‘ಲವ್ ಜಿಹಾದ್’ನ ಘಟನೆಗಳನ್ನು ತಡೆಗಟ್ಟಲು ಮತಾಂತರ ವಿರೋಧಿ ಕಾಯ್ದೆಯನ್ನು ರೂಪಿಸಲಿರುವ ಉತ್ತರಪ್ರದೇಶ ಸರಕಾರ

  • ವಾಸ್ತವದಲ್ಲಿ ಕೇಂದ್ರ ಸರಕಾರವೇ ಈ ರೀತಿಯ ಕಾನೂನನ್ನು ರೂಪಿಸುವುದು ಅಗತ್ಯವಿದೆ. ಇದರಿಂದ ಕ್ರೈಸ್ತ ಮಿಶನರಿ ಹಾಗೂ ಮತಾಂಧರಿಂದ ಆಗುತ್ತಿರುವ ಹಿಂದೂಗಳ ಮತಾಂತರವನ್ನು ತಡೆಗಟ್ಟಬಹುದು !
  • ‘ಲವ್ ಜಿಹಾದ್’ನ ಘಟನೆಗಳನ್ನು ತಡೆಗಟ್ಟಲು ಸರಕಾರಿ ಮಟ್ಟದಲ್ಲಿ ಪ್ರಯತ್ನ ಮಾಡಲೇ ಬೇಕು. ಸರಕಾರ ಇದರ ಜೊತೆಗೆ ಹಿಂದೂ ಯುವತಿಯರಿಗೆ ಧರ್ಮಶಿಕ್ಷಣ ನೀಡುವ ವ್ಯವಸ್ಥೆಯನ್ನು ಮಾಡಬೇಕು, ಇದರಿಂದ ಹಿಂದೂ ಯುವತಿಯರು ಮತಾಂಧರ ಮೋಸದ ಪ್ರೇಮದ ಬಲೆಯಲ್ಲಿ ಸಿಲುಕುವುದಿಲ್ಲ !

ಲಕ್ಷ್ಮಣಪುರಿ(ಉತ್ತರಪ್ರದೇಶ) – ಲವ್ ಜಿಹಾದ್‌ನ ವಿಷಯದಲ್ಲಿ ಉತ್ತರಪ್ರದೇಶ ಸರಕಾರ ಶೀಘ್ರವಾಗಿ ಮತಾಂತರದ ಬಗ್ಗೆ ಸುಗ್ರಿವಾಜ್ಞೆ ಹೊರಡಿಸುವ ಸಾಧ್ಯತೆ ಇದೆ. ‘ಇತರ ರಾಜ್ಯಗಳಲ್ಲಿ ಮತಾಂತರದ ವಿರುದ್ಧ ರೂಪಿಸಲಾಗಿರುವ ಕಾನೂನುಗಳು ಹಾಗೂ ಅಧಿನಿಯಮಗಳ ಬಗ್ಗೆ ಅಭ್ಯಾಸ ಮಾಡಲಾಗುತ್ತಿದೆ. ನಂತರ ಉತ್ತರಪ್ರದೇಶ ಸರಕಾರ ಇದರ ಬಗ್ಗೆ ತನ್ನ ಕಾನೂನುಗಳನ್ನು ರೂಪಿಸಲಿದೆ’, ಎಂದು ರಾಜ್ಯದ ಹಿರಿಯ ಅಧಿಕಾರಿಗಳು ಹೇಳಿದ್ದಾರೆ. ಸದ್ಯ ದೇಶದ ೮ ರಾಜ್ಯಗಳಲ್ಲಿ ಮತಾಂತರನಿಷೇಧ ಕಾನೂನುಗಳು ಇವೆ. ಅದರಲ್ಲಿ ಉತ್ತರಾಖಂಡ, ಹಿಮಾಚಲ ಪ್ರದೇಶ, ಅರುಣಾಚಲ ಪ್ರದೇಶ, ಛತ್ತೀಸ್‌ಗಡ, ಝಾರಖಂಡ, ಒಡಿಶಾ, ಮಧ್ಯಪ್ರದೇಶ ಹಾಗೂ ಗುಜರಾತ್ ರಾಜ್ಯಗಳ ಸಮಾವೇಶವಿದೆ.

ವಿಶೇಷ ತನಿಖಾ ದಳವು ಉತ್ತರಪ್ರದೇಶದ ಕಾನಪುರನಲ್ಲಿ ಲವ್ ಜಿಹಾದ್‌ನ ೧೨ ಕ್ಕೂ ಹೆಚ್ಚು ಘಟನೆಗಳನ್ನು ಕಂಡು ಹಿಡಿದಿದ್ದಾರೆ. ಈ ಪ್ರಕರಣಗಳ ಬಗ್ಗೆ ರಾಜ್ಯದಲ್ಲಿ ಪ್ರವಾಸ ಮಾಡಿ ಹೋಗಿರುವ ಸಂಘಚಾಲಕರಾದ ಡಾ. ಮೋಹನ ಭಾಗವತ್ ಇವರೂ ಕಳವಳ ವ್ಯಕ್ತಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥರ ಸರಕಾರವು ಇದನ್ನು ತಡೆಗಟ್ಟಲು ಕಠಿಣ ಕ್ರಮಗಳನ್ನು ಕೈಗೆತ್ತಿಕೊಳ್ಳಲು ನಿರ್ಧರಿಸಿದೆ.