‘ಬಾಬರಿ ಮಸೀದಿಯನ್ನು ಪುನಃ ಕಟ್ಟುತ್ತೇವೆ !’ (ಯಂತೆ)

ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ ಆರೋಪಿ ಶರಜೀಲ ಉಸ್ಮಾನಿಯಿಂದ ಪುನಃ ಪ್ರಚೋದನಕಾರಿ ಹೇಳಿಕೆ

ಈ ಬಗ್ಗೆ ಪ್ರಗತಿ(ಅಧೋಗತಿ)ಪರ, ಎಡಪಂಥಿ, ಸಾಮ್ಯವಾದಿಗಳು ಎಂದೂ ಮಾತನಾಡುವುದಿಲ್ಲ, ಎಂಬುದನ್ನು ಗಮನದಲ್ಲಿಡಿ !

ನವ ದೆಹಲಿ – ಸಿಎಎ ಕಾಯ್ದೆಯ ವಿರುದ್ಧ ನಡೆದ ಆಂದೋಲನದಲ್ಲಿನ ಹಿಂಸಾಚಾರದ ಪ್ರಕರಣದಲ್ಲಿ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ ಆರೋಪಿ ಶರಜೀಲ್ ಉಸ್ಮಾನೀಯು ‘ಬಾಬರಿ ಮಸೀದಿ ಪುನಃ ಕಟ್ಟುವೆವು’, ಎಂಬ ಪ್ರಚೋದನಕಾರಿ ಟ್ವೀಟ್ ಮಾಡಿದ್ದಾನೆ.

ಆತ ಮತ್ತೊಮ್ಮೆ ಜನರನ್ನು ಪ್ರಚೋದಿಸಲು ಪ್ರಯತ್ನಿಸಿದ್ದಾನೆ. ಆತ, ‘ಈ ಹೋರಾಟದಲ್ಲಿ ನೀವೂ ಪಾಲ್ಗೊಳ್ಳಿ. ಈ ಅನ್ಯಾಯ ಕೂಡಲೇ ನಿಲ್ಲುವುದಿಲ್ಲ. ಯೋಗ್ಯ ಸಮಾಜದ ಅಸ್ತಿತ್ವಕ್ಕಾಗಿ ಹಿಂದುತ್ವವನ್ನು ಸೋಲಿಸುವುದು ಅಗತ್ಯವಿದೆ’ ಎಂದು ಹೇಳಿದ್ದಾನೆ.