ಪುನಃ ಭಾರತ ವಿರುದ್ಧ ವಿಷಕಕ್ಕಿದ ನೇಪಾಳ
ಚೀನಾದ ಕೈಗೊಂಬೆಯಾಗಿರುವ ನೇಪಾಳದ ಆಡಳಿತಾರೂಢ ನೇಪಾಳ ಕಮ್ಯುನಿಸ್ಟ್ ಪಕ್ಷಕ್ಕೆ ತಕ್ಕ ಸಮಯದಲ್ಲಿ ಪಾಠ ಕಲಿಸದಿದ್ದಲ್ಲಿ, ಅದು ಭಾರತದ ನೆರೆಯಲ್ಲಿ ಮತ್ತೊಂದು ದೊಡ್ಡ ತಲೆನೋವಾಗಿ ಪರಿಣಮಿಸಬಹುದು, ಎಂಬುದನ್ನು ಸರಕಾರವು ಗಮನದಲ್ಲಿಟ್ಟು ಈ ಪಕ್ಷವನ್ನು ನಾಶ ಮಾಡಲು ಶೀಘ್ರವಾಗಿ ಕ್ರಮ ಕೈಗೊಳ್ಳಬೇಕು !
ಕಾಠಮಾಂಡು – ನೇಪಾಳವು ಭಾರತದ ಉತ್ತಾರಾಖಂಡ ರಾಜ್ಯದ ಡೆಹರಾಡುನ್ ಹಾಗೂ ನೈನಿತಾಲ್ ಇದೂ ಸಹ ತಮ್ಮ ಪ್ರದೇಶವೆಂದು ಹೇಳಿಕೊಂಡಿದೆ. ನೇಪಾಳದಲ್ಲಿಯ ಆಡಳಿತಾರೂಢ ನೇಪಾಳ ಕಮ್ಯುನಿಸ್ಟ್ ಪಕ್ಷದಿಂದ ‘ಯುನಿಫೈಡ್ ನೇಪಾಳ ನ್ಯಾಶನಲ್ ಫ್ರಂಟ್’ ಈ ಸಂಘಟನೆಯೊಂದಿಗೆ ‘ಗ್ರೇಟರ್ ನೇಪಾಳ’ ಹೆಸರಿನ ಒಂದು ಅಭಿಯಾನವನ್ನು ಹಮ್ಮಿಕೊಳ್ಳಲಾಗುತ್ತಿದ್ದು ಅದರಲ್ಲಿ ಭಾರತದ ಈ ಮೇಲಿನ ಭಾಗಗಳೊಂದಿಗೆ ಹಿಮಾಚಲ ಪ್ರದೇಶ, ಉತ್ತರ ಪ್ರದೇಶ, ಬಿಹಾರ ಹಾಗೂ ಸಿಕ್ಕಿಮ್ ಈ ರಾಜ್ಯಗಳ ಅನೇಕ ಭಾಗ ತಮ್ಮದೆಂದು ಹೇಳಿಕೊಂಡಿದೆ.
Nepal claims Indian cities Dehradun, Nainital under its 'Greater Nepal' campaign: Reports https://t.co/WpryxhgnbL
— OpIndia.com (@OpIndia_com) September 17, 2020
‘ಗ್ರೇಟರ್ ನೇಪಾಳ’ ಈ ಆಧಾರರಹಿತ ಹಾಗೂ ದಾರಿತಪ್ಪಿಸುವ ಸಂಕಲ್ಪನೆಗೆ ಪುಷ್ಟಿ ನೀಡಲು ನೇಪಾಳದಿಂದ ೧೮೧೬ ರಲ್ಲಿ ನಡೆದ ‘ಸುಗೌಲಿ ಒಪ್ಪಂದ’ದ ಮೊದಲು ನೇಪಾಳದ ನಕ್ಷೆಯನ್ನು ತೋರಿಸಲಾಗುತ್ತಿದೆ. ನೇಪಾಳದ ಸರಕಾರ ಈ ಮೂಲಕ ನೇಪಾಳದ ನಾಗರಿಕರನ್ನು ಗೊಂದಲಕ್ಕೀಡು ಮಾಡಲು ಪ್ರಯತ್ನಿಸುತ್ತಿದೆ. ಈ ಅಭಿಯಾನಕ್ಕೆ ಪಾಕಿಸ್ತಾನವನ್ನು ಸತತವಾಗಿ ಸೊಪ್ಪು ಹಾಕುತ್ತಿದ್ದು ‘ಗ್ರೇಟರ್ ನೇಪಾಳ ಯೂಟ್ಯೂಬ್ ಚಾನೆಲ್’ ನಲ್ಲಿಯೂ ಪಾಕಿಸ್ತಾನಿ ಯುವಕರು ಭಾರತದ ವಿರುದ್ಧ ವಿಷಕಾರುತ್ತಿದ್ದಾರೆ.