯ ಪೂಜೆ

ಇಂಡೋ-ಟಿಬೆಟ್ ಸಹಕಾರ ವೇದಿಕೆಯು ಪ್ರತಿವರ್ಷ ತವಾಂಗ್ ತೀರ್ಥಯಾತ್ರೆಯನ್ನು ಆಯೋಜಿಸುತ್ತದೆ. ಯಾತ್ರಿಕರು ಇಂಡೋ-ಟಿಬೆಟಿಯನ್ ಗಡಿಯಲ್ಲಿರುವ ಬುಮಲಾಗೆ ಕಾಲ್ನಡಿಗೆಯಿಂದ ಹೋಗಿ ಮಾತೃಭೂಮಿಗೆ ಪೂಜೆ ಸಲ್ಲಿಸುತ್ತಾರೆ. ೧೯೬೨ರಲ್ಲಿ ಚೀನಾ ವಶಪಡಿಸಿಕೊಂಡ ಭೂಮಿಯನ್ನು ಪುನಃ ಪಡೆದುಕೊಳ್ಳಲು ಅವರು ಸಂಕಲ್ಪ ಮಾಡುತ್ತಾರೆ

‘ಲವ್ ಜಿಹಾದ್’ನ ಘಟನೆಗಳನ್ನು ತಡೆಗಟ್ಟಲು ಮತಾಂತರ ವಿರೋಧಿ ಕಾಯ್ದೆಯನ್ನು ರೂಪಿಸಲಿರುವ ಉತ್ತರಪ್ರದೇಶ ಸರಕಾರ

ಲವ್ ಜಿಹಾದ್‌ನ ವಿಷಯದಲ್ಲಿ ಉತ್ತರಪ್ರದೇಶ ಸರಕಾರ ಶೀಘ್ರವಾಗಿ ಮತಾಂತರದ ಬಗ್ಗೆ ಸುಗ್ರಿವಾಜ್ಞೆ ಹೊರಡಿಸುವ ಸಾಧ್ಯತೆ ಇದೆ. ‘ಇತರ ರಾಜ್ಯಗಳಲ್ಲಿ ಮತಾಂತರದ ವಿರುದ್ಧ ರೂಪಿಸಲಾಗಿರುವ ಕಾನೂನುಗಳು ಹಾಗೂ ಅಧಿನಿಯಮಗಳ ಬಗ್ಗೆ ಅಭ್ಯಾಸ ಮಾಡಲಾಗುತ್ತಿದೆ. ನಂತರ ಉತ್ತರಪ್ರದೇಶ ಸರಕಾರ ಇದರ ಬಗ್ಗೆ ತನ್ನ ಕಾನೂನುಗಳನ್ನು ರೂಪಿಸಲಿದೆ’, ಎಂದು ರಾಜ್ಯದ ಹಿರಿಯ ಅಧಿಕಾರಿಗಳು ಹೇಳಿದ್ದಾರೆ.

ಮಡಿಕೇರಿಯಲ್ಲಿ ಅಶ್ಲೀಲ ಸಂದೇಶವನ್ನು ಕಳುಹಿಸಿದ ಮಹಮ್ಮದ ಮುನಾಸಿರನನ್ನು ಥಳಿಸಿದ ಹಿಂದೂ ಮಹಿಳೆ ಹಾಗೂ ಆಕೆಯ ಸಂಬಂಧಿಕರು

ಇಲ್ಲಿಯ ಮಡಿಕೇರಿಯಲ್ಲಿನ ಹಿಂದೂ ಮಹಿಳೆಗೆ ಸಾಮಾಜಿಕ ಮಾಧ್ಯಮಗಳಲ್ಲಿ ಅಶ್ಲೀಲ ಸಂದೇಶವನ್ನು ಕಳುಹಿಸಿದ ಮಹಮ್ಮದ ಮುನಾಸಿರ್‌ನನ್ನು ಆ ಮಹಿಳೆ ಹಾಗೂ ಆಕೆಯ ಸಂಬಂಧಿಕರು ಥಳಿಸಿದರು. ಪೊಲೀಸರು ಮಹಮ್ಮದ ಮುನಾಸಿರನನ್ನು ಬಂಧಿಸಿದ್ದಾರೆ. ಅದೇರೀತಿ ಮಹಮ್ಮದ ಮುನಾಸಿರಗೆ ಥಳಿಸಿದ ಪ್ರಕರಣದಲ್ಲಿ ಮಹಿಳೆ ಹಾಗೂ ಆಕೆಯ ೪ ಸಂಬಂಧಿಕರನ್ನು ಸಹ ಬಂಧಿಸಿದ್ದಾರೆ.

ವಿಜಯವಾಡ(ಆಂಧ್ರಪ್ರದೇಶ)ದ ಶ್ರೀ ಕನಕದುರ್ಗಾ ದೇವಸ್ಥಾನದಲ್ಲಿ ಬೆಳ್ಳಿಯ ೩ ಸಿಂಹಗಳ ಮೂರ್ತಿಗಳ ಕಳ್ಳತನ

ಇಲ್ಲಿಯ ಶ್ರೀ ಕನಕದುರ್ಗಾ ದೇವಸ್ಥಾನ ಪ್ರಾಂಗಣದಲ್ಲಿಯ ‘ಅಮ್ಮಾವರಿ ರಥಮ್’ನ (‘ಪವಿತ್ರ ರಥ’ದ) ೪ ಮೂಲೆಗಳಲ್ಲಿರುವ ಸಿಂಹಗಳ ಬೆಳ್ಳಿಯ ಮೂರ್ತಿಗಳ ಪೈಕಿ ೩ ಮೂಲೆಯ ಸಿಂಹದ ಮೂರ್ತಿಗಳ ಕಳ್ಳತನವಾಗಿದೆ. ಪ್ರತಿಯೊಂದು ಸಿಂಹವನ್ನು ೩ ಕೆಜಿಯಷ್ಟು ಬೆಳ್ಳಿಯಿಂದ ಮಾಡಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಪಕ್ಷವಾಗಿರುವ ಟಿಡಿಪಿಯು ಸಿಬಿಐ ತನಿಖೆಯನ್ನು ಆಗ್ರಹಿಸಿದೆ.

‘ಬಾಬರಿ ಮಸೀದಿಯನ್ನು ಪುನಃ ಕಟ್ಟುತ್ತೇವೆ !’ (ಯಂತೆ)

ಸಿಎಎ ಕಾಯ್ದೆಯ ವಿರುದ್ಧ ನಡೆದ ಆಂದೋಲನದಲ್ಲಿನ ಹಿಂಸಾಚಾರದ ಪ್ರಕರಣದಲ್ಲಿ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ ಆರೋಪಿ ಶರಜೀಲ್ ಉಸ್ಮಾನೀಯು ‘ಬಾಬರಿ ಮಸೀದಿ ಪುನಃ ಕಟ್ಟುವೆವು’, ಎಂಬ ಪ್ರಚೋದನಕಾರಿ ಟ್ವೀಟ್ ಮಾಡಿದ್ದಾನೆ.

‘ಡೆಹರಾಡುನ್ ಹಾಗೂ ನೈನಿತಾಲ್ ಕೂಡಾ ನಮ್ಮದು (ಅಂತೆ) !

ನೇಪಾಳದಲ್ಲಿಯ ಆಡಳಿತಾರೂಢ ನೇಪಾಳ ಕಮ್ಯುನಿಸ್ಟ್ ಪಕ್ಷದಿಂದ ‘ಯುನಿಫೈಡ್ ನೇಪಾಳ ನ್ಯಾಶನಲ್ ಫ್ರಂಟ್’ ಈ ಸಂಘಟನೆಯೊಂದಿಗೆ ‘ಗ್ರೇಟರ್ ನೇಪಾಳ’ ಹೆಸರಿನ ಒಂದು ಅಭಿಯಾನವನ್ನು ಹಮ್ಮಿಕೊಳ್ಳಲಾಗುತ್ತಿದ್ದು ಅದರಲ್ಲಿ ಭಾರತದ ಈ ಮೇಲಿನ ಭಾಗಗಳೊಂದಿಗೆ ಹಿಮಾಚಲ ಪ್ರದೇಶ, ಉತ್ತರ ಪ್ರದೇಶ, ಬಿಹಾರ ಹಾಗೂ ಸಿಕ್ಕಿಮ್ ಈ ರಾಜ್ಯಗಳ ಅನೇಕ ಭಾಗ ತಮ್ಮದೆಂದು ಹೇಳಿಕೊಂಡಿದೆ.

ತಮಿಳುನಾಡಿನಲ್ಲಿ ಭಾಜಪದ ಯುವ ಶಾಖೆಯ ನಾಯಕನ ಹತ್ಯೆ

ರಂಗನಾಥನ್ ಇವರ ಮನೆಯಲ್ಲಿ ಮಗನ ಹುಟ್ಟುಹಬ್ಬವನ್ನು ಆಚರಿಸುತ್ತಿರುವಾಗ ಕೆಲವರು ಮನೆಯೊಳಗೆ ನುಗ್ಗಿದರು ಹಾಗೂ ಅವರೊಂದಿಗೆ ಜಗಳವಾಡಲಾರಂಭಿಸಿದರು. ಈ ಸಮಯದಲ್ಲಿ ರಂಗನಾಥನ್ ಅಲ್ಲಿಂದ ಓಡಿ ಹೊರಗೆ ಬಂದಾಗ ಹಂತಕರು ಅವರನ್ನು ಹಿಂಬಾಲಿಸಿ ಅವರ ಮೇಲೆ ಕೊಡಲಿಯಿಂದ ಹಾಗೂ ಮಾರಣಾಂತಿಕ ಶಸ್ತ್ರಗಳಿಂದ ದಾಳಿ ಮಾಡಿ ಅವರ ಹತ್ಯೆ ಮಾಡಿ ಪರಾರಿಯಾದರು.