೧. ಭಾಗ್ಯನಗರದ ಮತಾಂಧಪ್ರೇಮಿ ಪೊಲೀಸರ ಕಾನೂನುದ್ರೋಹವನ್ನು ತಿಳಿಯಿರಿ !
ತೆಲಂಗಾಣ ಉಚ್ಚ ನ್ಯಾಯಾಲಯವು ಕೊರೋನಾ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಮೊಹರಂ ದಿನದಂದು ಹಳೆಭಾಗ್ಯನಗರದಲ್ಲಿ ಮೆರವಣಿಗೆಯನ್ನು ನಡೆಸಲು ಅನುಮತಿ ನೀಡಿರಲಿಲ್ಲ. ಈ ಆದೇಶವನ್ನು ಉಲ್ಲಂಘಿಸಿದರೆ ಕಠಿಣ ಕ್ರಮ ಕೈಗೊಳ್ಳುವಂತೆ ನ್ಯಾಯಾಲಯ ಪೊಲೀಸರಿಗೆ ಸೂಚಿಸಿತ್ತು. ಆದರೂ ಪೊಲೀಸ್ ಆಯುಕ್ತರು ಮೆರವಣಿಗೆಗೆ ಅನುಮತಿ ನೀಡಿ ಭದ್ರತೆ ಪೂರೈಸಿದ್ದರು.
೨. ಈ ಆಂತರಿಕ ಅಪಾಯವನ್ನು ಗುರುತಿಸಿರಿ !
ನೀವು ಐ.ಎ.ಎಸ್. ಮತ್ತು ಐ.ಪಿ.ಎಸ್. ಅಧಿಕಾರಿಯಾಗಲು ಬಯಸಿದರೆ, ನೀವು ಇಸ್ಲಾಂ ಧರ್ಮದ ಪರವಾಗಿ ನಿಲ್ಲಬೇಕು, ಎಂಬ ಸಲಹೆಯನ್ನು ಭಯೋತ್ಪಾದಕರಿಗೆ ಆದರ್ಶನಾಗಿರುವ ಡಾ. ಝಾಕೀರ ನಾಯಕ್ ಇವನು ಮುಸಲ್ಮಾನರಿಗೆ ವೀಡಿಯೋ ಮೂಲಕ ಸಲಹೆ ನೀಡಿದ್ದಾನೆ.
೩. ಜಾತ್ಯತೀತವಾದಿಗಳು ಈಗೇಕೆ ಮೌನವಾಗಿದ್ದಾರೆ ?
ಕ್ರೈಸ್ತ ಮಿಷನರಿಗಳು ಕೆಲವು ತಿಂಗಳುಗಳ ಹಿಂದೆ ತಮಿಳುನಾಡಿನ ಪ್ರಾಚೀನ ಶ್ರೀ ಉಚಿಷ್ಠ ವಿನಾಯಗರ (ವಿನಾಯಕ) ದೇವಾಲಯದ ಹತ್ತಿರ ರಾಜಗೋಪುರಂ ಬಳಿ ಸ್ಮಶಾನವನ್ನು ಅಕ್ರಮವಾಗಿ ನಿರ್ಮಿಸಿದ್ದರು. ಈಗ ಅವರು ಅಲ್ಲಿ ಶವಗಳನ್ನು ಹೂಳಲು ಪ್ರಾರಂಭಿಸಿದ್ದಾರೆ.
೪. ಹಿಂದೂಗಳ ಮೇಲೆ ಹಲ್ಲೆ ಮಾಡಲು ಮತಾಂಧರ ಹೊಸ ವಿಧಾನವನ್ನು ತಿಳಿಯಿರಿ !
ಇಸ್ಲಾಂ ಧರ್ಮವನ್ನು ಅವಮಾನಿಸಲಾಗಿದೆ ಎಂದು ಆರೋಪಿಸಿ ಆಗಸ್ಟ್ ೩೧ ರಂದು ಬಾಂಗ್ಲಾದೇಶದ ಖಾನುಬರಿ ಗ್ರಾಮದ ಸಾವಿರಾರು ಮತಾಂಧರು ಹಿಂದೂ ವಿದ್ಯಾರ್ಥಿ ಶ್ರವಣ ಹಲದಾರ ಇವನ ಮನೆಯೊಳಗೆ ನುಗ್ಗಿ ಲಕ್ಷಾಂತರ ರೂಪಾಯಿ ಮತ್ತು ಆಭರಣಗಳನ್ನು ಲೂಟಿ ಮಾಡಿದ್ದಾರೆ.
೫. ಹಿಂದುತ್ವನಿಷ್ಠ ವಾಹಿನಿಗಳಲ್ಲಿನ ಮತಾಂಧರ ದಾಳಿಯನ್ನು ತಿಳಿಯಿರಿ !
ಮತಾಂಧರು ದೆಹಲಿ ಹತ್ತಿರದ ಉತ್ತರ ಪ್ರದೇಶದ ನೋಯಡಾ ನಗರದಲ್ಲಿನ ‘ಸುದರ್ಶನ ನ್ಯೂಸ್’ನ ಸ್ಟುಡಿಯೋದಲ್ಲಿ ನುಗ್ಗಲು ಪ್ರಯತ್ನಿಸಿದರು. ಭದ್ರತಾ ಸಿಬ್ಬಂದಿಯವರು ಅವರನ್ನು ತಡೆದಾಗ ಅವರ ಮೇಲೆ ಹಲ್ಲೆ ನಡೆಸಿದರು.
೬. ಹಿಂದುತ್ವನಿಷ್ಠರನ್ನು ರಕ್ಷಿಸಿ !
ಕೇರಳದಲ್ಲಿ ‘ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ’ದ ಕಾರ್ಯಕರ್ತರ ಹತ್ಯೆಯ ನಂತರ ಕೇರಳ ರಾಜ್ಯ ಬಿಜೆಪಿ ಅಧ್ಯಕ್ಷ ಕೆ. ಸುರೇಂದ್ರನ್ ಮತ್ತು ‘ಹಿಂದೂ ಹೆಲ್ಪ್‌ಲೈನ್’ನ ನ್ಯಾಯವಾದಿ ಪ್ರದೀಶ ವಿಶ್ವನಾಥ ಇವರು ಎಸ್.ಡಿ.ಪಿ.ಐ., ಪಿ.ಎಫ್.ಐ. ಮತ್ತು ಇಂಡಿಯನ್ ಯೂನಿಯನ್ ಆಫ್ ಮುಸ್ಲಿಂ ಲೀಗ್‌ನ ಗುರಿಯಲ್ಲಿದ್ದಾರೆ.
೭. ಫೇಸ್‌ಬುಕ್‌ನ ಹಿಂದೂದ್ವೇಷವನ್ನು ತಿಳಿಯಿರಿ !
ಸನಾತನ ಸಂಸ್ಥೆಯ ೫ ಅಧಿಕೃತ ‘ಫೇಸ್‌ಬುಕ್ ಪೇಜಸ್’ (ಫೇಸಬುಕ್ ಪುಟಗಳು) ಮತ್ತು ೨ ‘ಇನ್‌ಸ್ಟಾಗ್ರಾಮ್’ ಖಾತೆಗಳನ್ನು ಫೇಸ್‌ಬುಕ್ ನಿಷೇಧಿಸಿದೆ. ಅಲ್ಲದೇ, ಸನಾತನದ ಕೆಲವು ಸಾಧಕರ ವೈಯಕ್ತಿಕ ಫೇಸ್‌ಬುಕ್ ಖಾತೆಗಳನ್ನು ಸಹ ನಿಷೇಧಿಸಿದೆ.