ವಿಜಯವಾಡ(ಆಂಧ್ರಪ್ರದೇಶ)ದ ಶ್ರೀ ಕನಕದುರ್ಗಾ ದೇವಸ್ಥಾನದಲ್ಲಿ ಬೆಳ್ಳಿಯ ೩ ಸಿಂಹಗಳ ಮೂರ್ತಿಗಳ ಕಳ್ಳತನ

ಸಿಬಿಐ ತನಿಖೆಗಾಗಿ ವಿಪಕ್ಷದಿಂದ ಆಗ್ರಹ

  • ‘ಆಂಧ್ರಪ್ರದೇಶದಲ್ಲಿ ಕ್ರೈಸ್ತಪರ ವೈ.ಎಸ್.ಆರ್. ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿರುವುದರಿಂದಲೇ ಇಂತಹ ಘಟನೆಗಳಾಗುತ್ತವೆ’, ಎಂದು ಯಾರಿಗಾದರೂ ಅನಿಸಿದರೆ ಅದರಲ್ಲಿ ತಪ್ಪೇನಿದೆ ? ಆಂಧ್ರಪ್ರದೇಶದ ಮುಖ್ಯಮಂತ್ರಿ ಜಗನಮೋಹನ ರೆಡ್ಡಿ ಇವರು ಸ್ವತಃ ಕ್ರೈಸ್ತರಾಗಿರುವುದರಿಂದ ಈ ಘಟನೆಯ ಬಗ್ಗೆ ಯಾರಿಗಾದರೂ ಶಿಕ್ಷೆ ನೀಡುವುದಿರಲಿ; ಈ ಪ್ರಕರಣದ ಬಗ್ಗೆ ನಿಷ್ಪಕ್ಷಪಾತ ತನಿಖೆಯೂ ಆಗಬಹುದೇ ?, ಎಂದು ಹಿಂದೂಗಳ ಮನಸ್ಸಿನಲ್ಲಿ ಸಂದೇಹವಿದೆ !
  • ಮಸೀದಿ ಅಥವಾ ಚರ್ಚ್‌ಗಳಲ್ಲಿ ಕಳ್ಳತನವಾಗಿರುವುದನ್ನು ಎಂದಾದರೂ ಕೇಳಿದ್ದೀರಾ ? ಹಿಂದೂ ಬಹುಸಂಖ್ಯಾತ ಭಾರತದಲ್ಲಿ ಮಾತ್ರ ಹಿಂದೂಗಳ ದೇವಸ್ಥಾನಗಳಲ್ಲಿ ಕಳ್ಳತನವಾಗುತ್ತದೆ ಹಾಗೂ ಯಾವುದೇ ಸರಕಾರ ಇದರ ಬಗ್ಗೆ ಗಾಂಭೀರ್ಯದಿಂದ ನೋಡುವುದಿಲ್ಲ, ಎಂಬುದನ್ನು ಗಮನದಲ್ಲಿಟ್ಟುಕೊಳ್ಳಿ ಹಾಗೂ ಈ ಸ್ಥಿತಿಯನ್ನು ಬದಲಾಯಿಸಲು ಹಿಂದೂ ರಾಷ್ಟ್ರದ ಸ್ಥಾಪನೆಯನ್ನು ಮಾಡಿರಿ !

ವಿಜಯವಾಡಾ (ಆಂಧ್ರಪ್ರದೇಶ) – ಇಲ್ಲಿಯ ಶ್ರೀ ಕನಕದುರ್ಗಾ ದೇವಸ್ಥಾನ ಪ್ರಾಂಗಣದಲ್ಲಿಯ ‘ಅಮ್ಮಾವರಿ ರಥಮ್’ನ (‘ಪವಿತ್ರ ರಥ’ದ) ೪ ಮೂಲೆಗಳಲ್ಲಿರುವ ಸಿಂಹಗಳ ಬೆಳ್ಳಿಯ ಮೂರ್ತಿಗಳ ಪೈಕಿ ೩ ಮೂಲೆಯ ಸಿಂಹದ ಮೂರ್ತಿಗಳ ಕಳ್ಳತನವಾಗಿದೆ. ಪ್ರತಿಯೊಂದು ಸಿಂಹವನ್ನು ೩ ಕೆಜಿಯಷ್ಟು ಬೆಳ್ಳಿಯಿಂದ ಮಾಡಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಪಕ್ಷವಾಗಿರುವ ಟಿಡಿಪಿಯು ಸಿಬಿಐ ತನಿಖೆಯನ್ನು ಆಗ್ರಹಿಸಿದೆ.

ಟಿಡಿಪಿಯ ಶಾಸಕ ಬುದ್ಧಾ ವೆಂಕನ್ನಾರವರು, ‘ಈ ಘಟನೆಯಿಂದಾಗಿ ಪೂರ್ಣ ಹಿಂದೂ ಸಮಾಜ ದುಃಖಿಯಾಗಿದ್ದು ಅವರ ಧಾರ್ಮಿಕ ಭಾನೆಗಳಿಗೆ ನೋವಾಗಿದೆ. ಈ ಪ್ರಕರಣದಲ್ಲಿ ದೇವಸ್ಥಾನದ ಕಾರ್ಯಕಾರಣಿ ಅಧಿಕಾರಿಗಳು ಯೋಗ್ಯವಾದ ಮಾಹಿತಿಯನ್ನು ನೀಡಿಲ್ಲ, ಅದೇರೀತಿ ಈ ಘಟನೆಯು ಗಮನಕ್ಕೆ ಬಂದನಂತರ ಪೊಲೀಸರಿಗೂ ಕೂಡಲೇ ತಿಳಿಸಲಿಲ್ಲ. ಕಾರ್ಯಕಾರಣಿ ಅಧಿಕಾರಿಗಳು ಆರೋಪಿಗಳನ್ನು ಕಾಪಾಡಲು ಪ್ರಯತ್ನಿಸುತ್ತಿದ್ದಾರೆ. ಆದ್ದರಿಂದ ಸರಕಾರವು ಈ ಪ್ರಕರಣದ ಬಗ್ಗೆ ಸ್ಪಷ್ಟೀಕರಣ ಕೊಡಬೇಕು ಹಾಗೂ ಆರೋಪಿಗಳನ್ನು ಕೂಡಲೇ ಬಂಧಿಸಬೇಕು ಎಂದು ಹೇಳಿದರು. ವೈ.ಎಸ್.ಆರ್. ಕಾಂಗ್ರೆಸ್‌ನ ನಾಯಕರು ದೇವಸ್ಥಾನದ ಗರ್ಭಗೃಹದಲ್ಲಿರುವ ಮೂರ್ತಿಯನ್ನು ದರೋಡೆ ಮಾಡಲು ಪ್ರಯತ್ನಿಸುತ್ತಿದೆ. ಇವೆಲ್ಲ ಪ್ರಕರಣಗಳ ಬಗ್ಗೆ ರಾಜ್ಯದ ಮುಖ್ಯಮಂತ್ರಿ ಜಗನಮೋಹನ ರೆಡ್ಡಿಯವರು ಮೌನವಹಿಸಿರುವುದು ಆಶ್ವರ್ಯಕಾರಿಯಾಗಿದೆ. ಕೆಲವು ಜನರು ದೇವಸ್ಥಾನಕ್ಕೆ ದಾನದ ರೂಪದಲ್ಲಿ ಸಿಕ್ಕಿದ ಭೂಮಿಯನ್ನು ಕಬಳಿಸಲು ಪ್ರಯತ್ನಿಸುತ್ತಿದ್ದಾರೆ. ರಾಜ್ಯದಲ್ಲಿ ದೇವಸ್ಥಾನಗಳ ಮೇಲೆ ಆಕ್ರಮಣಗಳು ಆಗುತ್ತಿವೆ. ದೇವಸ್ಥಾನದ ಅಧಿಕಾರಿ ಹಾಗೂ ಸಚಿವ ವೆಲ್ಲಮಪಲ್ಲಿ ಶ್ರೀನಿವಾಸನ ಇವರಿಗೆ ಯಾರು ಕಳ್ಳರಿದ್ದಾರೆ, ಎಂಬುದು ಗೊತ್ತಿದ್ದು ಈ ಬಗ್ಗೆ ಮೌನ ವಹಿಸಿರುವುದನ್ನು ಮುರಿಯಬೇಕು” ಎಂದು ಹೇಳಿದರು.

ಶ್ರೀ ಕನಕದುರ್ಗಾ ದೇವಸ್ಥಾನದ ಮಹತ್ವ

ದಕ್ಷಿಣ ಭಾರತದ ಮುಖ್ಯ ದೇವಸ್ಥಾನಗಳಲ್ಲಿ ಶ್ರೀ ಕನಕದುರ್ಗಾ ದೇವಸ್ಥಾನವೂ ಒಂದಾಗಿದೆ. ಅರ್ಜುನನು ಭಗವಾನ ಶಿವನ ಕಠೋರ ತಪಸ್ಸನ್ನು ಮಾಡಿದ ನಂತರ ಭಗವಾನ ಶಿವನಿಂದ ಅರ್ಜುನನಿಗೆ ಪಾಶುಪತಾಸ್ತ್ರ ಇದೇ ದೇವಸ್ಥಾನದಲ್ಲಿ ಪ್ರಾಪ್ತವಾಗಿತ್ತು. ಶ್ರೀ ಕನಕದುರ್ಗಾ ದೇವಸ್ಥಾನವನ್ನು ಅರ್ಜುನನು ಕಟ್ಟಿದ್ದಾನೆ ಎಂದು ಹೇಳಲಾಗುತ್ತದೆ.