ಸಾಧಕರಿಗೆ ಸೂಚನೆ ಹಾಗೆಯೇ ವಾಚಕರು, ಹಿತಚಿಂತಕರು ಮತ್ತು ಧರ್ಮಪ್ರೇಮಿಗಳಲ್ಲಿ ವಿನಂತಿ !

ಆಪತ್ಕಾಲದಲ್ಲಿ ಪೆಟ್ರೋಲ್, ಡೀಸೆಲ್ ಮುಂತಾದ ಇಂಧನಗಳ ಕೊರತೆಯಾಗಬಹುದು. ಇನ್ನೂ ಮುಂದೆ ಈ ಇಂಧನಗಳೂ ಸಿಗಲಾರದು. ಆಗ ಇಂಧನದಿಂದ ನಡೆಯುವ ದ್ವಿಚಕ್ರ ಮತ್ತು ಚತುಷ್ಚಕ್ರ ವಾಹನಗಳು ನಿರುಪಯುಕ್ತವಾಗುವವು. ಇಂತಹ ಸಮಯದಲ್ಲಿ ಪ್ರಯಾಣ ಮಾಡುವುದು, ರೋಗಿಗಳನ್ನು ವೈದ್ಯರ ಬಳಿ ಕರೆದುಕೊಂಡು ಹೋಗುವುದು, ಸಾಮಾನುಗಳನ್ನು ತರುವುದು ಮುಂತಾದವುಗಳಿಗೆ ಸಾರಿಗೆಯ ಪಾರಂಪಾರಿಕ ಸಾಧನಗಳನ್ನು (ಉದಾ. ಎತ್ತಿನಗಾಡಿ, ಕುದುರೆಗಾಡಿ ಇವುಗಳನ್ನು) ಉಪಯೋಗಿಸಬೇಕಾಗುವುದು.

ಸರ್ವೋಚ್ಚ ನ್ಯಾಯಾಲಯದಲ್ಲಿ ‘ಸುದರ್ಶನ್ ಟಿವಿ’ ಚಾನೆಲ್‌ನ ಪ್ರತಿವಾದ

‘ಸುದರ್ಶನ್ ಟಿವಿ’ಯಲ್ಲಿನ ‘ಯು.ಪಿ.ಎಸ್.ಸಿ. ಜಿಹಾದ್’ ಈ ಕಾರ್ಯಕ್ರಮದ ವಿರುದ್ಧ ಸರ್ವೋಚ್ಚ ನ್ಯಾಯಾಲಯದಲ್ಲಿ ಆಲಿಕೆ ನಡೆಸುತ್ತಿದೆ. ಆ ಸಮಯದಲ್ಲಿ ವಾಹಿನಿಯು ನ್ಯಾಯಾಲಯದಲ್ಲಿ ಸಲ್ಲಿಸಿದ ಪ್ರತಿಜ್ಞಾಪತ್ರದಲ್ಲಿ, ‘ನಾವು ಪ್ರಸಾರದ ಎಲ್ಲ ನಿಯಮಗಳನ್ನು ಪಾಲಿಸಲು ಬದ್ಧರಾಗಿದ್ದೇವೆ

ಬಂಗಾಲದಲ್ಲಿ ಭಾಜಪದ ಮತ್ತೋರ್ವ ಕಾರ್ಯಕರ್ತನ ಹತ್ಯೆ

ಪಶ್ಚಿಮ ಮೆದಿನಿಪುರ ಜಿಲ್ಲೆಯ ಸಬಂಗ್‌ನ ಮೊಯನಾದಲ್ಲಿ ಭಾಜಪದ ಕಾರ್ಯಕರ್ತ ದೀಪಕ ಮಂಡಲ್ (ವಯಸ್ಸು ೩೨)ನ ಹತ್ಯೆ ಯಾಗಿದೆ. ಈ ಸಂಬಂಧ ತೃಣಮೂಲ ಕಾಂಗ್ರೆಸ್ ಕಾರ್ಯಕರ್ತರ ವಿರುದ್ಧ ದೂರನ್ನು ದಾಖಲಿಸಲಾಗಿದೆ ಎಂದು ಸ್ಥಳೀಯ ಭಾಜಪ ಮುಖಂಡ ನಬಾರುನ್ ನಾಯಕ ಮಾಹಿತಿ ನೀಡಿದ್ದಾರೆ.

ದೇಶದಲ್ಲಿ ಪ್ರತಿವರ್ಷ ಒಂದುವರೆ ಲಕ್ಷ ಜನರು ರಸ್ತೆ ಅಪಘಾತದಲ್ಲಿ ಸಾಯುತ್ತಾರೆ !

೨೦೧೯ ರಲ್ಲಿ ದೇಶದಲ್ಲಿ ೪ ಲಕ್ಷ ೪೯ ಸಾವಿರ ರಸ್ತೆ ಅಪಘಾತಗಳು ಆಗಿವೆ. ಅದರಲ್ಲಿ ೩ ಲಕ್ಷ ೧೯ ಸಾವಿರದ ೨೮ ಘಟನೆ ಅಂದರೆ ಶೇ. ೭೧ ರಷ್ಟು ಘಟನೆ ಕೇವಲ ವೇಗವಾಗಿ ವಾಹನವನ್ನು ಓಡಿಸುವುದರಿಂದ ಆಗಿದೆ, ಎಂದು ಕೇಂದ್ರ ರಸ್ತೆ ಸಾರಿಗೆ ಹಾಗೂ ಹೆದ್ದಾರಿಗಳ ರಾಜ್ಯ ಸಚಿವ ವಿ.ಕೆ. ಸಿಂಹ ಇವರು ರಾಜ್ಯಸಭೆಯಲ್ಲಿ ಲಿಖಿತ ಸ್ವರೂಪದಲ್ಲಿ ಮಾಹಿತಿಯನ್ನು ನೀಡಿದ್ದಾರೆ.

‘ನೆಟ್‌ಫ್ಲಿಕ್ಸ್’ನಲ್ಲಿನ ವೆಬ್ ಸಿರಿಸ್‌ನ ಸರಣಿಯಲ್ಲಿ ರವೀಂದ್ರನಾಥ ಟಾಗೋರ್ ಅವರ ಕಥೆಯನ್ನು ತಿರುಚಿ ಅದರಲ್ಲಿ ಹಿಂದೂ ಹುಡುಗಿಯೊಬ್ಬಳನ್ನು ನಮಾಜು ಪಠಣ ಮಾಡುವಂತೆ ತೋರಿಸಲಾಗಿದೆ

‘ನೆಟ್‌ಫ್ಲಿಕ್ಸ್’ನ ‘ಒಟಿಟಿ ಆಪ್’ನಲ್ಲಿ ರವೀಂದ್ರನಾಥ ಟಾಗೋರ್ ಅವರ ಕಥೆ ‘ಕಾಬೂಲಿವಾಲಾ’ ಆಧಾರಿತ ವೆಬ್ ಸಿರಿಸ್ ಪ್ರಸಾರವಾಗುತ್ತಿದೆ. ಇದರ ಒಂದು ದೃಶ್ಯದಲ್ಲಿ ‘ಮಿನಿ’ ಎಂಬ ಹಿಂದೂ ಹುಡುಗಿ ನಮಾಜು ಪಠಣ ಮಾಡುತ್ತಿರುವುದು ಕಂಡುಬರುತ್ತದೆ.

ಪಾಕಿಸ್ತಾನದಲ್ಲಿ ಹೆಣ್ಣು ಮಕ್ಕಳ ಮೇಲಾಗುವ ಅತ್ಯಾಚಾರಗಳಲ್ಲಿ ಶೇ. ೮೨ ರಷ್ಟು ತಂದೆ, ಸಹೋದರ, ಚಿಕ್ಕಪ್ಪ, ಅಜ್ಜ ಇವರಿಂದಲೇ !

ಪಾಕಿಸ್ತಾನದ ಆಡಳಿತಾರೂಡ ಪಕ್ಷ ‘ತಹರಿಕ-ಎ-ಇಂಸಾಫ್’ನ ಕಾರ್ಯಕರ್ತೆ ಶಂದಾನಾ ಗುಲಜರ ಇವರು ಪಾಕಿಸ್ತಾನ ಸರಕಾರದ ಬಳಿ ದೇಶದಲ್ಲಿ ಆಗುತ್ತಿರುವ ಅತ್ಯಾಚಾರಗಳ ಮೂಲವನ್ನು ಹುಡುಕುವಂತೆ ಆಗ್ರಹಿಸಿದ್ದಾರೆ. ಅವರು, ‘ದೇಶದ ಶೇ. ೮೨ ರಷ್ಟು ಅತ್ಯಾಚಾರದ ಘಟನೆಯಲ್ಲಿ ಸಂತ್ರಸ್ತೆಯ ಮನೆಯ ಸದಸ್ಯರೇ ಉದಾ. ತಂದೆ, ಸಹೋದರ, ಅಜ್ಜ ಅಥವಾ ಚಿಕ್ಕಪ್ಪನೇ ಆಕೆಯ ಮೇಲೆ ಅತ್ಯಾಚಾರ ಮಾಡುತ್ತಾರೆ’ ಎಂದು ಹೇಳಿದರು.

ಮಡಗಾವ್ ಸ್ಫೋಟ ಪ್ರಕರಣದ ಆರೋಪಿಗಳು ನಿರಪರಾಧಿ ಎಂಬ ತೀರ್ಪನ್ನು ಎತ್ತಿ ಹಿಡಿದ ಮುಂಬಯಿ ಉಚ್ಚನ್ಯಾಯಾಲಯದ ಗೋವಾ ವಿಭಾಗೀಯ ವಿಭಾಗೀಯಪೀಠ

ಮುಂಬಯಿ ಉಚ್ಚ ನ್ಯಾಯಾಲಯದ ಗೋವಾ ವಿಭಾಗೀಯಪೀಠವು ೨೦೦೯ ರಲ್ಲಿ ದೀಪಾವಳಿ ಸಂಜೆ ನಡೆದ ಸ್ಫೋಟ ಪ್ರಕರಣದಲ್ಲಿ ೬ ಮಂದಿ ಆರೋಪಿಗಳನ್ನು ನಿರಪರಾಧಿಗಳೆಂದು ಖುಲಾಸೆಗೊಳಿಸಿದೆ. ಸಪ್ಟೆಂಬರ ೧೯ ರಂದು ಉಚ್ಚ ನ್ಯಾಯಾಲಯವು ವಿಶೇಷ ನ್ಯಾಯಾಲಯದ ತೀರ್ಪನ್ನು ಎತ್ತಿಹಿಡಿದು ‘ಎನ್.ಐ.ಎ.’ಯ ಅರ್ಜಿಯನ್ನು ತಿರಸ್ಕರಿಸಿತು.

ಬಡ ವಿದ್ಯಾರ್ಥಿಗಳಿಗೆ ‘ಆನ್‌ಲೈನ್’ ಶಿಕ್ಷಣಕ್ಕಾಗಿ ಉಚಿತ ಸಾಮಗ್ರಿಗಳನ್ನು ಒದಗಿಸಿ ! – ದೆಹಲಿ ಉಚ್ಚ ನ್ಯಾಯಾಲಯದಿಂದ ಶಾಲೆಗಳಿಗೆ ಆದೇಶ

ಆನ್‌ಲೈನ್ ಶಿಕ್ಷಣಕ್ಕಾಗಿ ಲ್ಯಾಪ್‌ಟಾಪ್, ಸಂಚಾರವಾಣಿ, ಇಂಟರ್‌ನೆಟ್ ಇತ್ಯಾದಿಗಳು ಅಗತ್ಯವಿರುವುದರಿಂದ ಈ ಸೌಲಭ್ಯವನ್ನು ಸರಕಾರಿ ಹಾಗೂ ಖಾಸಗಿ ಶಾಲೆಗಳು ಬಡ ವಿದ್ಯಾರ್ಥಿಗಳಿಗೆ ಉಚಿತವಾಗಿ ಒದಗಿಸಬೇಕು, ಎಂದು ದೆಹಲಿ ಉಚ್ಚ ನ್ಯಾಯಾಲಯವು ಸಪ್ಟೆಂಬರ್ ೧೮ ರಂದು ಆದೇಶ ನೀಡಿದೆ.

ಮಡಗಾವ್ ಸ್ಫೋಟ ಪ್ರಕರಣದಲ್ಲಿ ಸನಾತನವು ನಿರಪರಾಧಿಯೆಂದು ಮತ್ತೊಮ್ಮೆ ಸಾಬೀತು !

ಗೋವಾದಲ್ಲಿ ಅಂದಿನ ಕಾಂಗ್ರೆಸ್ ಸರಕಾರವು ಮಡಗಾವ್ ಸ್ಫೋಟ ಪ್ರಕರಣದಲ್ಲಿ ಸನಾತನದ ೬ ಅಮಾಯಕ ಸಾಧಕರನ್ನು ಸಿಲುಕಿಸಲು ಪ್ರಯತ್ನಿಸಿತ್ತು. ನಾಲ್ಕು ವರ್ಷಗಳ ಕಾಲ ಕಾರಣವಿಲ್ಲದೇ ಜೈಲುವಾಸದ ನಂತರ, ಸತ್ರ ನ್ಯಾಯಾಲಯವು ಸನಾತನ ಎಲ್ಲ ಸಾಧಕರನ್ನು ನಿರಪರಾಧಿಯೆಂದು ಮುಕ್ತಗೊಳಿಸಿತ್ತು.

ರಾಷ್ಟ್ರೀಯ ತನಿಖಾ ದಳದಿಂದ ಬಂಗಾಲ ಹಾಗೂ ಕೇರಳದಿಂದ ‘ಅಲ್-ಕಾಯದಾ’ದ ೯ ಭಯೋತ್ಪಾದಕರ ಬಂಧನ

ರಾಷ್ಟ್ರೀಯ ತನಿಖಾ ದಳವು (‘ಎನ್.ಐ.ಎ.’ಯು) ಸಪ್ಟೆಂಬರ್ ೧೯ ರಂದು ಬೆಳಿಗ್ಗೆ ಬಂಗಾಲ ಹಾಗೂ ಕೇರಳ ರಾಜ್ಯಗಳಲ್ಲಿ ದಾಳಿ ಮಾಡಿ ಅಲ್ಲಿಂದ ‘ಅಲ್-ಕಾಯದಾ’ ಈ ಜಿಹಾದಿ ಭಯೋತ್ಪಾದಕ ಸಂಘಟನೆಯ ೯ ಭಯೋತ್ಪಾದಕರನ್ನು ಬಂಧಿಸಿದ್ದಾರೆ.